ಬಸವಾದಿ ಶರಣರ ಸ್ವಾನುಭಾವಗಳ ಅನಾವರಣ

| Published : Jan 19 2025, 02:18 AM IST

ಸಾರಾಂಶ

Unveiling of Basavadi Sharan's Selfishness

-ಮುರುಘಾಮಠದ ಅನುಭವ ಮಂಟಪದಲ್ಲಿ 13ನೇ ಶರಣಸಾಹಿತ್ಯ ಸಮ್ಮೇಳನ । ಪರಿಷತ್ ಧ್ವಜಾರೋಹಣ ನೆರವೇರಿಸಿದ ಶಿವಯೋಗಿ ಕಳಸದ, ಡಾ.ಸಿ.ಸೋಮಶೇಖರ್

------

ಕನ್ನಡಪ್ರಭವಾರ್ತೆ ಚಿತ್ರದುರ್ಗ

ಮುರುಘಾಮಠದ ಅನುಭವ ಮಂಟಪದಲ್ಲಿ ಆರಂಭಗೊಂಡ 13ನೇ ಶರಣ ಸಾಹಿತ್ಯ ಸಮ್ಮೇಳನ ಬಸವಾದಿ ಶರಣರ ಸ್ವಾನುಭಾವಗಳ ಅನಾವರಣಗೊಂಡಿತು. ಸಮ್ಮೇಳನಾಧ್ಯಕ್ಷ ಸಿದ್ದರಾಮ ಬೆಲ್ದಾಳ ಶರಣರ ಅಧ್ಯಕ್ಷೀಯ ನುಡಿಗಳು ದಿನವಿಡೀ ಸಮೂಹವ ಆವರಿಸಿತು.

ಮೌಲ್ಯಗಳ ಮರೆಯಾಗುತ್ತಿರುವ ಇಂದಿನ ಅವಧಿಯಲ್ಲಿ ಮಹಾಮೌಲಿಕ ಶರಣಸಾಹಿತ್ಯ ಜ್ಞಾನ ಅತ್ಯಂತ ಅವಶ್ಯಕ ಎಂದು ಮಾತು ಆರಂಭಿಸಿದ ಸಿದ್ದರಾಮ ಬೆಲ್ದಾಳ ಶರಣರು, ಶರಣ ಸಾಹಿತ್ಯ ವೇದಾಗಮ ಪುರಾಣಾದಿ ಪುರಾತನ ಸಂಸ್ಕೃತ ಸಾಹಿತ್ಯ ಪ್ರೇರಿತವಲ್ಲ. ಅದು ಅಪ್ಪಟ ಶರಣರ ಸ್ವಾನುಭಾವವಾಗಿದೆ. ಈ ವಚನಗಳು ರಾಜರ ಆಸ್ಥಾನದ ಪಂಡಿತರಿಂದಾದುದಲ್ಲ. ರಾಜಮಹರಾಜರ ಪೋಷಿತವಲ್ಲ. ಪಂಡಿತ, ಪುರೋಹಿತ ವರ್ಗ ರಚಿತವಲ್ಲ. ಕೃಷಿಕ, ಕಾರ್ಮಿಕ, ಕಾಯಕ ಜೀವಿಗಳಾದ ದನ, ಕುರಿ ಕಾಯುವವವರು, ಬಟ್ಟೆ ತೊಳೆಯುವವರು, ಮೆಟ್ಟು ಮಾಡುವವರು, ಕಟ್ಟಿಗೆ ಕೆತ್ತುವ, ಮಡಿಕೆ ಮಾಡುವರೂ ಸೇರಿದಂತೆ ಕಾಯಕ ಜೀವಿಗಳಿಂದ ರಚಿತವಾದ ಸ್ವಾನುಭಾವದ ಸಾಹಿತ್ಯ ಎಂದು ಶ್ರಮ ಸಂಸ್ಕೃತಿಯ ಹರವಿದರು.

