ಯುಪಿಎಂಸಿ: ಕೌಶಲ್ಯ ಅಭಿವ್ಯಕ್ತಿಯಿಂದ ವಿದ್ಯಾರ್ಥಿ ಪರಿಪೂರ್ಣ

| Published : Apr 07 2024, 01:47 AM IST

ಯುಪಿಎಂಸಿ: ಕೌಶಲ್ಯ ಅಭಿವ್ಯಕ್ತಿಯಿಂದ ವಿದ್ಯಾರ್ಥಿ ಪರಿಪೂರ್ಣ
Share this Article
  • FB
  • TW
  • Linkdin
  • Email

ಸಾರಾಂಶ

ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗಾಗಿ ಕೌಶಲ್ಯ ತರಬೇತಿ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಯುವಜನತೆ ವಿದ್ಯಾಲಯಗಳಲ್ಲಿ ಪಡೆಯುವ ಶಿಕ್ಷಣದ ಜೊತೆಗೆ ಕೌಶಲ್ಯಗಳ ಅಭಿವ್ಯಕ್ತಿಯು ಅನಿವಾರ್ಯವಾಗಿದ್ದು, ಇಂದಿನ ಜಾಗತಿಕ ಮಟ್ಟದ ಸ್ಪರ್ಧಾ ಪ್ರಪಂಚದಲ್ಲಿ ವಿದ್ಯಾರ್ಥಿಯು ಪರಿಪೂರ್ಣನೆನಿಸಲು ಕೌಶಲ್ಯಗಳ ಪ್ರಾಯೋಗಿಕತೆಯನ್ನು ಮೆರೆಯುವುದು ಅತ್ಯವಶ್ಯ ಎಂದು ಮಣಿಪಾಲದ ಡಾ.ಟಿ.ಎಂ.ಪೈ ಪ್ರತಿಷ್ಠಾನದ ಅಂಗಸಂಸ್ಥೆಯಾದ ಮಣಿಪಾಲ ಕೌಶಲಾಭಿವೃದ್ಧಿ ಕೇಂದ್ರ (ಎಂಎಸ್ ಡಿಸಿ)ಯ ಮಖ್ಯಸ್ಥ ಡಾ. ಅಂಜಯ್ಯ ಹೇಳಿದರು.ಅವರು ಇಲ್ಲಿನ ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ಗುರುವಾರ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡ ಕೌಶಲ್ಯ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಾಲೇಜಿನ ಮಾಹಿತಿ ತಂತ್ರಜ್ಞಾನ ವಿಭಾಗದ ಮುಖ್ಯಸ್ಥರಾದ ಡಾ.ರಾಜಲಕ್ಷ್ಮೀ, ಪದವಿ ಶಿಕ್ಷಣದ ಜೊತೆಗೆ ತಾಂತ್ರಿಕ ಕ್ಷೇತ್ರದಲ್ಲಿ ಉಪಯೋಗವಾಗುವ ವಿವಿಧ ಕೋರ್ಸ್ ಗಳ ಬಗೆಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಆರ್ ಸಾಫ್ಟ್‌ವೇರ್, ಪೈಥಾನ್, ಬ್ಯುಸಿನೆಸ್ ಇಂಟಲಿಜೆನ್ಸ್, ಆರ್ಟಿಫೀಶಿಯಲ್ ಇಂಟಲಿಜೆನ್ಸಿ, ಡೇಟಾ ಮೈನಿಂಗ್, ಡಾಟಾ ವಿಶುವಲೈಸೇಶನ್ ಮೊದಲಾದ ತಂತ್ರಜ್ಞಾನದ ವಿಚಾರಗಳನ್ನು ಅವರು ಸಾದರ ಪಡಿಸಿದರು.

ಎಂ.ಎಸ್.ಡಿ.ಸಿ. ಯ ಕುಲಸಚಿವ ಡಾ.ನಾರಾಯಣ ಶೆಣೈ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಚಾರ್ಯರಾದ ಆಶಾ ಕುಮಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಾಣಿಜ್ಯ ಉಪನ್ಯಾಸಕ ಶ್ರೀ ರಾಘವೇಂದ್ರ ಜಿ. ಜಿ. ನಿರೂಪಿಸಿದರು.