ಸಾರಾಂಶ
ಕನ್ನಡಪ್ರಭ ವಾರ್ತೆ ಎಚ್.ಡಿ. ಕೋಟೆಎಚ್.ಡಿ. ಕೋಟೆ ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ಬುಧವಾರ ಕೊಡಸೀಗೆ ಶ್ರೀ ಮಹದೇಶ್ವರ ಸ್ವಾಮಿ ದೇವಸ್ಥಾನ ತೆರವಿಗಾಗಿ ತಹಸೀಲ್ದಾರ್ ಶ್ರೀನಿವಾಸ್ ಅವರ ನೇತೃತ್ವದಲ್ಲಿ ಅಧಿಕಾರಿಗಳು ಮತ್ತು ಗ್ರಾಮಸ್ಥರ ಸಮ್ಮುಖದಲ್ಲಿ ನಡೆದ ಶಾಂತಿ ಸಭೆ ವಿಫಲವಾಯಿತು. ಐದು ವರ್ಷಗಳಿಂದ ಕೊಡಸೀಗೆ ಗ್ರಾಮದವರು ನಮಗೆ ಪೂಜಾರಿ ಬೇಡ ಅವನು ಮಾಟ ಮಂತ್ರ ಮಾಡುತ್ತಾನೆ. ಬಾಲ್ಯವಿವಾಹ ಮಾಡಿಸುತ್ತಾನೆ ಮತ್ತು ಬಡ್ಡಿ ವ್ಯವಹಾರ ನಡೆಸುತ್ತಾನೆ ಎಂದು ಆರೋಪಿಸಿ ಉಳಿದ ನಾಲ್ಕೈದು ಗ್ರಾಮದವರಿಗೆ ಯಾವುದೇ ಮಾಹಿತಿ ನೀಡದೇ ದೇವಸ್ಥಾನದಲ್ಲಿ ಗೊಂದಲ ಮೂಡಿಸಿದ್ದು, ಈ ವಿಚಾರವಾಗಿ ಹಲವಾರು ಭಾರಿ ಅಧಿಕಾರಿಗಳು ಮತ್ತು ಶಾಸಕರ ನೇತೃತ್ವದಲ್ಲಿ ಸಂಧಾನ ಸಭೆ ನಡೆದು ವಿಫಲವಾಗಿ ಕೊನೆಗೆ ತಾಲೂಕು ಆಡಳಿತ ಮುಜರಾಯಿ ಇಲಾಖೆ ವತಿಯಿಂದ ದೇವಸ್ಥಾನಕ್ಕೆ ಬೀಗ ಹಾಕಲಾಗಿತ್ತು. ಈ ಹಿನ್ನೆಲೆ ಕೊಡಸೀಗೆ ಗ್ರಾಮಸ್ಥರು ಮುಜರಾಯಿ ಸಚಿವರಿಗೆ ಮನವಿ ಸಲ್ಲಿಸಿದ್ದು. ಸಚಿವರು, ಜಿಲ್ಲಾಧಿಕಾರಿ ಮೂಲಕ ಸಮಸ್ಯೆಯನ್ನು ಇತ್ಯರ್ಥ ಪಡಿಸಲು ಸೂಚಿಸಿದ್ದು, ಈ ಸೂಚನೆಯ ಮೇರೆಗೆ ತಹಸೀಲ್ದಾರ ಶ್ರೀನಿವಾಸ್ ಅವರು ದೇವಸ್ಥಾನ ವ್ಯಾಜ್ಯಕ್ಕೆ ಸಂಬಂಧಿಸಿದ ಗ್ರಾಮಸ್ಥರನ್ನು ಕರೆದು ಸಂಧಾನ ಸಭೆಯನ್ನು ನಡೆಸಲಾಯಿತು.