ಸಾರಾಂಶ
ನಮಗೆ ಏನು ಖುಷಿ ಕೊಡುತ್ತದೆಯೋ ಅದನ್ನು ಮಾಡಬೇಕು. ಮನಸ್ಸಿಗೆ ಮುದ ಎನಿಸುವ, ಸಮಾಜಕ್ಕೂ ಪೂರಕವಾಗಿರುವ ಕೆಲಸ ಮಾಡುವ ಮೂಲಕ ಮಾದರಿಯಾಗಬೇಕು.
ಧಾರವಾಡ:
ನಟ ಉಪೇಂದ್ರ ಇಲ್ಲಿನ ಜೆಎಸ್ಸೆಸ್ ಕಾಲೇಜು ಆವರಣದಲ್ಲಿ ಯುವ ಜನಾಂಗಕ್ಕೆ ಮಾದಕ ವಸ್ತು ಸೇವನೆಯ ದುಷ್ಪರಿಣಾಮ ಕುರಿತು ಪಾಠ ಮಾಡಿದರು. ಡಿ. 20ಕ್ಕೆ ಬಿಡುಗಡೆಯಾಗುವ ಯುಐ ಚಿತ್ರದ ಪ್ರಮೋಷನ್ ಹಾಗೂ ಮಾದಕ ವಸ್ತು ವಿರೋಧಿ ಜಾಗೃತಿಯಲ್ಲಿ ಪಾಲ್ಗೊಂಡು ಮಾತನಾಡಿದರು. ಈ ವೇಳೆ ನೆರೆದಿದ್ದ ಸಹಸ್ರಾರು ವಿದ್ಯಾರ್ಥಿಗಳ ಎದುರು ತಮ್ಮ ಕಾಲೇಜು ದಿನಗಳನ್ನು ಮೆಲುಕು ಹಾಕಿದರು.ನಮಗೆ ಏನು ಖುಷಿ ಕೊಡುತ್ತದೆಯೋ ಅದನ್ನು ಮಾಡಬೇಕು. ಮನಸ್ಸಿಗೆ ಮುದ ಎನಿಸುವ, ಸಮಾಜಕ್ಕೂ ಪೂರಕವಾಗಿರುವ ಕೆಲಸ ಮಾಡುವ ಮೂಲಕ ಮಾದರಿಯಾಗಬೇಕು. ಯುವಕರು ಯಾವುದೇ ಕಾರಣಕ್ಕೂ ಮಾದಕ ವಸ್ತು ಬಳಸಬಾರದು. ಇದರಿಂದ ಇಡೀ ಜೀವನವೇ ಹಾಳಾಗುತ್ತದೆ ಎಂದರು.
ಲವ್ ಅನ್ನೋದು ಪುಸ್ತಕದ ಬದನೆಕಾಯಿ ಎಂದವ ನಾನೇ, ಆದರೆ, ಲವ್ ಮಾಡಿ ಮದುವೆಯಾದೆ ಎಂದು ಚಿತ್ರದ ಕೆಲವು ಡೈಲಾಗ್ ಹೇಳಿ ವಿದ್ಯಾರ್ಥಿಗಳನ್ನು ರಂಜಿಸಿದರು.ಅಭಿಯಾನದ ಮಧ್ಯೆ ಜಾನಪದ ಹಾಡುಗಳಿಗೆ ನೃತ್ಯವು ನಡೆಯಿತು. ಉಪೇಂದ್ರ ನೋಡಲು ವಿವಿಧ ಕಾಲೇಜುಗಳಿಂದ ಸಾವಿರಾರು ವಿದ್ಯಾರ್ಥಿಗಳ ಆಗಮಿಸಿದ್ದರು.