ಸಾರಾಂಶ
ಹಾವೇರಿ: ದೇಶದಲ್ಲಿ ಪ್ರಸ್ತುತ ದಿನಮಾನದ ಬದಲಾವಣೆಗಳಲ್ಲಿ ರಾಷ್ಟ್ರದ ಏಕತೆಗಾಗಿ ಸಮಾನತೆಯ ಹರಿಕಾರ ಬಸವಣ್ಣನವರ ಕ್ರಾಂತಿಕಾರಿ ವಿಚಾರಧಾರೆಗಳು ಅವಶ್ಯವಾಗಿವೆ ಎಂದು ನಿತೀಶ್ ನಾರಾಯಣ್ ತಿಳಿಸಿದರು.ನಗರದ ಪ್ರವಾಸಿ ಮಂದಿರದಲ್ಲಿ ಏರ್ಪಡಿಸಿದ್ದ ಭಾರತ ವಿದ್ಯಾರ್ಥಿ ಫೆಡರೇಷನ್(ಎಸ್‌ಎಫ್‌ಐ) ಕರ್ನಾಟಕ ರಾಜ್ಯ ಪದಾಧಿಕಾರಿಗಳ ಸಭೆಯಲ್ಲಿ ಬಸವ ಜಯಂತಿ ಅಂಗವಾಗಿ ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು. ಬಸವಣ್ಣ ಅವರು ಜ್ಞಾನದ ಬೆಳಕಿನ ಸಂಕೇತವಾಗಿದ್ದಾರೆ. ಕೇವಲ ಕರ್ನಾಟಕಕ್ಕೆ ಮಾತ್ರವಲ್ಲ, ಇಡೀ ದೇಶಕ್ಕೆ. ಇವರು 12ನೇ ಶತಮಾನದಲ್ಲೇ ಮಾನವೀಯತೆ ಸಾರಿದರು. ಇವರ ನಂತರ ಬಂದ ನಾರಾಯಣ ಗುರು, ಪೆರಿಯಾರ್, ಅಂಬೇಡ್ಕರ್, ಜ್ಯೋತಿ ಬಾ ಫುಲೆ, ಸಾವಿತ್ರಿ ಬಾಯಿ ಫುಲೆ ಇವರೆಲ್ಲರೂ ಮಾನವೀಯ ಮೌಲ್ಯಕ್ಕಾಗಿ ದುಡಿದರು. ಸಮಾಜದ ನೈತಿಕ ಮೌಲ್ಯಗಳು ಕಟ್ಟುವಲ್ಲಿ ಜಾತಿ ಗೋಡೆಗಳನ್ನು ಮೀರಿದರು ಎಂದರು.ಏಕತೆ ಮತ್ತು ಸಮಾಜ ಸುಧಾರಣೆಗಾಗಿ ತಮ್ಮನ್ನು ತೊಡಗಿಸಿಕೊಂಡು ಕ್ರಾಂತಿಯ ಹೆಜ್ಜೆ ಇಟ್ಟವರು ಬಸವಣ್ಣ. ಎಸ್‌ಎಫ್‌ಐ ಸಮಾಜದ ಬದಲಾವಣೆ ಮತ್ತು ಸಮಾನತೆಗಾಗಿ ದುಡಿಯುವುದಾಗಿದೆ. ಜಾತಿ ರಹಿತ ಸಮಾಜ ಮತ್ತು ತಾರತಮ್ಯವಿಲ್ಲದ ಸಮಾಜ ಕಟ್ಟುವುದಾಗಿದೆ ಎಂದರು.ಈ ಸಂದರ್ಭದಲ್ಲಿ ಎಸ್‌ಎಫ್‌ಐ ರಾಜ್ಯ ಕಾರ್ಯದರ್ಶಿ ವಿಜಯಕುಮಾರ್ ಟಿ.ಎಸ್., ಜಿಲ್ಲಾಧ್ಯಕ್ಷ ಬಸವರಾಜ ಎಸ್., ರಾಜ್ಯ ಉಪಾಧ್ಯಕ್ಷ ಗಣೇಶ ರಾಠೋಡ್, ಡಾ. ದೊಡ್ಡಬಸವರಾಜ ಗುಳೆದಾಳು, ಗ್ಯಾನೇಶ್ ಕಡಗದ, ಪದಾಧಿಕಾರಿ ಸುಜಾತ ಕಲಬುರಗಿ, ಚಂದ್ರು ರಾಠೋಡ್, ಅನಂತರಾಜ್ ಬಿ.ಎಂ., ರಜಿಯಾ ಯಸ್ಮೀನ್ ಎಂಜಿನಿಯರಿಂಗ್ ಕಾಲೇಜು ಘಟಕದ ಅಧ್ಯಕ್ಷ ರೇವಣ್ಣಸಿದ್ದು ವಿ., ಮುಖಂಡರಾದ ಬಾಲಾಜಿ ಗಂಗಾವತಿ, ಇಮಾಮ್ ಸಾಬ್ ಯಾದಗಿರಿ, ಪವನ್ ವಿಜಯನಗರ, ಜಯೆಶ್, ಸುನಿಲ್ ಕುಮಾರ್ ಎಲ್., ಕೃಷ್ಣ ನಾಯಕ, ಬಾಲ ಸಂಘನ ಧನುಷ್ ದೊಡ್ಡಮನಿ, ಮೈನುದ್ದಿನ್ ಇಲಿಬುಡ್ಡಿ, ಅಭಿಷೇಕ್ ಬಂಡಿವಡ್ಡರ, ತೇಜಸ್ ದೊಡ್ಡಮನಿ ಸೇರಿದಂತೆ ಇತರರು ಇದ್ದರು.ಸಮಾನತೆಯ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ್ದ ಬಸವಣ್ಣ