ಸಭೆಯಲ್ಲಿ ಕೊಡಸೀಗೆ ಗ್ರಾಮಸ್ಥರು ಮತ್ತೆ ಈಗಿರುವ ಪೂಜಾರಿ ನಮಗೆ ಬೇಡ ಎಂದು ವಾದಿಸಿದರೇ, ಹೈರಿಗೆ, ಮಲಾರ ಕಾಲೋನಿ. ಮದಾಪುರ ಗ್ರಾಮಸ್ಥರು ಯಾವುದೇ ತನಿಖೆ ನಡೆಸದೇ ಮತ್ತೆ ನಮ್ಮ ಗಮನಕ್ಕೆ ಯಾವುದೇ ದೂರನ್ನ ತಾರದೇ ನೀವು ಏಕಾಏಕಿ ಹೇಗೆ ತೆಗುಯುತ್ತೀರಿ..? ನೀವು ಒಂದು ಗ್ರಾಮದವರು ಆರೋಪಿಸಿರುವ ವಿಷಯವಾಗಿ ತನಿಖೆಯಾಗಲಿ ನಂತರ ಇಲಾಖೆ ತಿರ್ಮಾನ ಮಾಡುತ್ತದೆ ಎಂದು ಆರೋಪ ಪ್ರತ್ಯಾರೋಪದ ನಡುವೆ ಹೊಂದಾಣಿಕೆ ಬಾರದೆ ಬಿಹಿ ಪಟ್ಟು ಹಿಡಿದ ಪರಿಣಾಮ ಮತ್ತೆ ದೇವಸ್ಥಾನಕ್ಕೆ ಬೀಗ ಹಾಕಲು ತಾಲೂಕು ಆಡಳಿತ ಮುಂದಾಯಿತು. ಅಂತಿಮವಾಗಿ ತಹಸೀಲ್ದಾರ ಶ್ರೀನಿವಾಸ್ ಮಾತನಾಡಿ, ಸಭೆಯಲ್ಲಿ ತಿಳಿಸಿರುವ ವಿಷಯಗಳನ್ನ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಅವರ ಸೂಚನೆ ಮೇರೆಗೆ ಮುಂದಿನ ಕ್ರಮ ಜರುಗಿಸಲಾಗುವುದು ಅಲ್ಲಿಯ ತನಕ ಪ್ರತಿಯೊಬ್ಬರೂ ಶಾಂತಿಯುತ ಇರುವಂತೆ ತಿಳಿಸಿದರು. ಸಭೆಯಲ್ಲಿ ಎಸ್ಐ ಪ್ರಕಾಶ್. ಗ್ರೇಡ್ ೨ ತಹಶಿಲ್ದಾರ ಶ್ರೀಧರ್. ಮುಜರಾಯಿ ಶಿರಸ್ತೆದಾರ್ ಸಿದ್ದರಾಜು. ಆರ್ ಐ ವಿಶ್ವನಾಥ. ಗ್ರಾಮಾಲೆಕ್ಕಾಧಿಕಾರಿ ಪುನೀತ್. ಮಲಾರ ಗ್ರಾಮದ ಪುಟ್ಟಯ್ಯ. ಮಹದೇವ್. ಕುಮಾರ್. ಮಲ್ಲೇಶ್. ರಾಜಣ್ಣ. ಹೈರಿಗೆ ಗ್ರಾಮದ ಶಿವರಾಜ್. ಮಲ್ಲೇಶ್. ಮಾದಯ್ಯ. ರಾಮು. ಶಿವಣ್ಣ. ಕಾಳಯ್ಯ. ಸೋಮಣ್ಣ. ಮದಾಪುರ ಕುಮಾರಸ್ವಾಮಿ. ಮಂಚಯ್ಯ. ಕೊಡಸೀಗೆ ಶಂಭುಗೌಡ. ನಾಗರಾಜೇಗೌಡ. ಉಮೇಶ. ಕುಮಾರಸ್ವಾಮಿ. ಚಿಕ್ಕಪುಟ್ಟೆಗೌಡ. ಕೆಂಪೇಗೌಡ. ಭದ್ರೇಗೌಡ ಮತ್ತು ಜೀವಿಕ ಬಸವರಾಜ್. ನರಸಿಂಹೇಗೌಡ ಭಾಗವಹಿಸಿದ್ದರು.