ಎಲ್ಲಿವರೆಗೂ ಜನ ಎಚ್ಚರವಾಗುವುದಿಲ್ಲವೋ, ಅಲ್ಲಿವರೆಗೂ ದೌರ್ಜನ್ಯಕ್ಕೆ ಕೊನೆಯಿಲ್ಲ: ಗಿರೀಶ್

| Published : May 05 2024, 02:09 AM IST

ಎಲ್ಲಿವರೆಗೂ ಜನ ಎಚ್ಚರವಾಗುವುದಿಲ್ಲವೋ, ಅಲ್ಲಿವರೆಗೂ ದೌರ್ಜನ್ಯಕ್ಕೆ ಕೊನೆಯಿಲ್ಲ: ಗಿರೀಶ್
Share this Article
  • FB
  • TW
  • Linkdin
  • Email

ಸಾರಾಂಶ

ಪೆನ್ ಡ್ರೈವ್ ವಿಚಾರವಾಗಿ ಸಾಕಷ್ಟು ಚರ್ಚೆಗಳು ನಡೆದು ಈಗಾಗಲೇ ತನಿಖೆ ಪ್ರಾರಂಭವಾಗಿದೆ. ನಮ್ಮ ದೇಶದಲ್ಲಿ ಪ್ರತಿ ೨೮ ನಿಮಿಷಕ್ಕೆ ಒಂದು ಮಹಿಳೆ ಮೇಲೆ ಅತ್ಯಚಾರ ನಡೆಯುತ್ತಿದೆ. ಈ ವಿಚಾರವಾಗಿ ಮಂಗಳೂರು ಜಿಲ್ಲೆ ಬೆಳ್ತಂಗಡಿ ತಾಲೂಕಿನಲ್ಲಿ ಕಳೆದ ೯ ತಿಂಗಳಿನಿಂದ ನಿರಂತರವಾಗಿ ಹೋರಾಟ ಮಾಡುತ್ತಿದ್ದರೂ ಇದುವರೆಗೂ ಯಾರೊಬ್ಬರೂ ಕೂಡಕಾ ಪ್ರಕರಣದ ಬಗ್ಗೆ ತಲೆಕೆಡಿಸಿಕೊಂಡಿಲ್ಲ.

