ಪಡೆದ ಸಾಲ ಸಕಾಲಕ್ಕೆ ಮರಳಿಸಿದರೆ ಸಂಘದ ಉನ್ನತಿ

| Published : Sep 23 2024, 01:19 AM IST

ಸಾರಾಂಶ

ಪಾಮಲದಿನ್ನಿ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಸಹಕಾರಿ ಸಂಘ 2023-24 ಸಾಲಿನಲ್ಲಿ ₹37,40,729 ನಿವ್ವಳ ಲಾಭ ಹೊಂದಿ ಪ್ರಗತಿ ಪಥದಲ್ಲಿದೆ. ಸಹಕಾರಿಗಳು ತಾವು ತೆಗೆದುಕೊಂಡ ಸಾಲವನ್ನು ಅವಧಿಗೆ ಸರಿಯಾಗಿ ಪಾವತಿ ಮಾಡಿದರೆ ಸಂಘ ಇನ್ನಷ್ಟು ಉನ್ನತಿ ಹೊಂದುವುದರಲ್ಲಿ ಸಂದೇಹವಿಲ್ಲ ಎಂದು ಸಂಘದ ಅಧ್ಯಕ್ಷ ಬಸಪ್ಪ ಕಾವಲಿ ಹೇಳಿದರು.

ಕನ್ನಡಪ್ರಭ ವಾರ್ತೆ ಘಟಪ್ರಭಾ

ಪಾಮಲದಿನ್ನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕಚೇರಿಯಲ್ಲಿ ಜರುಗಿದ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಮಾತನಾಡಿದರು. ಸಂಘ 3012 ಜನ ಸದಸ್ಯರನ್ನು ಹೊಂದಿದ್ದು, ವರ್ಷದ ಕೊನೆಗೆ ₹1,47,42,600ರಷ್ಟು ಷೇರು ಬಂಡವಾಳ ಹೊಂದಿದೆ ಎಂದರು. ವರದಿ ವಾಚನ ಮಾಡಿದ ಮುಖ್ಯಕಾರ್ಯನಿರ್ವಾಹಕ ಎ.ಎಂ. ಮದಿಹಳ್ಳಿ ಆರ್ಥಿಕ ವರ್ಷದಲ್ಲಿ ₹9,78,47000 ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಸಾಲ, ₹3,37,35,500 ಕೃಷಿಯೇತರ ಸಾಲ ಹೀಗೆ ಒಟ್ಟು ₹13,15,82500 ಸಾಲ ವಿತರಿಸಲಾಗಿದೆ ಎಂದರು.ಸಂಘದ ಅಧ್ಯಕ್ಷ ಬಸಪ್ಪ ಕಾವಲಿ ಅಧ್ಯಕ್ಷತೆ ವಹಿಸಿದ್ದರು. ಆಡಳಿತ ಮಂಡಳಿ ಸದಸ್ಯರು, ತುಕ್ಕಾನಟ್ಟಿ ಕೃಷಿ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಸೇರಿದಂತೆ ಸಂಘದ ಸದಸ್ಯರು ಇದ್ದರು. ವಿಠ್ಠಲ ಕೊಗನೂಳಿ ನಿರೂಪಿಸಿ ವಂದಿಸಿದರು.