ಸಾರಾಂಶ
ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ
ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಾಲಯದಲ್ಲಿ ಅಷ್ಟಮಿ ಒಂದನೇ ಮಖೆ ಜಾತ್ರೆಯ ಪ್ರಯುಕ್ತ ಗುರುವಾರ ರಾತ್ರಿ ಭಕ್ತಿ ಸಡಗರದ ರಥೋತ್ಸವವು ಜರುಗಿತು.ವೇದಮೂರ್ತಿ ಕೆಮ್ಮಿಂಜೆ ನಾಗೇಶ್ ತಂತ್ರಿಗಳ ನೇತೃತ್ವದಲ್ಲಿ ದೇವಳದಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನಡೆದು, ಬಲಿ ಹೊರಟು ಉತ್ಸವ ನಡೆಯಿತು. ಬಳಿಕ ದೇವರು ರಥಾರೂಢರಾಗಿ ರಥ ಬೀದಿಯಲ್ಲಿ ರಥೋತ್ಸವ ನೆರವೇರಿತು. ಬಳಿಕ ಬಲಿ ಉತ್ಸವ ಜರುಗಿ ಮಹಾಪೂಜೆ ನಡೆಯಿತು.ಶುಕ್ರವಾರ ನಸುಕಿನಿಂದಲೇ ನದಿ ಸಂಗಮ ಸ್ಥಳದಲ್ಲಿ ಮಖೆ ತೀರ್ಥ ಸ್ನಾನವು ನೂರಾರು ಭಕ್ತರಿಂದ ನಡೆಯಿತು. ಬಳಿಕ ದೇವಾಲಯದಲ್ಲಿ ಬಲಿ ಹೊರಟು ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ, ಮಹಾಪೂಜೆ ನಡೆಯಿತು. ನಂತರ ಸಾವಿರಾರು ಭಕ್ತರಿಗೆ ಅನ್ನ ಸಂತರ್ಪಣೆ ಜರುಗಿತು.ಈ ಸಂದರ್ಭದಲ್ಲಿ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಧಾಕೃಷ್ಣ ನಾಯ್ಕ್, ಸಮಿತಿ ಸದಸ್ಯರಾದ ಹರೀಶ್ ಉಪಾಧ್ಯಾಯ, ಸೋಮನಾಥ, ಡಾ.ರಮ್ಯ ರಾಜಾರಾಮ್, ಅನಿತಾ ಕೇಶವ ಗೌಡ, ಬಿ.ಗೋಪಾಲಕೃಷ್ಣ ರೈ, ಬಿ.ಕೃಷ್ಣ ರಾವ್ ಅರ್ತಿಲ, ದೇವಿದಾಸ್ ರೈ ಬಿ., ಎಂ.ವೆಂಕಪ್ಪ ಪೂಜಾರಿ ದೇವಳದ ಕಾರ್ಯನಿರ್ವಹಣಾಧಿಕಾರಿ ಚೆನ್ನಪ್ಪ ಗೌಡ, ಮಾಜಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕರುಣಾಕರ ಸುವರ್ಣ, ಮಾಜಿ ಸದಸ್ಯರಾದ ಕಂಗ್ವೆ ವಿಶ್ವನಾಥ ಶೆಟ್ಟಿ, ಹರಿರಾಮಚಂದ್ರ, ಸುನಿಲ್, ಪ್ರೇಮಲತಾ ಕಾಂಚನ, ಜಯಂತ ಪೊರೋಳಿ, ಉಷಾಚಂದ್ರ ಮುಳಿಯ, ಡಾ. ರಾಜಾರಾಮ ಕೆ.ಬಿ., ಸುಂದರ ಗೌಡ, ಸಂಜೀವ ಗಾಣಿಗ, ಪ್ರಮುಖರಾದ ರಾಮಚಂದ್ರ ಮಣಿಯಾಣಿ, ಗೋವಿಂದ ಭಟ್, ಶೋಭಾ ದಯಾನಂದ್, ಗಾಯತ್ರಿ ವಸಂತ್, ಸುಜಾತ ಕೃಷ್ಣ ಆಚಾರ್ಯ, ಕಾಮಾಕ್ಷಿ ಜಿ. ಹೆಗ್ಡೆ, ಐ.ಚಿದಾನಂದ ನಾಯಕ್, ಸುಧಾಕರ ಶೆಟ್ಟಿ, ಹೇರಂಭ ಶಾಸ್ತ್ರಿ, ಶರತ್ ಕೋಟೆ, ಪ್ರಶಾಂತ್ ನೆಕ್ಕಿಲಾಡಿ, ಮಾಜಿ ಶಾಸಕ ಸಂಜೀವ ಮಟಂದೂರು, ಶಶಿಕಲಾ ಭಾಸ್ಕರ್, ಜಯರಾಮ ಶೆಟ್ಟಿ, ಆದೇಶ್ ಶೆಟ್ಟಿ, ಚಂದ್ರಹಾಸ ಹೆಗ್ಡೆ, ಕೈಲಾರ್ ರಾಜಗೋಪಾಲ ಭಟ್, ಡಾ. ಗೋವಿಂದ ಪ್ರಸಾದ್ ಕಜೆ, ಕೃಷ್ಣ ಶೆಣೈ, ಗೋಪಾಲ ಹೆಗ್ಡೆ, ಸದಾನಂದ ಮೊದಲಾದವರು ಭಾಗವಹಿಸಿದ್ದರು.