ಅರ್ಬನ್ ಬ್ಯಾಂಕ್‌ಗೆ ಶೇಖರ ಅಧ್ಯಕ್ಷ, ಗಿರಮಲ್ಲಪ್ಪ ಉಪಾಧ್ಯಕ್ಷ

| Published : Mar 29 2024, 12:55 AM IST

ಸಾರಾಂಶ

ಮಹಾಲಿಂಗಪುರ ಪಟ್ಟಣದ ಪ್ರತಿಷ್ಠಿತ ಬ್ಯಾಂಕ್‌ಗಳಲ್ಲಿ ಒಂದಾದ ಮಹಾಲಿಂಗಪುರ ಅರ್ಬನ್‌ ಕೋ ಆಪ್ ಬ್ಯಾಂಕ್‌ಗೆ ನೂತನ ಅಧ್ಯಕ್ಷರಾಗಿ ಶೇಖರ ಅಂಗಡಿ ಆಯ್ಕೆಯಾದರೆ, ಉಪಾಧ್ಯಕ್ಷರಾಗಿ ಗಿರಮಲ್ಲಪ್ಪ ಕಬಾಡಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಎಸ್.ಕೆ.ಸಾರವಾಡ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ಪಟ್ಟಣದ ಪ್ರತಿಷ್ಠಿತ ಬ್ಯಾಂಕ್‌ಗಳಲ್ಲಿ ಒಂದಾದ ಮಹಾಲಿಂಗಪುರ ಅರ್ಬನ್‌ ಕೋ ಆಪ್ ಬ್ಯಾಂಕ್‌ಗೆ ನೂತನ ಅಧ್ಯಕ್ಷರಾಗಿ ಶೇಖರ ಅಂಗಡಿ ಆಯ್ಕೆಯಾದರೆ, ಉಪಾಧ್ಯಕ್ಷರಾಗಿ ಗಿರಮಲ್ಲಪ್ಪ ಕಬಾಡಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಎಸ್.ಕೆ.ಸಾರವಾಡ ತಿಳಿಸಿದ್ದಾರೆ.

ಬ್ಯಾಂಕ್‌ಗೆ ಇತ್ತೀಚಿಗೆ ನಡೆದ ಚುನಾವಣೆಯಲ್ಲಿ ಶೇಖರ ಅಂಗಡಿ ಪೆನಲ್ ಜಯಭೇರಿ ಬೀರಿಸಿತು. ಆದರೆ, ಕಾರಣಾಂತರಗಳಿಂದ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ವಿಳಂಬವಾಗಿತ್ತು. ಗುರುವಾರ ನಡೆದ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯಲ್ಲಿ ಮೊದಲ 20 ತಿಂಗಳು ಅವಧಿಗೆ ಅಧ್ಯಕ್ಷರಾಗಿ ಶೇಖರ ಬಸಪ್ಪ ಅಂಗಡಿ, ಉಪಾಧ್ಯಕ್ಷರಾಗಿ ಗಿರಮಲ್ಲಪ್ಪ ಕಬಾಡಿ ಅವಿರೋಧವಾಗಿ ಆಯ್ಕೆಯಾಗಿದ್ದು, ಒಟ್ಟು 12 ಸದಸ್ಯರನ್ನು ಒಳಗೊಂಡ ಆಯ್ಕೆ ಪ್ರಕ್ರಿಯೆಯಲ್ಲಿ ಮಹಾದೇವ ಮಾರಾಪುರ, ಫಕ್ರುದ್ದಿನ್‌ ಕುಂಟೋಜಿ, ಅಶೋಕ ಜ.ಅಂಗಡಿ, ಶ್ರೀಶೈಲ ಹಿಪ್ಪರಗಿ, ಲಕ್ಷ್ಮೀ ಬಸವರಾಜ ದಿನ್ನಿಮನಿ ಮತ್ತು ಮಹಾಲಿಂಗಪ್ಪ ಕೋಳಿಗುಡ್ಡ, ಗುರುಪಾದ ಅಂಬಿ, ವಿರುಪಾಕ್ಷಯ್ಯ ಪಂಚಕಟ್ಟಿಮಠ, ಹೊಳೆಪ್ಪ ಬಾಡಗಿ, ಅಕ್ಷತಾ ಹಲಗತ್ತಿ ಅವರುಗಳು ಸದಸ್ಯರಾಗಿ ಕಾರ್ಯನಿರ್ವಹಿಸಲಿದ್ದಾರೆ.