ಕನ್ನಡಪ್ರಭ ವಾರ್ತೆ ಹಾಸನ

ದೌರ್ಜನ್ಯದ ವಿರುದ್ಧ ಎಲ್ಲಿವರೆಗೂ ಜನರು ಎಚ್ಚರವಾಗುವುದಿಲ್ಲವೋ, ಅಲ್ಲಿವರೆಗೂ ದೌರ್ಜನ್ಯ ಕೊನೆಯಾಗುವುದಿಲ್ಲ. ಜಿಲ್ಲೆಯ ವಿಡಿಯೋ ವಿಚಾರವಾಗಿ ಪ್ರಜ್ವಲ್ ರೇವಣ್ಣ ಅವರು ತಪ್ಪಿಸಿಕೊಂಡು ಹೋಗಿರುವುದಿಲ್ಲ. ಅವರು ಬೇಸಿಗೆ ಶಿಬಿರಕ್ಕೆ ಹೋಗಿದ್ದಾರೆ. ವಾಪಸ್ ಬರುವಷ್ಟರಲ್ಲಿ ಎಲ್ಲಾ ಟ್ರೈನಿಂಗ್ ಮುಗಿದಿರುತ್ತದೆ ಎಂದು ಸಾಮಾಜಿಕ ಕಾರ್ಯಕರ್ತ ಮತ್ತು ಸೌಜನ್ಯ ಸಮಿತಿಯ ಅಧ್ಯಕ್ಷ ಗಿರೀಶ್ ಮಟ್ಟಣ್ಣನವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ಅನ್ಯಾಯದ ವಿರುದ್ಧ ಜನರು ಎಲ್ಲಿಯವರೆಗೂ ಎದ್ದೇಳುವುದಿಲ್ಲವೋ, ಅಲ್ಲಿಯವರೆಗೂ ಅನ್ಯಾಯ ಅಂತ್ಯ ಕಾಣುವುದಿಲ್ಲ. ದಂಗೆ, ಹೋರಾಟ ಆಗುವವರೆಗೂ ಇಂತಹದು ಹಾಗೆಯೇ ಇರುತ್ತದೆ. ಉದಾಹರಣೆಯಾಗಿ ಪ್ರಜ್ವಲ್ ರೇವಣ್ಣರು ಈಗ ಬೇಸಿಗೆ ಶಿಬಿರಕ್ಕೆ ಹೋಗಿದ್ದಾರೆ. ಎಲ್ಲಿಯೂ ತಪ್ಪಿಸಿಕೊಂಡು ಹೋಗಿಲ್ಲ. ಅವರು ವಾಪಸ್ ಬರುವಷ್ಟರಲ್ಲಿ ಎಲ್ಲಾ ಸೆಟ್ಟಾಗಿರುತ್ತದೆ. ಮತ್ತೆ ಹರಕೆ ಹೊತ್ತುಕೊಳ್ಳುತ್ತಾರೆ. ಬೆಂಗಳೂರಿನವರೆಗೂ ಪಾದಯಾತ್ರೆ ಇಟ್ಟುಕೊಳ್ಳುತ್ತಾರೆ. ಅವರಿಗೆ ಒಂದು ಲುಕ್ ಔಟ್ ನೋಟೀಸ್ ಮಾತ್ರ ನೀಡಿದ್ದು, ಜನರನ್ನು ಮರಳು ಮಾಡಲಾಗುತ್ತಿದೆ, ಅವರು ಹೋಗಿರುವ ಶಿಬಿರದಲ್ಲಿ ಎಲ್ಲಾ ಟ್ರೈನಿಂಗ್ ಆಗಿರುತ್ತದೆ ಎಂದರು.

ಪೆನ್ ಡ್ರೈವ್ ವಿಚಾರವಾಗಿ ಸಾಕಷ್ಟು ಚರ್ಚೆಗಳು ನಡೆದು ಈಗಾಗಲೇ ತನಿಖೆ ಪ್ರಾರಂಭವಾಗಿದೆ. ನಮ್ಮ ದೇಶದಲ್ಲಿ ಪ್ರತಿ ೨೮ ನಿಮಿಷಕ್ಕೆ ಒಂದು ಮಹಿಳೆ ಮೇಲೆ ಅತ್ಯಚಾರ ನಡೆಯುತ್ತಿದೆ. ಈ ವಿಚಾರವಾಗಿ ಮಂಗಳೂರು ಜಿಲ್ಲೆ ಬೆಳ್ತಂಗಡಿ ತಾಲೂಕಿನಲ್ಲಿ ಕಳೆದ ೯ ತಿಂಗಳಿನಿಂದ ನಿರಂತರವಾಗಿ ಹೋರಾಟ ಮಾಡುತ್ತಿದ್ದರೂ ಇದುವರೆಗೂ ಯಾರೊಬ್ಬರೂ ಕೂಡಕಾ ಪ್ರಕರಣದ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಎಲ್ಲರೂ ಈಗ ಹಾಸನದ ಪ್ರಕರಣದ ಬಗ್ಗೆ ಮಾತನಾಡುತ್ತಿದ್ದು, ಆದರೆ ಹಾಸನ ಏನು ಮಾಡಿದೆ? ನಿಜವಾಗಿಯೂ ಯಾರು ಅಪರಾಧ ಮಾಡಿದ್ದಾರೆ ಅವರನ್ನು ಬಿಡುತ್ತಾರೆ. ಲೈಂಗಿಕ ವಿಚಾರವಾಗಿ ಎಸ್.ಐ.ಟಿ. ಪ್ರಾಮಾಣಿಕ ತನಿಖೆ ಮಾಡಬೇಕು. ಉತ್ತಮ ಅಧಿಕಾರಿಗಳಿದ್ದು, ಸೌಜನ್ಯ ಪ್ರಕರಣದಂತೆ ಸಾಕ್ಷಿ ನಾಶವನ್ನು ಇಲ್ಲಿಯೂ ಮಾಡಬಾರದು. ಈ ಪ್ರಕರಣ ನೋಡಿದರೆ ಸಂತ್ರಸ್ತರಿಗೆ ನ್ಯಾಯ ಕೊಡಿಸಬೇಕೆಂದು ಯಾರಿಗೂ ಅನ್ನಿಸುತ್ತಿಲ್ಲ. ಸಂತ್ರಸ್ತರಿಗೆ ನ್ಯಾಯ ಕೊಡಸಬೇಕು ಎಂಬ ಉದ್ದೇಶ ಇದ್ದಿದ್ದರೆ ವಿಡಿಯೋವನ್ನು ಬ್ಲರ್ ಮಾಡಲಾಗುತಿತ್ತು. ಇಲ್ಲಿ ಈ ಪ್ರಕರಣವನ್ನು ಇಟ್ಟುಕೊಂಡು ರಾಜಕೀಯ ನಡೆಸುತ್ತಿದ್ದಾರೆ. ಅದರ ಬದಲು ನಿಜವಾದ ಆರೋಪಿಗೆ ಶಿಕ್ಷೆ ವಿಧಿಸುವ ಮಾನದಂಡ ಆಗಬೇಕು ಎಂದರು.

