ಸಾರಾಂಶ
ಸ್ವಾತಂತ್ರ್ಯ ಬಂದು 75 ವರ್ಷಗಳೇ ಕಳೆದಿವೆ. ಆದರೂ ಸಮಾಜದಲ್ಲಿ ಇಂದಿಗೂ ಅಸ್ಪೃಶ್ಯತೆ ಜೀವಂತವಾಗಿರವುದು ದೇಶದ ದುರಂತ. ಅಸ್ಪೃಶ್ಯತೆ, ಜಾತಿ ವ್ಯವಸ್ಥೆಗಳು ಜೀವಂತ ಇರುವುದನ್ನು ಮಾಧ್ಯಮಗಳ ಮೂಲಕ ಅನಾವರಣ ಆಗುತ್ತಲೇ ಇವೆ ಎಂದು ಪುರಸಭೆ ಅಧ್ಯಕ್ಷ ಎ.ಕೆ. ಮೈಲಪ್ಪ ಹೇಳಿದ್ದಾರೆ.
- ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಬೀದಿನಾಟಕ ಕಾರ್ಯಕ್ರಮ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ
ಸ್ವಾತಂತ್ರ್ಯ ಬಂದು 75 ವರ್ಷಗಳೇ ಕಳೆದಿವೆ. ಆದರೂ ಸಮಾಜದಲ್ಲಿ ಇಂದಿಗೂ ಅಸ್ಪೃಶ್ಯತೆ ಜೀವಂತವಾಗಿರವುದು ದೇಶದ ದುರಂತ. ಅಸ್ಪೃಶ್ಯತೆ, ಜಾತಿ ವ್ಯವಸ್ಥೆಗಳು ಜೀವಂತ ಇರುವುದನ್ನು ಮಾಧ್ಯಮಗಳ ಮೂಲಕ ಅನಾವರಣ ಆಗುತ್ತಲೇ ಇವೆ ಎಂದು ಪುರಸಭೆ ಅಧ್ಯಕ್ಷ ಎ.ಕೆ. ಮೈಲಪ್ಪ ಹೇಳಿದರು.ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ತಾಲೂಕು ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ಪುರಸಭೆ ಆಶ್ರಯದಲ್ಲಿ ಅಸ್ಪೃಶ್ಯತಾ ನಿವಾರಣೆ ವಿಚಾರಗೋಷ್ಠಿ ಕಾರ್ಯಾಗಾರದ ಬೀದಿನಾಟಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಸ್ಪೃಸ್ಯತೆ ನಿರ್ಮೂಲನೆ ಮಾಡಲು ಸಮಾನತೆ ಸಾರಲು ಸರ್ಕಾರ ಇಂತಹ ಸಭೆ, ಸಮಾರಂಭಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿವೆ. ಕೆಲವು ಕಡೆ ಅಸ್ಪೃಶ್ಯರು ದೇವಸ್ಥಾನಕ್ಕೆ ಭೇಟಿ ನೀಡುತ್ತಿರುವುದನ್ನು ನಿರ್ಬಂಧಿಸುವ ಪ್ರಕರಣಗಳು ನಡೆಯುತ್ತಿವೆ. ಅಧುನಿಕತೆಯಲ್ಲಿ ಸಮಾನ ಸಮಾಜಕ್ಕೆ ಹೆಚ್ಚು ಆದ್ಯತೆ ನೀಡಬೇಕಾಗಿದೆ ಎಂದರು.ವಕೀಲ ಎಂ.ಬಿ.ದೊರೆಸ್ವಾಮಿ "ನಮ್ಮ ನಡೆ ಅಸ್ಪೃಶ್ಯತೆ ನಿರ್ಮೂಲನದ ಕಡೆ " ವಿಚಾರಗೋಷ್ಠಿ ಕಾರ್ಯಾಗಾರದಲ್ಲಿ ಅಸ್ಪೃಶ್ಯತೆ ನಿವಾರಣೆ ಬಗ್ಗೆ ಉಪನ್ಯಾಸ ನೀಡಿದರು. ರೂಪದರ್ಶಿ ಕಲಾ ತಂಡದ ಮಲ್ಲಿಕಾರ್ಜನ ಸ್ವಾಮಿ, ಕತ್ತಿಗೆ ನಾಗರಾಜ, ಎ.ಜಿ.ಸುನಂದ, ರಂಗನಾಥ್, ಶಿವಕುಮಾರ, ನಾಗರಾಜ, ಬಾನಪ್ಪ, ರುದ್ರೇಶ್, ಸುಲೋಚನಮ್ಮ, ತಂಡದಿಂದ ಅಸ್ಪೃಶ್ಯತಾ ನಿವಾರಣೆ ಬಗ್ಗೆ ಬೀದಿನಾಟಕದ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಪ ತಹಸೀಲ್ದಾರ್ ಸುರೇಶ್ ವಹಿಸಿದ್ದರು. ಅತಿಥಿಗಳಾದ ತಾಪಂ ಇಒ ಪ್ರಕಾಶ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿದೇರ್ಶಕಿ ಉಮಾ, ಪುರಸಭೆ ಮುಖ್ಯಾಧಿಕಾರಿ ಲೀಲಾವತಿ, ಬಂಜಾರ ಸಮಾಜ ತಾಲೂಕು ಅಧ್ಯಕ್ಷ ಅಂಜು ನಾಯ್ಕ, ರಾಜಪ್ಪ, ಉಮಾದೇವಿ, ಸುರೇಶ್, ಮಂಜುಳಾ, ಸುಶೀಲಮ್ಮ, ರಾಧ, ಆನಂದ, ಗಿರೀಶ್, ಜಯಶೀಲ ವಿದ್ಯಾರ್ಥಿ ನಿಲಯ ಪಾಲಕರು, ಸಾರ್ವಜನಿಕರು ಇದ್ದರು.- - - -13ಎಚ್.ಎಲ್.ಐ2.ಜೆಪಿಜಿ:
ಹೊನ್ನಾಳಿ ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ನಡೆದ ಬೀದಿನಾಟಕ ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷ ಮೈಲಪ್ಪ ಮಾತನಾಡಿದರು.