ಸರ್ಕಾರಿ ಸಾರಿಗೆಯಲ್ಲಿ ಮೊದಲ ಬಾರಿ ಯುಪಿಐ ಸೌಲಭ್ಯ ಆರಂಭ

| Published : Feb 14 2024, 02:18 AM IST

ಸಾರಾಂಶ

ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಪ್ರಥಮ ಬಾರಿಗೆ ನಗದು ರಹಿತ ವಹಿವಾಟಿಗೆ ಉತ್ತೇಜನ ನೀಡುವ ಉದ್ದೇಶದಿಂದ ಯುಪಿಐ ಸೌಲಭ್ಯ ಪ್ರಾರಂಭಿಸಲಾಗಿದೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಕೇಂದ್ರ ಕಚೇರಿ ಹುಬ್ಬಳ್ಳಿಯ ಉಪಮುಖ್ಯ ಗಣಕ ವ್ಯವಸ್ಥಾಪಕ ಮಹಾಂತೇಶ ಕಪ್ಲಿ ಹೇಳಿದರು.

ಕನ್ನಡಪ್ರಭ ವಾತೆ೯ ಬೀಳಗಿ

ಮಂಗಳವಾರ ಬೀಳಗಿ ಬಸ್‌ ನಿಲ್ದಾಣದಲ್ಲಿ ಇರುವಂತಹ ಪ್ರಯಾಣಿಕರಿಗೆ ಯುಪಿಐ ಕುರಿತು ಮಾಹಿತಿ ನೀಡಿ ಮಾತನಾಡಿದ ಅವರು, ಪ್ರಯಾಣಿಕರಿಗೆ ಮತ್ತು ನಿರ್ವಾಹಕರಿಗೆ ಚಿಲ್ಲರ ಸಮಸ್ಯೆಯಿಂದ ಪರಿಹಾರ ಒದಗಿಸಲು ಈ ಸೌಲಭ್ಯ ಪ್ರಾರಂಭ ಮಾಡಿದ್ದೇವೆ. ಇದರಿಂದ ಚಿಲ್ಲರೇ ಸಮಸ್ಯೆಯ ಜೊತೆಗೆ ಸಮಯ ಉಳಿತಾಯವಾಗಲಿದೆ ಎಂದರು.

ಬಾಗಲಕೋಟೆ ವಿಭಾಗೀಯ ಸಾರಿಗೆ ಅಧಿಕಾರಿ ಪಿ.ವಿ. ಮೇತ್ರಿ ಮಾತನಾಡಿ, ಈಗಾಗಲೇ ವಾ.ಕ.ರಾ. ಸಾ.ಸಂಸ್ಥೆಯ 13 ಘಟಕಗಳಲ್ಲಿ ಈ ಸೌಲಭ್ಯವನ್ನು ಪ್ರಾರಂಭಿಸಲಾಗಿದೆ. ಇಲ್ಲಿಯವರೆಗೆ ₹237 ಕೋಟಿ ಮೊತ್ತ ಜಮಾ ಆಗಿದ್ದು ₹1.30 ಕೋಟಿ ವಹಿವಾಟುಗಳಾಗಿರುತ್ತವೆ ಎಂದರು.

ಸಹಾಯಕ ಅಂಕಿ ಸಂಖ್ಯಾಧಿಕಾರಿ ಸುನೀತಾ ಜೋಶಿ, ಬೀಳಗಿ ಘಟಕ ವ್ಯವಸ್ಥಾಪಕ ಆರ್.ಸಿ. ಖೇಡದ , ಜಮಖಂಡಿ ವಿಭಾಗದ ವ್ಯವಸ್ಥಾಪಕ ಎಸ್.ಬಿ.ಗಸ್ತಿ, ಗುಳೇದಗುಡ್ಡ ವ್ಯವಸ್ಥಾಪಕ ವಿದ್ಯಾ ನಾಯಕ, ಬೀಳಗಿ ಘಟಕದ ಟಿಐ ಗಿರೀಶ ಅರಕೇರಿ, ಎಟಿಐ ಸುರೇಶ ಚವ್ಹಾಣ, ನಿವಾ೯ಹಕ ಪುಟ್ಟು ಯಾಳವರಮಠ, ರಾಜು ಹಾದಿಮನಿ ಹಾಗೂ ಬಾಗಲಕೋಟೆ ವಿಭಾಗದ ಮೇಲ್ವಿಚಾರಕರು ಮತ್ತು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.