ಸಾರಾಂಶ
-ಶ್ರೀನಿವಾಸ ಗಟ್ಟು ಅಭಿಮತ । ಸಾಹಿತಿ ವೀರಹನುಮಾನ ಅವರ ''''ನಮ್ಮ ಎಡೆದೊರೆ ನಾಡು'''' ಕೃತಿ ಲೋಕಾರ್ಪಣೆ ಕಾರ್ಯಕ್ರಮ
-----ಕನ್ನಡಪ್ರಭ ವಾರ್ತೆ ರಾಯಚೂರು
ಜಿಲ್ಲೆಯ ಕೋಟೆ ಕೊತ್ತಲಗಳು ಚರಿತ್ರೆಯಲ್ಲಿ ಹೆಸರುವಾಸಿಯಾಗಿವೆ. ಇಲ್ಲಿನ ಇತಿಹಾಸವನ್ನು ಅನಾವರಣ ಕೆಲಸ ಆಗಬೇಕಿದ್ದು ಮುಖ್ಯವಾಗಿ ವಿದ್ಯಾರ್ಥಿಗಳು ಇತಿಹಾಸ ಅರಿಯಬೇಕು ಎಂದು ಕರ್ನಾಟಕ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಗಟ್ಟು ಹೇಳಿದರು.ಸ್ಥಳೀಯ ಬಾಲಕಿಯರ ಸರ್ಕಾರಿ ಪಪೂ ಕಾಲೇಜಿನಲ್ಲಿ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಇತಿಹಾಸ ಉಪನ್ಯಾಸಕರ ಸಂಘ ಮತ್ತು ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಇವರ ಸಹಯೋಗದಲ್ಲಿ ರಾಯಚೂರು ಕೋಟೆಯ 730ನೇ ವರ್ಷದ ದಿನಾಚರಣೆ ಅಂಗವಾಗಿ ಸೋಮವಾರ ಹಮ್ಮಿಕೊಂಡಿದ್ದ ಸಾಹಿತಿ ವೀರಹನುಮಾನ ಅವರ ''''ನಮ್ಮ ಎಡೆದೊರೆ ನಾಡು ಕೃತಿ'''' ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪುಸ್ತಕ ಪರಿಚಯಿಸಿ ಮಾತಾಡಿದರು, ವಿದ್ಯಾರ್ಥಿಗಳಿಗೆ ನಮ್ಮ ಎಡೆದೊರೆ ನಾಡು ಪುಸ್ತಕ ಉಪಯೋಗ ಆಗುವುದು. ಕೃತಿ ಚಿಕ್ಕದಾಗಿ ಜಿಲ್ಲೆಯ ಇತಿಹಾಸ ತೆರೆದಿಡುತ್ತದೆ. ವರ್ತಮಾನದಲ್ಲಿ ನಿಂತು ಇತಿಹಾಸದ ಬಗ್ಗೆ ಆಲೋಚನೆ ಮಾಡಬೇಕು. ಹಿಂದಿನ ವೈಭವವನ್ನು ಈ ಕೃತಿ ಸ್ಮರಿಸುತ್ತದೆ ಎಂದರು.
ಕೃತಿ ಲೋಕಾರ್ಪಣೆ ಮಾಡಿ, ಮಾತನಾಡಿದ ಸಂಘದ ಅಧ್ಯಕ್ಷ ನರಸಪ್ಪ ಭಂಡಾರಿ ಅವರು, ರಾಯಚೂರು ನಗರ ಮತ್ತು ಜಿಲ್ಲೆಯು ತನ್ನದೇ ಆದಂತಹ ಇತಿಹಾಸವನ್ನು ಹೊಂದಿದ್ದು, ಇಂದಿಗೂ ಕೋಟೆಗಳು ಅದನ್ನು ಬಿಂಬಿಸುವ ಕೆಲಸವನ್ನು ಮಾಡುತ್ತಿವೆ. ಇಂತಹ ಕೋಟೆಗಳ ಕುರಿತು ಜಾಗೃತಿ ಮೂಡಿಸುವ ಕೆಲಸವನ್ನು ಕೋಟೆ ಅಧ್ಯಯನ ಸಂಘವು ಹಲವಾರು ರೀತಿಯಲ್ಲಿ ಮಾಡುತ್ತಿದೆ. ಇತಿಹಾಸ ಉಪನ್ಯಾಸಕರ ಸಂಘವು ಸಹ ವಿದ್ಯಾರ್ಥಿಗಳಲ್ಲಿ ಇತಿಹಾಸ ತಿಳಿಸುವುದರ ಜೊತೆಗೆ ಕೋಟೆಗಳನ್ನು ಪರಿಚಯಿಸುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಿದ್ದು, ಇತಿಹಾಸದಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಮುಂದಿನ ದಿನಗಳಲ್ಲಿ ಸಂಘದಿಂದ, ಸನ್ಮಾನಿಸಿ ಪ್ರೋತ್ಸಾಹಿಸುವಲ್ಲಿ ಚಿಂತನೆ ನಡೆಸುತ್ತಿರುವುದಾಗಿ ತಿಳಿಸಿದರು.ಲೇಖಕ ವೀರಹನುಮಾನ, ಪ್ರಕಾಶಕ ಮಲ್ಕಪ್ಪ ಪಾಟೀಲ್, ಎಚ್ ಎಚ್ ಮ್ಯಾದಾರ್ ಮಾತಾಡಿದರು. ಕಾರ್ಯಕ್ರಮದಲ್ಲಿ ಆಂಜನೇಯ ಜಾಲಿಬೆಂಚಿ, ರಸೂಲ್ ಸಾಬ್, ವಿ.ಎನ್. ಅಕ್ಕಿ, ಬಸವರಾಜ ಗಾಣಧಾಳ, ಮಹಾದೇವ ಪಾಟೀಲ್, ಅಯ್ಯಪ್ಪಯ್ಯ ಹುಡಾ, ಗೌಸ್ ಪೀರಜಾದೆ, ಬಶೀರ್ ಅಹ್ಮದ್ ಹೊಸಮನಿ, ನವಲಕಲ್ ಶ್ರೀನಿವಾಸ, ಅಮರೇಶ ಆದೋನಿ, ಸೈಯದ್ ಹಫಿಜುಲ್ಲಾ, ಈರಣ್ಣ ಬೆಂಗಾಲಿ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. ನಿರೂಪಣೆಯನ್ನು ಮಂಜುನಾಥ ಐಲಿ ಮಾಡಿದರು.
----------------------ಫೋಟೊ: 25ಕೆಪಿಆರ್‌ಸಿಆರ್ 01
ರಾಯಚೂರು ನಗರದ ಬಾಲಕಿಯರ ಸರ್ಕಾರಿ ಪಪೂ ಕಾಲೇಜಿನಲ್ಲಿ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಇತಿಹಾಸ ಉಪನ್ಯಾಸಕರ ಸಂಘ ಮತ್ತು ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಇವರ ಸಹಯೋಗದಲ್ಲಿ ರಾಯಚೂರು ಕೋಟೆಯ 730 ನೇ ವರ್ಷದ ದಿನಾಚರಣೆ ಅಂಗವಾಗಿ ಸಾಹಿತಿ ವೀರಹನುಮಾನ ಅವರ ನಮ್ಮ ಎಡೆದೊರೆ ನಾಡು ಕೃತಿ ಲೋಕಾರ್ಪಣಾ ಸಮಾರಂಭವು ನಡೆಯಿತು.