ಸಾರಾಂಶ
ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ
ಶ್ರೀ ಉಮಾ ಮಹೇಶ್ವರ ಯಕ್ಷಕಲಾ ಇಷುಧಿ ನಿಡ್ಲೆ ಸಂಯೋಜನೆಯಲ್ಲಿ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ಆಶ್ರಯದಲ್ಲಿ ಶ್ರೀಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘದ ಸಹಯೋಗದೊಂದಿಗೆ ಛಲದಂಕ ಚಕ್ರೇಶ್ವರ ತಾಳ ಮದ್ದಳೆ ಜರಗಿತು.ಭಾಗವತರಾಗಿ ಮಹೇಶ ಕನ್ಯಾಡಿ, ಶಾಲಿನಿ ಹೆಬ್ಬಾರ್, ಹಿಮ್ಮೇಳದಲ್ಲಿ ಮುರಾರಿ ಕಡಂಬಳಿತ್ತಾಯ, ಶ್ರೀಪತಿ ಭಟ್ ಉಪ್ಪಿನಂಗಡಿ, ಅರ್ಥಧಾರಿಗಳಾಗಿ ನಿಡ್ಲೆ ಈಶ್ವರ ಪ್ರಸಾದ್ ಪಿ.ವಿ. (ಕೌರವ ) ರವಿ ಭಟ್ ನೆಲ್ಯಾಡಿ (ಭೀಮ-1) ದಿವಾಕರ ಆಚಾರ್ಯ ಗೇರುಕಟ್ಟೆ (ಸಂಜಯ ) ಹರೀಶ ಆಚಾರ್ಯ ಬಾರ್ಯ ( ಅಶ್ವತ್ಥಾಮ ) ಸುಬ್ರಹ್ಮಣ್ಯ ಭಟ್ ಪೆರ್ವೋಡಿ ( ಬೇಹಿನಚರ ) ಶ್ರುತಿವಿಸ್ಮಿತ್ (ಧರ್ಮರಾಯ ) ಅಂಬಾ ಪ್ರಸಾದ ಪಾತಾಳ ( ಶ್ರೀ ಕೃಷ್ಣ ) ಶ್ರೀಧರ ಎಸ್ ಪಿ ಸುರತ್ಕಲ್ ( ಬಲರಾಮ ) ಜಯರಾಮ ನಾಲ್ಗುತ್ತು (ಭೀಮ -2) ಭಾಗವಹಿಸಿದ್ದರು.
ಉಪ್ಪಿನಂಗಡಿ ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘದ ವತಿಯಿಂದ ಯಕ್ಷಕಲಾ ಇಷುದಿಯ ಸ್ಥಾಪಕ ಕಲಾವಿದ ಈಶ್ವರ ಪ್ರಸಾದ ಪಿ.ವಿ ಅವರನ್ನು ಸನ್ಮಾನಿಸಲಾಯಿತು. ಹರೀಶ್ ಆಚಾರ್ಯ ಬಾರ್ಯ ಸನ್ಮಾನಪತ್ರ ವಾಚಿಸಿದರು.ಉಮೇಶ್ ಶೆಣೈ ರಾಮನಗರ, ಬಿ. ಸುಬ್ರಹ್ಮಣ್ಯ ರಾವ್,ರವೀಂದ್ರ ದರ್ಬೆ, ಮಹಾಲಿಂಗೇಶ್ವರ ಭಟ್ ಪೆರಿಯಡ್ಕ, ಜಯರಾಮ ಬಲ್ಯ, ಧಾರ್ಮಿಕ ದತ್ತಿ ಇಲಾಖೆಯ ಪರಿವೀಕ್ಷಕ ಶ್ರೀಧರ ಎಸ್. ಪಿ ಸಹಕರಿಸಿದರು. ಉಪ್ಪಿನಂಗಡಿ ವಿಶ್ವಕರ್ಮ ಸಮಾಜ ಸೇವಾ ಸಂಘದ ಅಧ್ಯಕ್ಷ ಹರೀಶ ಆಚಾರ್ಯ ಪುಳಿತ್ತಡಿ, ಪುಷ್ಪಾ ತಿಲಕ್, ಪ್ರದೀಪ ಆಚಾರ್ಯ ಪುಳಿತ್ತಡಿ, ಗಂಗಾಧರ ಟೈಲರ್ ಉಪಸ್ಥಿತರಿದ್ದರು.ಶ್ರುತಿ ವಿಸ್ಮಿತ್ ಸ್ವಾಗತಿಸಿ ಶ್ರೀಪತಿ ಭಟ್ ವಂದಿಸಿದರು.