ಸಾರಾಂಶ
ಕಾರ್ಯಕ್ರಮದಲ್ಲಿ ಹಗ್ಗ ಜಗ್ಗಾಟ, ಟ್ರಸರ್ ಹಂಟ್, ಹ್ಯಾಂಡ್ ಕ್ರಿಕೆಟ್, ಡಾರ್ಜ್ ಬಾಲ್, ಬೆಸ್ಟ್ ರೀಲ್ಸ್, ಬೆಸ್ಟ್ ಸೆಲ್ಫಿ, ಫ್ಲಾಶ್ ಮಾಬ್, ಪುಷ್ ಅಪ್ಸ್, ಕ್ವಿಜ್ ಮೊದಲಾದ ಸ್ಪರ್ಧೆಗಳು ನಡೆದವು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿವಿಧ ನೃತ್ಯ ವೈವಿಧ್ಯ ಹಾಗು ಸಂಗೀತಗಳು ಮೂಡಿಬಂದವು.
ಕನ್ನಡಪ್ರಭ ವಾರ್ತೆ ಉಡುಪಿ
ಇಲ್ಲಿನ ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ಅಂತಿಮ ಪದವಿ ವಿದ್ಯಾರ್ಥಿಗಳು ಆಯೋಜಿಸಿದ ಎಕ್ಸ್ ಪ್ಲೋರಿಕಾ-೨೦೨೪ ಸಾಂಸ್ಕೃತಿಕ, ವಾಣಿಜ್ಯ ಮತ್ತು ವ್ಯವಹಾರ ಆಡಳಿತ ಉತ್ಸವಕ್ಕೆ ಕಾಲೇಜಿನ ಪ್ರಾಚಾರ್ಯರಾದ ಆಶಾ ಕುಮಾರಿ ಶುಕ್ರವಾರ ಚಾಲನೆ ನೀಡಿದರು.ಬಳಿಕ ಮಾತನಾಡಿದ ಅವರು, ಪದವಿ ಹಂತದಲ್ಲಿ ಇಂತಹ ನಿರ್ವಹಣಾ ಕಾರ್ಯಗಳಲ್ಲಿ ವಿದ್ಯಾರ್ಥಿಗಳು ತೊಡಗಿಕೊಂಡಲ್ಲಿ ಹಣಕಾಸು, ಸಮಯ, ಕಾರ್ಯನಿರ್ವಹಣೆ ಕೌಶಲಗಳನ್ನು ಮೈಗೂಡಿಸಿಕೊಳ್ಳಲು ಸಹಕಾರಿಯಾಗಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹಗ್ಗ ಜಗ್ಗಾಟ, ಟ್ರಸರ್ ಹಂಟ್, ಹ್ಯಾಂಡ್ ಕ್ರಿಕೆಟ್, ಡಾರ್ಜ್ ಬಾಲ್, ಬೆಸ್ಟ್ ರೀಲ್ಸ್, ಬೆಸ್ಟ್ ಸೆಲ್ಫಿ, ಫ್ಲಾಶ್ ಮಾಬ್, ಪುಷ್ ಅಪ್ಸ್, ಕ್ವಿಜ್ ಮೊದಲಾದ ಸ್ಪರ್ಧೆಗಳು ನಡೆದವು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿವಿಧ ನೃತ್ಯ ವೈವಿಧ್ಯ ಹಾಗು ಸಂಗೀತಗಳು ಮೂಡಿಬಂದವು.ಕಾಲೇಜಿನ ಉಪ ಪ್ರಾಚಾರ್ಯ ರಾಧಾಕೃಷ್ಣ ರಾವ್, ವಾಣಿಜ್ಯ ವಿಭಾಗದ ಮುಖ್ಯಸ್ಥೆ ಪ್ರಭಾ ಕಾಮತ್, ಕಾರ್ಯಕ್ರಮದ ಅಧ್ಯಾಪಕ ಸಂಯೋಜಕ ಹರಿಕೇಶವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಸಾದ್ ಕುಂದರ್, ನೌಶಿನ್ ಕಾರ್ಯಕ್ರಮ ನಿರೂಪಿಸಿದರು.