ಸಾರಾಂಶ
ಪಾಂಡುರಂಗ ರುಕ್ಮಿಣಿಮೂರ್ತಿಗೆ ವಿಶೇಷ ಪೂಜೆ, ಅಲಂಕಾರ, ನೈವೇದ್ಯ, ಆರತಿ ಸೇರಿದಂತೆ ನಾನಾ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ ನೆರವೇರಿದವು. ಇನ್ನು ಹರಿಭಕ್ತ ಪಂಡಿತ ಪ್ರಭಾಕರ ಬುವಾ ಬೋದಲೆ ಮಹಾರಾಜರಿಂದ ಮಂತ್ರೋಪದೇಶ ನಡೆಯಿತು.
ಕನಕಗಿರಿ: ಪಟ್ಟಣದ ಪಾಂಡುರಂಗ-ರುಕ್ಮಿಣಿ ದೇವಸ್ಥಾನದಲ್ಲಿ ಭಾವಸಾರ ಕ್ಷತ್ರೀಯ ಸಮಾಜದಿಂದ ಸಾಮೂಹಿಕ ಉಪನಯನ ಕಾರ್ಯಕ್ರಮ ಶುಕ್ರವಾರ ನಡೆಯಿತು.ಟ್ರಸ್ಟ್ ಅಧ್ಯಕ್ಷ ಸುರೇಶ ಬೊಂದಾಡೆ ಮಾತನಾಡಿ, ವಿವಾಹಕ್ಕಿಂತ ಮುಂಚೆ ಉಪನಯನ ಕಾರ್ಯಕ್ರಮ ನಡೆಸುವುದು ಸಂಪ್ರದಾಯ. ನಮ್ಮ ಟ್ರಸ್ಟ್‌ನಿಂದ ಈ ಕಾರ್ಯಕ್ರಮವನ್ನು ನಿರಂತರವಾಗಿ ಆಯೋಜಿಸುತ್ತಾ ಬಂದಿದ್ದೇವೆ. 91 ಬಾಲಕರು ಉಪನಯನದಲ್ಲಿ ಪಾಲ್ಗೊಂಡಿರುವುದಾಗಿ ತಿಳಿಸಿದರು.ಇದಕ್ಕೂ ಮೊದಲು ಪಾಂಡುರಂಗ ರುಕ್ಮಿಣಿಮೂರ್ತಿಗೆ ವಿಶೇಷ ಪೂಜೆ, ಅಲಂಕಾರ, ನೈವೇದ್ಯ, ಆರತಿ ಸೇರಿದಂತೆ ನಾನಾ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ ನೆರವೇರಿದವು. ಇನ್ನು ಹರಿಭಕ್ತ ಪಂಡಿತ ಪ್ರಭಾಕರ ಬುವಾ ಬೋದಲೆ ಮಹಾರಾಜರಿಂದ ಮಂತ್ರೋಪದೇಶ ನಡೆಯಿತು.ಪುಂಡಲೀಕಪ್ಪ ಧಾಯಿಪುಲ್ಲೆ, ಅನಂತಪ್ಪ ಧಾಯಿಪುಲ್ಲೆ, ಅಂಬೋಜಿರಾವ್ ಬೊಂದಾಡೆ, ಸುರೇಶ ಬೊಂದಾಡೆ, ರಮೇಶ ಅಚ್ಚಲಕರ, ಪ್ರಭಾಕರ ಅಚ್ಚಲಕರ, ಶಶಿಧರ ಬೊಂದಾಡೆ, ಯಮನೂರಪ್ಪ ಬಿ., ಶಶಿಕುಮಾರ ಬಿ. ಸೇರಿದಂತೆ ಪಾಂಡುರಂಗ-ರುಕ್ಮಿಣಿ ಟ್ರಸ್ಟ್ ಪದಾಧಿಕಾರಿಗಳು ಇದ್ದರು.