ಸಾರಾಂಶ
‘ಟೀಮ್ ಅಘೋರ’ ಉಬಾರ್ ವತಿಯಿಂದ ಮೊದಲನೇ ವರ್ಷದ ಪಿಲಿ ಪಜ್ಜ ಹಾಗೂ ಊದು ಪೂಜೆ ಕಾರ್ಯಕ್ರಮ ಸೆ.೨೭ ಮತ್ತು ೨೮ರಂದು ನಡೆಯಲಿದ್ದು, ಇದರ ದಿನಾಂಕ ಅನಾವರಣ ಕಾರ್ಯಕ್ರಮ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದಲ್ಲಿ ನಡೆಯಿತು.
ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ
‘ಟೀಮ್ ಅಘೋರ’ ಉಬಾರ್ ವತಿಯಿಂದ ಮೊದಲನೇ ವರ್ಷದ ಪಿಲಿ ಪಜ್ಜ ಹಾಗೂ ಊದು ಪೂಜೆ ಕಾರ್ಯಕ್ರಮ ಸೆ.೨೭ ಮತ್ತು ೨೮ರಂದು ನಡೆಯಲಿದ್ದು, ಇದರ ದಿನಾಂಕ ಅನಾವರಣ ಕಾರ್ಯಕ್ರಮ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದಲ್ಲಿ ನಡೆಯಿತು.ಕಾರ್ಯಕ್ರಮದ ದಿನಾಂಕವನ್ನು ಅನಾವರಣಗೊಳಿಸಿದ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ. ರಾಧಾಕೃಷ್ಣ ನಾಯ್ಕ್ ಮಾತನಾಡಿ, ನಮ್ಮ ನಾಡಿನ ಸಾಂಸ್ಕೃತಿಕ ಕಲೆಯಾಗಿರುವ ಪಿಲಿ ನಲಿಕೆಯನ್ನು ಮತ್ತಷ್ಟು ಜನಪ್ರಿಯಗೊಳಿಸುವ ಸಲುವಾಗಿ ಒಗ್ಗೂಡಿರುವ ಟೀಂ ಅಘೋರ ತಂಡಕ್ಕೆ ಯಶಸ್ಸು ಪ್ರಾಪ್ತಿಯಾಗಲಿ. ಇನ್ನಷ್ಟು ಸಮಾಜಮುಖಿ ಕಾರ್ಯಕ್ರಮ ಮಾಡಲು ದೇವರ ಪ್ರೇರಣೆ ಲಭಿಸಲಿ ಎಂದು ತಿಳಿಸಿದರು.ಈ ಸಂದರ್ಭ ಟೀಮ್ ಅಘೋರದ ಗೌರವಾಧ್ಯಕ್ಷ ಸಂತೋಷ್ ನಟ್ಟಿಬೈಲು, ಅಧ್ಯಕ್ಷ ಬ್ರಿಜೇಶ್ ಎಂ.ಎನ್. ಹಾಗೂ ಸದಸ್ಯರಾದ ಸಚಿತ್ ಗೌಂಡತ್ತಿಗೆ, ಜಿತೇಶ್ ಶೆಟ್ಟಿ ಕಜೆಕ್ಕಾರು, ಕಾರ್ತಿಕ್ ಉಪ್ಪಿನಂಗಡಿ, ರಶ್ಮಿತ್ ಶೆಟ್ಟಿ, ಮುರಳೀ ಸುಭಾಶ್‌ನಗರ, ಧನುಶ್ ಅಂಡೆತ್ತಡ್ಕ, ಅವಿನಾಶ್, ಪ್ರಜ್ವಲ್, ಸಂಪತ್, ಪವನ್, ಸಚಿನ್ ಕಜೆಕ್ಕಾರ್, ನರೇಂದ್ರ , ಅಂಕಿತ್ ಪೂಜಾರಿ, ರಕ್ಷಿತ್ ಹೆಗ್ಡೆ, ಪ್ರಘ್ನೇಶ್, ಭವಿತ್ ಶೆಟ್ಟಿ, ಆದಿತ್ಯ, ಚಂದ್ರಶೇಖರ್ ಮಡಿವಾಳ, ಪ್ರಕಾಶ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.