ಸಾರಾಂಶ
ರೈತ ಸಂಘವು ಪ್ರತಿಯೊಬ್ಬ ರೈತರು ಸ್ವಾಭಿಮಾನಿಯಾಗಬೇಕು ಎಂಬ ಸಂದೇಶವನ್ನು ಕಲಿಸುತ್ತದೆ, ಇಲ್ಲಿ ಸ್ವಾರ್ಥಕ್ಕೆ ಅವಕಾಶವಿಲ್ಲ, ಎಲ್ಲಾ ಸಮಾಜಕ್ಕೂ ಕೃಷಿ ಕ್ಷೇತ್ರ ಅವಕಾಶ ಕಲ್ಪಿಸಿದೆ. ಈ ಕ್ಷೇತ್ರದಲ್ಲಿ ಯಾವುದೆ ತಾರತಮ್ಯವಿಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದರು.
ಬಡಗಲಪುರ ನಾಗೇಂದ್ರ ಹೇಳಿಕೆ । ಅಣಗನಹಳ್ಳಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ನೂತನ ಶಾಖೆಗೆ ಚಾಲನೆ
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ ರೈತ ಸಂಘವು ಪ್ರತಿಯೊಬ್ಬ ರೈತರು ಸ್ವಾಭಿಮಾನಿಯಾಗಬೇಕು ಎಂಬ ಸಂದೇಶವನ್ನು ಕಲಿಸುತ್ತದೆ, ಇಲ್ಲಿ ಸ್ವಾರ್ಥಕ್ಕೆ ಅವಕಾಶವಿಲ್ಲ, ಎಲ್ಲಾ ಸಮಾಜಕ್ಕೂ ಕೃಷಿ ಕ್ಷೇತ್ರ ಅವಕಾಶ ಕಲ್ಪಿಸಿದೆ. ಈ ಕ್ಷೇತ್ರದಲ್ಲಿ ಯಾವುದೆ ತಾರತಮ್ಯವಿಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದರು. ಪಟ್ಟಣದ ಹೊಸ ಅಣಗಳ್ಳಿಯಲ್ಲಿ ಸೋಮವಾರ ಕರ್ನಾಟಕ ರಾಜ್ಯ ರೈತ ಸಂಘದ ನೂತನ ಶಾಖೆಗೆ ಚಾಲನೆ ನೀಡಿ ಮಾತನಾಡಿ, ನಾವೆಲ್ಲರೂ ಒಗ್ಗಟಾಗಿ ನಡೆದರೆ ಮಾತ್ರ ಗೆಲುವು ಸಾಧ್ಯ, ಹಸಿವು ನೀಗುಸುವ ಸಂಸ್ಕೃತಿ ರೈತ ಸಂಘದ ಸಂಸ್ಕೃತಿ ಎಂದರು. ಕೆಲವರು ಧರ್ಮ, ಜಾತಿಗಳ ನಡುವೆ ಸಂಘರ್ಷ ಸೃಷ್ಟಿಸುತ್ತಿದ್ದಾರೆ. ಇದ್ದರಿಂದ ಯಾರೂ ನೆಮ್ಮದಿಯಿಂದ ಜೀವನ ನಡೆಸಲು ಸಾಧ್ಯವಿಲ್ಲ. ಇದನ್ನು ನಾವು ಪ್ರಶ್ನಿಸಬೇಕಿದೆ. ನಮಗೇನು ಅಂತ ಕುಳಿತರೆ ಕೊನೆಗೆ ಎಲ್ಲರಿಗೂ ತೊಂದರೆ ಯಾಗುತ್ತದೆ. ಇದ್ದರಿಂದ ರೈತಾಪಿ ವರ್ಗಕ್ಕೆ ಬಹಳ ಸಮಸ್ಯೆ ಆಗುತ್ತದೆ. ಸಂವಿಧಾನದ ಆಶಯಗಳನ್ನು ಅನುಷ್ಠಾನಗೊಳಿಸಬೇಕಿದೆ. ಸಂವಿಧಾನ ಘನತೆ, ಗೌರವದಿಂದ ಬದುಕುವ ಶಕ್ತಿ ನೀಡಿದೆ. ಪ್ರಶ್ನಿಸುವ ಹಕ್ಕನ್ನು ನೀಡಿದೆ. ಈ ಹಿನ್ನಲೆ 36 ವರ್ಷಗಳಿಂದಲೂ ರೈತ ಸಂಘ ಅನ್ಯಾಯದ ವಿರುದ್ಧ ಧ್ವನಿ ಎತ್ತಿದೆ. ಆದ್ದರಿಂದ ಎಲ್ಲರೂ ಒಗ್ಗಟ್ಟಿನಲ್ಲಿ ಹೋರಾಟ ಮಾಡಬೇಕು, ಸಂಘಟಿತರಾದಾಗ ಮಾತ್ರ ರೈತರ ಉನ್ನತಿ ಸಾಧ್ಯವಾಗಲಿದೆ ಎಂದರು .ಇಂದು ಆಳುವ ಸರ್ಕಾರ ಬಂಡಾವಾಳ ಶಾಹಿಗಳ ಪರವಾಗಿದ್ದು ಇದರಿಂದ ಮಧ್ಯಮ ವರ್ಗದ ಜನರು ಬಡವರಾಗುತ್ತಿದ್ದಾರೆ. ಬಡವರು ಬಿಕ್ಷುರಾಗುತ್ತಿದ್ದಾರೆ. ಹೊಸ ಅಣಗಳ್ಳಿಯಲ್ಲಿ ಯುವ ರೈತ ಕೀರ್ತಿರಾಜ್ ನೇತೃತ್ವದಲ್ಲಿ ಮಹಿಳಾ ರೈತರು ಸೇರಿದಂತೆ ಮೂವತ್ತಕ್ಕೂ ಹೆಚ್ಚು ಮಂದಿ ರೈತ ಸಂಘಕ್ಕೆ ಸೇರ್ಪಡೆಗೊಂಡಿರುವುದು ಸಂತಸ ತಂದಿದೆ. ಇಂದು ಸ್ವಾರ್ಥ ತಾಂಡವವಾಡುತ್ತಿದೆ ಎಂದು ವಿಷಾದಿಸಿದರು. ರಾಜ್ಯ ರೈತ ಸಂಘದ ಉಪಾಧ್ಯಕ್ಷ ಮಹೇಶ್ ಪ್ರಭು, ಜಿಲ್ಲಾ ಕಾರ್ಯಧ್ಯಕ್ಷ ಶೈಲೇಂದ್ರ, ಪ್ರಧಾನ ಕಾರ್ಯದರ್ಶಿ ಭಾಸ್ಕರ್, ಜಿಲ್ಲಾ ಮಹಿಳಾ ಸಂಘ ಅಧ್ಯಕ್ಷೆ ಮಾದಮ್ಮ, ತಾಲೂಕು ಘಟಕ ಕಾರ್ಯಧ್ಯಕ್ಷ ಡಾ.ಜೋಯೆಲ್ ನಿವಾಸ್, ಉಪಾಧ್ಯಕ್ಷ ಚಾರ್ಲಿ, ತಾಲೂಕು ಕಾರ್ಯದರ್ಶಿ ಪೆರಿಯಾನಾಯಗಂ, ಯುವ ಘಟಕದ ಅಧ್ಯಕ್ಷ ವಾಸು, ಜಾನ್ ಕೆನ್ನಡಿ, ಮುಖಂಡ ದೊರೆಸ್ವಾಮಿ, ಮಾದೇವ, ನಂಜುಂಡಮೂರ್ತಿ, ಕೀರ್ತಿರಾಜು ಇನ್ನಿತರಿದ್ದರು.