ಉಪ್ಪಿನಂಗಡಿ: ಮಾಧವ ಶಿಶು ಮಂದಿರದಲ್ಲಿ ದೀಪಾವಳಿ ಉತ್ಸವ

| Published : Nov 05 2024, 12:32 AM IST

ಉಪ್ಪಿನಂಗಡಿ: ಮಾಧವ ಶಿಶು ಮಂದಿರದಲ್ಲಿ ದೀಪಾವಳಿ ಉತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಉಪ್ಪಿನಂಗಡಿ ಶ್ರೀ ಮಾಧವ ಶಿಶು ಮಂದಿರದಲ್ಲಿ ಬಾಲಗೋಕುಲದ ಆಶ್ರಯದಲ್ಲಿ ದೀಪಾವಳಿ ಉತ್ಸವ ಆಚರಿಸಲಾಯಿತು. ದೀಪಾವಳಿ ಉತ್ಸವದ ನಿಮಿತ್ತ ಪುಷ್ಪಾಲಂಕೃತ ರಂಗೋಲಿ ಸ್ಪರ್ಧೆ ಆಯೋಜಿಸಲ್ಪಟ್ಟಿತ್ತು. ಬಾಲಗೋಕುಲದ ಮಕ್ಕಳಿಂದ ಭಜನಾ, ನೃತ್ಯ ಭಜನಾ ಕಾರ್ಯಕ್ರಮಗಳು ಆಕರ್ಷಕವಾಗಿ ಮೂಡಿಬಂದವು.

ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ

ಭರತ ಭೂಮಿಯಲ್ಲಿನ ಪ್ರತಿಯೊಂದು ಹಬ್ಬಗಳಿಗೂ ಅದರದ್ದೇ ಆದ ಮಹತ್ವವಿದ್ದು, ಪ್ರತಿ ಹಬ್ಬಗಳೂ ಪ್ರಕೃತಿಯೊಂದಿಗಿನ ಮಾನವ ಸಂಬಂಧವನ್ನು ಬಲಪಡಿಸುವ ಜೊತೆಗೆ ಸಮಾಜದಲ್ಲಿ ಸಾಮರಸ್ಯ ಬೆಸೆಯಲು ಪ್ರೇರಣಾದಾಯಿಯಾಗಿದೆ ಎಂದು ಶ್ರೀ ನಂದಿಕೇಶ್ವರ ಭಜನಾ ಮಂಡಳಿಯ ಅಧ್ಯಕ್ಷ ಚಂದ್ರಶೇಖರ ಪುಲಮೊಗೆರು ತಿಳಿಸಿದರು.

ಅವರು ಶ್ರೀ ಮಾಧವ ಶಿಶು ಮಂದಿರದಲ್ಲಿ ಬಾಲಗೋಕುಲದ ಆಶ್ರಯದಲ್ಲಿ ಆಯೋಜಿಸಲಾಗಿದ್ದ ದೀಪಾವಳಿ ಉತ್ಸವದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು. ಅಧ್ಯಕ್ಷತೆ ವಹಿಸಿದ್ದ ಹಿರಿಯ ಆರ್‌ಎಸ್‌ಎಸ್ ಕಾರ್ಯಕರ್ತ ಹರಿರಾಮಚಂದ್ರ ಹಲವು ಮನೆಗಳ ಹಲವು ಮನಗಳು ಒಟ್ಟುಗೂಡಿ ಹಬ್ಬವನ್ನು ಆಚರಿಸುವಂತೆ ಕಾರ್ಯಕ್ರಮವನ್ನು ಆಯೋಜಿಸಿದ ಬಾಲಗೋಕುಲದ ಮಕ್ಕಳ ಪ್ರಯತ್ನ ಸಮಾಜಕ್ಕೆ ಉತ್ತಮ ಸಂದೆಶವನ್ನು ನೀಡಿದೆ ಎಂದರು.

ಅತಿಥಿಗಳಾಗಿ ಶಿಶು ಮಂದಿರದ ಆಡಳಿತ ಮಂಡಳಿಯ ಸದಸ್ಯರಾದ ಕಂಗ್ವೆ ವಿಶ್ವನಾಥ ಶೆಟ್ಟಿ, ಜಯಶ್ರೀ ಜನಾರ್ದನ್‌, ಯು. ರಾಜೇಶ್ ಪೈ, ಕರಾಯ ರಾಘವೇಂದ್ರ ನಾಯಕ್ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಮಾಧವ ಶಿಶು ಮಂದಿರದ ಉಪಾಧ್ಯಕ್ಷೆ ಸುಜಾತ ಕೃಷ್ಣ ಆಚಾರ್ಯ, ಪ್ರಮುಖರಾದ ಮೋನಪ್ಪ, ಬಾಲಚಂದ್ರ, ಚಂದ್ರಾವತಿ, ಸರಸ್ವತಿ, ಜಯಲಕ್ಷ್ಮೀ, ಜಯಶ್ರೀ, ಪ್ರತಿಮಾ ಗಣೇಶ್, ರಾಜು ಅಲಗುರಿ ಮಜಲು ಮೊದಲಾದವರು ಭಾಗವಹಿಸಿದ್ದರು. ದೀಪಾವಳಿ ಉತ್ಸವದ ನಿಮಿತ್ತ ಪುಷ್ಪಾಲಂಕೃತ ರಂಗೋಲಿ ಸ್ಪರ್ಧೆ ಆಯೋಜಿಸಲ್ಪಟ್ಟಿತ್ತು. ಬಾಲಗೋಕುಲದ ಮಕ್ಕಳಿಂದ ಭಜನಾ, ನೃತ್ಯ ಭಜನಾ ಕಾರ್ಯಕ್ರಮಗಳು ಆಕರ್ಷಕವಾಗಿ ಮೂಡಿಬಂದವು. ಬಾಲಗೋಕುಲದ ಶಿಕ್ಷಕಿ ದೀಕ್ಷಾ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಧನ್ಯ ಕಾರ್ಯಕ್ರಮ ನಿರೂಪಿಸಿದರು. ಮಾನ್ಯ ಸ್ವಾಗತಿಸಿದರು. ಸಾನಿಕ ವಂದಿಸಿದರು. ಮಕ್ಕಳೇ ತಮ್ಮ ತಮ್ಮ ಮನೆಯಲ್ಲಿ ತಯಾರಿಸಿ ತಂದ ಭಕ್ಷ್ಯಗಳನ್ನು ಪ್ರಸಾದ ರೂಪದಲ್ಲಿ ವಿತರಿಸಿದರು.