ಹಾವೇರಿ: ವಿಶ್ವಗುರುವ ಬಸವಣ್ಣನವರು ಶೋಷಣೆ ಮುಕ್ತ, ಸರ್ವ ಸಮಾನತೆಯ ನಾಡನ್ನು ಕಟ್ಟುವ ಕನಸಿಗಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟರು ಎಂದು ಲಿಡ್ಕರ್ ನಿಗಮದ ಮಾಜಿ ಉಪಾಧ್ಯಕ್ಷ ಡಿ.ಎಸ್. ಮಾಳಗಿ ತಿಳಿಸಿದರು.ಜಿಲ್ಲಾ ಆದಿಜಾಂಬವ ಸಂಘದಿಂದ ಏರ್ಪಡಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಬಸವೇಶ್ವರರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದರು.ಬಸವಣ್ಣನವರು ದೇವಸ್ಥಾನಗಳಲ್ಲಿ ಶೂದ್ರರಿಗೆ ಪ್ರವೇಶ ನೀಡದಿದ್ದುದನ್ನು ಪ್ರಶ್ನಿಸಿ ದೇವಸ್ಥಾನಗಳನ್ನೇ ಧಿಕ್ಕರಿಸಿದರು. ಉಚ್ಚ- ನೀಚ ಎಂದು ಭೇದ ಎಣಿಸದೇ ಎಲ್ಲರನ್ನು ಒಳಗೊಂಡ ಸಮಾನತೆಯ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಬಸವಣ್ಣನವರಿಗೆ ಬಸವಣ್ಣನವರೆ ಸಾಟಿ ಎಂದರು.ಮಾದಾರ ಚನ್ನಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ, ಮಾದಾರ ದೂಳಯ್ಯ, ಉರಿಲಿಂಗ ಪೆದ್ದಿ, ಮೇದಾರ ಕೇತಯ್ಯ, ಕುಂಬಾರ ಗುಂಡಯ್ಯ, ಕುರುಬಗೊಲ್ಲಾಳ, ತಳವಾರ ರಾಮಯ್ಯ, ಈಳಿಗೇರ ಮಾರಯ್ಯ, ಒಕ್ಕಲಿಗರ ಮುದ್ದಣ್ಣ, ನುಲಿಯ ಚೆಂದಯ್ಯ, ಸೂಳೆ ಸಂಕವ್ವೆ, ಅಮುಗೆ ರಾಯಮ್ಮ ಸೇರಿದಂತೆ ನೂರಾರು ಶರಣ ಪಡೆ ಕಟ್ಟಿಕೊಂಡು ವಚನಗಳನ್ನು ರಚಿಸುವ ಮೂಲಕ ಸಮಾನತೆಗೆ ಹೋರಾಡಿದರು. ಅವರ ತತ್ವಗಳನ್ನು ಅಳವಡಿಸಿಕೊಳ್ಳಬೇಕಿದೆ ಎಂದರು.
ನ್ಯಾಯವಾದಿ, ಆದಿಜಾಂಬವ ಸಂಘದ ಜಿಲ್ಲಾಧ್ಯಕ್ಷ ನಾಗರಾಜ ಮಾಳಗಿ ಅಧ್ಯಕ್ಷತೆ ವಹಿಸಿದ್ದರು. ಅಶೋಕ ಮರೆಣ್ಣನವರ, ಮಲ್ಲೇಶ ಕಡಕೋಳ, ಶಿವಬಸಪ್ಪ ಚೌಶೆಟ್ಟಿ, ನಾಗರಾಜ ಮೇದಾರ ಸೇರಿದಂತೆ ಇತರರು ಇದ್ದರು.