ಈ ಸಂದರ್ಭದಲ್ಲಿ ಗಣ್ಯರಾದ ಯಲ್ಲನಗೌಡ ಪಾಟೀಲ, ಮಹಾಲಿಂಗಪ್ಪ ಕುಳ್ಳೋಳ್ಳಿ, ಮಹಾಲಿಂಗಪ್ಪ ತಟ್ಟಿಮನಿ, ಚಂದ್ರು ಗೊಂದಿ, ಅಶೋಕ ಅಂಗಡಿ, ಚನ್ನಪ್ಪ ಪಟ್ಟಣಶೆಟ್ಟಿ, ಬಸವರಾಜ ರಾಯರ, ಸುನೀಲಗೌಡ ಪಾಟೀಲ, ಬಲವಂತಗೌಡ ಪಾಟೀಲ, ಮಲ್ಲಪ್ಪ ಕುಳ್ಳೋಳ್ಳಿ, ಶ್ರೀಶೈಲಪ್ಪ ಉಳ್ಳಾಗಡ್ಡಿ, ಬಸವರಾಜ ಘಟ್ನಟ್ಟಿ, ನಿಂಗಪ್ಪ ಬಾಳಿಕಾಯಿ, ಶಿವಾನಂದ ಅಂಗಡಿ, ಅಣ್ಣೇಶ ಉಳ್ಳಾಗಡ್ಡಿ, ಶ್ರೀಶೈಲಗೌಡ ಪಾಟೀಲ, ಮಹಾದೇವಪ್ಪ ಬಂಡಿ, ಮುಸ್ತಾಕ ಚಿಕ್ಕೋಡಿ, ಮಹೇಶ ಮುಕುಂದ, ಮಹಾದೇವ ಕಡಬಲ್ಲವರ, ನಾಗಲಿಂಗ ಬಡಿಗೇರ, ಶಿವು ಹೂಗಾರ, ಪರಸು ಅಮರಾವತಿ, ಮುಭಾರಕ ಹಳಿಂಗಳಿ, ಮುತ್ತು ಬಜಂತ್ರಿ, ಮ್ಯಾನೇಜರ್‌ ಎಸ್.ಎಂ.ಗುಣದಾಳ, ಸಿಬ್ಬಂದಿಯರಾದ ಎಂ.ಎಂ.ಗುಜ್ಜರ, ಎಸ್.ಜಿ.ಹುಬ್ಬಳ್ಳಿ, ಎಸ್.ಆರ್.ಹಿಕಟಿ, ಐ.ಎಸ್.ಮಠದ, ರಾಜು ಕಾಗಿ, ಎಂ.ಎಸ್.ದಂಡಿನ ಸೇರಿದಂತೆ ಹಲವರು ಇದ್ದರು. ಅಧ್ಯಕ್ಷಪಟ್ಟ ನೀಡುವಲ್ಲಿ ನನಗೆ ಸಹಕರಿಸಿದ ಎಲ್ಲ ಹಿರಿಯರ ಮಾರ್ಗದರ್ಶನದ ಮೇರೆಗೆ ಆಡಳಿತ ನಡೆಸುತ್ತೇನೆ. ಯಾವುದೆ ರೀತಿ ದುಂದು ವೆಚ್ಚವನ್ನು ಬ್ಯಾಂಕ್‌ನಲ್ಲಿ ಮಾಡದೇ ಅತೀ ಕಡಿಮೆ ಅವಧಿಯಲ್ಲಿ ಬ್ಯಾಂಕ್‌ನ ಸರ್ವತೋಮುಖ ಅಭಿವೃದ್ಧಿಗೆ ಹಗಲಿರುಳು ದುಡಿಯುತ್ತೇನೆ. ಇದು ಗ್ರಾಮದ ಎಲ್ಲರ ಅಚ್ಚುಮೆಚ್ಚಿನ ಬ್ಯಾಂಕ್‌ ಆಗಿರುವುದರಿಂದ ನಿಮ್ಮೆಲ್ಲರ ಸಹಕಾರ ಅವಶ್ಯವಾಗಿ ಬೇಕು. ಇನ್ನು ಮುಂದೆ ಎಲ್ಲರೂ ಈ ಬ್ಯಾಂಕ್‌ನೊಂದಿಗೆ ಉತ್ತಮ ರೀತಿಯಲ್ಲಿ ವ್ಯವಹರಿಸಲು ಮುಂದಾಗಿರಿ.

-ಶೇಖರ ಅಂಗಡಿ,

ನೂತನ ಅಧ್ಯಕ್ಷರು.

-------------

ಹಿಂದಿನ ದ್ವೇಷ, ಅಸೂಯೆಗಳನ್ನು ಮರೆತು ಬ್ಯಾಂಕ್‌ನ ಅಭಿವೃದ್ಧಿಗಾಗಿ ಸರ್ವರು ತಮ್ಮ ಶಕ್ತಿಮೀರಿ ಶ್ರಮಿಸಬೇಕು. ಬ್ಯಾಂಕ್‌ ಸಿಬ್ಬಂದಿ ಸಹ ಸರ್ವ ಸದಸ್ಯರ ವಿಚಾರಕ್ಕೆ ತಕ್ಕಂತೆ ಕೆಲಸ ನಿರ್ವಹಿಸಬೇಕು. ಒಟ್ಟಿನಲ್ಲಿ ಎಲ್ಲರ ಶ್ರಮದಿಂದ ಈ ಬ್ಯಾಂಕ್‌ ಅಭಿವೃದ್ಧಿ ಹೊಂದಿ ಪಟ್ಟಣದ ಎಲ್ಲ ಬ್ಯಾಂಕ್‌ಗಳಲ್ಲಿ ಇದು ಒಂದು ಎನ್ನುವ ಹೆಸರು ಬರುವ ಹಾಗೆ ನೀವೆಲ್ಲರೂ ಪ್ರಾಮಾಣಿಕತೆಯಿಂದ ಬ್ಯಾಂಕ್‌ ಅಭಿವೃದ್ಧಿಗಾಗಿ ಕೆಲಸ ಮಾಡಬೇಕು.

-ಧರೆಪ್ಪಣ್ಣ ಸಾಂಗ್ಲಿಕರ, ಪಂಚಮಸಾಲಿ ಸಮಾಜದ ಮುಖಂಡ.

-------------