ಕನ್ನಡಾಂಬೆ ಭುವನೇಶ್ವರಿ ಹಾಗೂ ಅನ್ನದಾತನ ಸ್ಮರಣೆಗಾಗಿ ನೇಗಿಲದಿಂದ ಉಳುಮೆ ಮಾಡುತ್ತಿರುವ ನೇಗಿಲಯೋಗಿಯ ಚಿತ್ರಗಳು ಮನಸೊರೆಗೊಳ್ಳುತ್ತಿವೆ.

ಕನಕಗಿರಿ: ಸಚಿವ ಶಿವರಾಜ ತಂಗಡಗಿ ಬಿಡುಗಡೆಗೊಳಿಸಿರುವ ಕನಕಗಿರಿ ತಾಲೂಕು ಮಟ್ಟದ 2ನೇ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನದಲ್ಲಿ ತಾಲೂಕಿನ ಇತಿಹಾಸ, ಪರಂಪರೆ, ಸಂಸ್ಕೃತಿಯನ್ನು ಎತ್ತಿ ಹಿಡಿಯುವಂತಿದೆ.

ವಿಜಯನಗರ ಸಾಮ್ರಾಜ್ಯದ ಮಾಂಡಲೀಕ ಅರಸರ ಆಳ್ವಿಕೆಯಲ್ಲಿ ನಿರ್ಮಾಣಗೊಂಡಿರುವ ಶ್ರೀ ಕನಕಾಚಲಪತಿ ದೇಗುಲದ ಮುಖ್ಯ ಗೋಪುರ, ಕಲಾತ್ಮಕ ವೆಂಕಟಪ್ಪ ಬಾವಿ, ಹುಲಿಹೈದರ ಸಂಸ್ಥಾನದ ರಾಜ ವಾಡೆ, ಕನಕಾಚಲಪತಿ ಮಹಾರಥ, ಹೈದರಾಬಾದ್ ನಿಜಾಮನ ಕಾಲದಿಂದಲೂ ಅಕ್ಷರ, ಅನ್ನ ಹಾಗೂ ಆಶ್ರಯಕ್ಕೆ ಹೆಸರುವಾಸಿಯಾಗಿರುವ ಸುವರ್ಣಗಿರಿ ಸಂಸ್ಥಾನ ವಿರಕ್ತ ಮಠದ ಭಾವಚಿತ್ರಗಳು ಲಾಂಛನದ ಮೆರಗು ಹೆಚ್ಚಿಸಿದೆ. ಕನ್ನಡಾಂಬೆ ಭುವನೇಶ್ವರಿ ಹಾಗೂ ಅನ್ನದಾತನ ಸ್ಮರಣೆಗಾಗಿ ನೇಗಿಲದಿಂದ ಉಳುಮೆ ಮಾಡುತ್ತಿರುವ ನೇಗಿಲಯೋಗಿಯ ಚಿತ್ರಗಳು ಮನಸೊರೆಗೊಳ್ಳುತ್ತಿವೆ. ಅರ್ಥಪೂರ್ಣವಾಗಿರುವ ಲಾಂಛನದ ಮಹತ್ವದ ಕುರಿತು ಕನ್ನಡದ ಮನಸ್ಸುಗಳಿಗೆ ಹಾಗೂ ಸಾಹಿತ್ಯಾಸಕ್ತರಿಗೆ ಉಲ್ಲಾಸ ತರಿಸಿದೆ.

ಕನಕಗಿರಿ ತಾಲೂಕು ಮಟ್ಟದ 2ನೇ ಸಾಹಿತ್ಯ ಸಮ್ಮೇಳನ ಲಾಂಛನ ಅದ್ಭುತವಾಗಿದೆ. ಅನ್ನದಾತ, ತಾಯಿ ಭುವನೇಶ್ವರಿ ಹಾದಿಯಾಗಿ ಕನಕಗಿರಿಯ ಇತಿಹಾಸ, ಸಂಸ್ಕೃತಿ, ಪರಂಪರೆ, ನೆಲ. ಜಲವನ್ನು ಕಟ್ಟಲಾಗಿದೆ. ವಿಶೇಷವಾಗಿ ಕೃಷ್ಣ, ತುಂಗಭದ್ರೆ ನೀರಿನಿಂದ ಕೆರೆಗಳ ಒಡಲು ಭರ್ತಿಯಾಗಿರುವ ಚಿತ್ರ ನೋಡಿ ಖುಷಿಯಾಗಿದೆ ಎಂದು ಸಚಿವ ಶಿವರಾಜ ತಂಗಡಗಿ ತಿಳಿಸಿದ್ದಾರೆ.