ಬಹುಮುಖ್ಯವಾಗಿ ಇಲ್ಲಿನ ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಚುನಾವಣೆ ಸಂದರ್ಭದಲ್ಲಿ ಮಾತ್ರ ಧ್ವನಿ ಎತ್ತುವುದು ಮಹಿಳಾ ಆಯೋಗದ ಕೆಲಸವೇ ಎಂದು ಪ್ರಶ್ನಿಸಿದರು. ಸೌಜನ್ಯ ತಾಯಿ ಮಹಿಳಾ ಆಯೋಗದವರ ಸಹಾಯಕ್ಕಾಗಿ ಅಳಲು ತೋಡಿಕೊಂಡರೂ ಆಯೋಗ ಬರಲಿಲ್ಲ. ಅತ್ಯಚಾರವೆಂದರೆ ಜಿಲ್ಲೆಯಲ್ಲಿ ಇದೊಂದೇ ಪ್ರಕರಣವಲ್ಲ. ಇಂತಹ ಅನೇಕ ಪ್ರಕರಣಗಳಿದ್ದು, ಎಲ್ಲದಕ್ಕೂ ಧ್ವನಿ ಎತ್ತಲಿ ಎಂದು ಮನವಿ ಮಾಡಿದರು. ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆ ಶಿಕ್ಷೆ ಆಗುತ್ತಿಲ್ಲ. ಎಲ್ಲಿವರೆಗೂ ಪ್ರಭಾವಿಗಳಿಗೆ ಶಿಕ್ಷೆ ಆಗುವುದಿಲ್ಲವೋ, ಅಲ್ಲಿವರೆಗೂ ಇಂತಹ ಪ್ರಕರಣಗಳು ಮುಂದುವರೆಯುತ್ತಿರುತ್ತವೆ ಎಂದು ಬೇಸರ ವ್ಯಕ್ತಪಡಿಸಿದರು. ಸೌಜನ್ಯ ಕೇಸಿನ ತನಿಖೆ ವೇಳೆ ಮೂರು ತಿಂಗಳಲ್ಲಿ ನಾಲ್ಕು ಸಾಕ್ಷಿಯನ್ನು ಕೊಂದು ಹಾಕಿದ್ದಾರೆ. ಇಲ್ಲಿಯೂ ಕೂಡ ಅದೇ ರೀತಿ ಆಗುತ್ತದೆ ಎಂದು ದೂರಿದರು.

ಪತ್ರಿಕಾಗೋಷ್ಠಿಯಲ್ಲಿ ಜಯಂತ್, ಕನ್ನಡಪರ ಹೋರಾಟಗಾರ ವೆಂಕಟೇಶ್, ಅರುಣಾ ಭಾಸ್ಕರ್, ಅನು, ಸತೀಶ್ ಪಟೇಲ್ ಇತರರು ಉಪಸ್ಥಿತರಿದ್ದರು.