ಶರಣ ಸಾಹಿತ್ಯದಲ್ಲಿ ಪ್ರತಿಯೊಬ್ಬರಿಗೂ ಸಮಾನ ಹಕ್ಕುಗಳಿವೆ. ಸಂವಿಧಾನದ ಬೇರುಗಳಿವೆ. ಇದರಲ್ಲಿ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರರೆಂಬ ವರ್ಣ ಭೇದವಿಲ್ಲ. ಬ್ರಹ್ಮಚರ್ಯ, ಗೃಹಸ್ತ, ಸನ್ಯಾಸ, ವಾನಪ್ರಸ್ಥವೆಂಬ ಆಶ್ರಮ ಭೇದಗಳಿಲ್ಲ. ಅಂತ್ಯಜ, ಅಗ್ರಜನೆಂಬ ಕುಲಭೇದಗಳಿಲ್ಲ. ಜಾತಿ ಮೊದಲಿಲ್ಲ, ಸ್ತ್ರೀ- ಪುರುಷರೆಂಬ ಲಿಂಗಭೇದಗಳಿಲ್ಲ. ಬದುಕಿನ ಮಹಾ ಮೌಲ್ಯಗಳಿವೆ. ಸತ್ಯ ಶುದ್ಧ ಸಂತೃಪ್ತ ಬದುಕಿಗೆ ಮಾರ್ಗದರ್ಶಿಯಾಗಿವೆ ಎಂದು ಮಾನವೀಯ ಮೌಲ್ಯಗಳ ಪ್ರತಿಪಾದಿಸಿದರು.

ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮಿಗಳು ಮಾತನಾಡಿ, ಬಸವಣ್ಣನವರ ಆಚಾರ ವಿಚಾರಗಳನ್ನು ಅಳವಡಿಸಿಕೊಂಡು ಅರ್ಥಪೂರ್ಣ ಜೀವನ ಮಾಡುವುದು ಎಲ್ಲರ ಕರ್ತವ್ಯವಾಗಿದೆ.ಎಂದರು.

ಬಾಲ್ಕಿ ಹಿರೇಮಠ ಸಂಸ್ಥಾನದ ಡಾ.ಬಸವಲಿಂಗ ಪಟ್ಟದೇವರು ಮಾತನಾಡಿ, ವಚನಗಳು ಜೀವನದ ಮೌಲ್ಯಗಳಿದ್ದಂತೆ ಅವುಗಳನ್ನು ಅಳವಡಿಸಿಕೊಂಡು ಉತ್ತಮ ಸಮಾಜ ನಿರ್ಮಾಣಕ್ಕೆ ಕಾರಣಕರ್ತರಾಗಬೇಕು ಎಂದರು.

ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಹಾಗೂ ಹಿರಿಯ ಸಾಹಿತಿ ಡಾ.ಎಸ್.ಆರ್.ಗುಂಜಾಳ ಮಾತನಾಡಿ, ಶರಣ ಸಾಹಿತ್ಯ ಸಮ್ಮೇಳನ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರ ಆಶಯಗಳಂತೆ ಹಮ್ಮಿಕೊಳ್ಳಲಾಗಿದೆ. ಶರಣರ ವಚನಗಳನ್ನು ಪಾಲಿಸಿ ಒಳ್ಳೆಯ ಜೀವನ ನಡೆಸುವ ತುರ್ತು ಅಗತ್ಯವಿದೆ ಎಂದರು.

ಮೆರವಣಿಗೆ: ಸಮ್ಮೇಳನಾಧ್ಯಕ್ಷ ಸಿದ್ದರಾಮ ಬೆಲ್ದಾಳ ಶರಣರ ಭವ್ಯ ಮೆರವಣಿಗೆ ನಡೆಯಿತು. ಸಾರೋಟ್ ನಲ್ಲಿ ಬೆಲ್ದಾಳರ ಕುಳ್ಳರಿಸಿ ನಡೆದ ಮೆರವಣಿಗೆಯಲ್ಲಿ ಹರಗುರು ಚರಮೂರ್ತಿಗಳು, ರಾಜ್ಯ ದ ವಿವಿಧ ಮೂಲೆಗಳಿಂದ ಆಗಮಿಸಿದ್ದ ಶರಣ ಪ್ರತಿನಿಧಿಗಳು, ಎಸ್ ಜೆಎಂ ವಿದ್ಯಾಪೀಠದ ವಿವಿಧ ಶಾಲಾ-ಕಾಲೇಜುಗಳ ಮುಖ್ಯಸ್ಥರು, ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ನಾಡೋಜ ರೀ ಗೊ.ರು.ಚನ್ನಬಸಪ್ಪ, ಹಿರಿಯ ಸಾಹಿತಿ ಎಸ್.ಆರ್ ಗುಂಜಾಳ್, ರಾಜನಹಳ್ಳಿ ಶ್ರೀ ವಾಲ್ಮೀಕಿ ಗುರುಪೀಠದ ಜಗದ್ಗುರು ಪ್ರಸನ್ನಾನಂದ ವಾಲ್ಮೀಕಿ ಸ್ವಾಮಿಗಳು, ಹೆಬ್ಬಾಳು ರೀ ರುದ್ರೇಶ್ವರ ವಿರಕ್ತಮಠದ ಮಹಾಂತರುದ್ರೇಶ್ವರ ಮಹಾಸ್ವಾಮಿಗಳು, ರಾವಂದೂರು ಮುರುಘರಾಜೇಂದ್ರ ವಿರಕ್ತಮಠದ ಮೋಕ್ಷಪತಿ ಸ್ವಾಮಿಗಳು, ಮಡಿವಾಳ ಮಾಚಿದೇವ ಗುರುಪೀಠದ ಬಸವ ಮಾಚಿದೇವ ಸ್ವಾಮಿಗಳು, ಅಥಣಿ ಗಚ್ಚಿನಮಠದ ಶ್ರೀ ಶಿವಬಸವ ಗುರುಮುರುಘರಾಜೇಂದ್ರ ಸ್ವಾಮಿಗಳು, ಬ್ಯಾಡಗಿ ಮುಪ್ಪಿನಸ್ವಾಮಿ ವಿರಕ್ತಮಠದ ಚನ್ನಮಲ್ಲಿಕಾರ್ಜುನ ಸ್ವಾಮಿಗಳು, ಸಿದ್ದಯ್ಯನಕೋಟೆಯ ಬಸವಲಿಂಗ ಸ್ವಾಮಿಗಳು, ಶಿಕಾರಿಪುರ ರೀ ಮುರುಘಾಮಠದ ಚನ್ನಬಸವ ಸ್ವಾಮಿಗಳು, ಮಾಜಿ ಸಚಿವ ಎಸ್ ಎಸ್ ಪಾಟೀಲ್, ಡಾ.ಬಸವಪ್ರಭುಸ್ವಾಮಿಗಳು, ಡಾ.ಬಸವಕುಮಾರ ಸ್ವಾಮಿಗಳು, ಎಸ್ ಎನ್ ಚಂದ್ರಶೇಖರ್, ಹರಚರ-ಗುರುಮೂರ್ತಿಗಳು ಇದ್ದರು.

---------------------

ಪೋಟೋ ಕ್ಯಾಪ್ಸನ್

ಶರಣ ಸಾಹಿತ್ಯ ಸಮ್ಮೇಳನದ ಅಂಗವಾಗಿ ಆಯೋಜಿಸಲಾದ ಪರಿಷತ್ ಧ್ವಜಾರೋಹಣವ ಶಿವಯೋಗಿ ಕಳಸದ ನೆರವೇರಿಸಿದರು.

---------

ಫೋಟೋ ಪೈಲ್ ನೇಮ್- 18 ಸಿಟಿಡಿ3

---

ಸಮ್ಮೇಳನಾಧ್ಯಕ್ಷ ಸಿದ್ದರಾಮ ಬೆಲ್ದಾಳ ಶರಣರ ಸಾರೋಟ್ ನಲ್ಲಿಕೂರಿಸಿ ಮೆರವಣಿಗೆ ನಡೆಸಲಾಯಿತು.

-------

ಫೋಟೋ ಫೈಲ್ ನೇಮ್- 18 ಸಿಟಿಡಿ 4--

---