ಸಾರಾಂಶ
ಬಿ.ಎಸ್. ಯಡೂಯರಪ್ಪ, ಬಸವರಾಜುಬೊಮ್ಮಾಯಿ ಸಿಎಂಯಾಗಿದ್ದ ಅವಧಿಯಲ್ಲಿ ಗಾಣಿಗರ ಅಭಿವೃದ್ದಿ ನಿಗಮ ಸ್ಥಾಪನೆಗೆ ಘೋಷಣೆಯಾಗಿತ್ತು, ಆದರೆ ಕೆಲ ಕಾರಣಗಳಿಂದ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಸಿಎಂ ಇದನ್ನು ಗಂಭೀರವಾಗಿ ಪರಿಗಣಿಸಿ ನಿಗಮ ಸ್ಥಾಪನೆಗೆ ತ್ವರಿತವಾಗಿ ಸೂಕ್ತ ಕ್ರಮ ತೆಗೆದುಕೊಳ್ಳಲು ಮುಂದಾಗಲಿ.
ಕನ್ನಡಪ್ರಭ ವಾರ್ತೆ ಮುಳಬಾಗಿಲು ಗಾಣಿಗರ ಅಭಿವೃದ್ದಿ ನಿಗಮ ಸ್ಥಾಪನೆಗೆ ಅಧಿಕೃತ ಆದೇಶ ಹೊರಡಿಸಿ, ಹೆಚ್ಚಿನ ಅನುದಾನ ಬಿಡುಗಡೆಗೊಳಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯರವರನ್ನು ಶ್ರೀ ಕ್ಷೇತ್ರ ತೈಲೇಶ್ವರ ಗಾಣಿಗರ ಮಹಾ ಸಂಸ್ಥಾನ ಮಠಾದೀಶ ಶ್ರೀ ಪೂರ್ಣಾನಂದಪುರಿ ಮಹಾ ಸ್ವಾಮಿ ಒತ್ತಾಯಿಸಿದರು.ತಾಲೂಕಿನ ಕುರುಡುಮಲೆ ವಿನಾಯಕ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ೨೦೨೫ರ ಜ.೧೧ರಂದು ನಡೆಯಲಿರುವ ಗಾಣಿಗರ ಹಬ್ಬ ಕಾರ್ಯಕ್ರಮದ ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು.ನಿಗಮ ಸ್ಥಾಪಿಸಲು ಒತ್ತಾಯ
ಬಿ.ಎಸ್. ಯಡೂಯರಪ್ಪ, ಬಸವರಾಜುಬೊಮ್ಮಾಯಿ ಸಿಎಂಯಾಗಿದ್ದ ಅವಧಿಯಲ್ಲಿ ಗಾಣಿಗರ ಅಭಿವೃದ್ದಿ ನಿಗಮ ಸ್ಥಾಪನೆಗೆ ಘೋಷಣೆಯಾಗಿತ್ತು, ಆದರೆ ಕೆಲ ಕಾರಣಗಳಿಂದ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಸಿಎಂ ಇದನ್ನು ಗಂಭೀರವಾಗಿ ಪರಿಗಣಿಸಿ ನಿಗಮ ಸ್ಥಾಪನೆಗೆ ತ್ವರಿತವಾಗಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ತಿಳಿಸಿದರು.ಗಾಣಿಗರ ಸಮುದಾಯದ ಏಕತೆ ಹಾಗೂ ಸಂಘಟನಾ ಶಕ್ತಿ ಪ್ರದರ್ಶನ ಮಾಡುವ ಉದ್ದೇಶದಿಂದ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಹಕ್ಕೋತ್ತಾಯ ಮಾಡಲು ಗಾಣಿಗರ ಹಬ್ಬವನ್ನು ಅತ್ಯಂತ ವೈಭವದಿಂದ ನಡೆಸಲಾಗುವುದು. ಕಾರ್ಯಕ್ರಮವನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟನೆ ಮಾಡಲಿದ್ದು, ಡಿಸಿಎಂ ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ಎಂ.ವೀರಪ್ಪಮೊಯ್ಲಿ, ಸಚಿವರಾದ ಹೆಚ್.ಕೆ.ಪಾಟೀಲ್, ಹೆಚ್.ಸಿ. ಮಹದೇವಪ್ಪ, ದಿನೇಶ್‌ಗುಂಡೂರಾವ್, ಶಿವರಾಜ್ ತಂಗಡಗಿ ಸೇರಿದಂತೆ ಶಾಸಕರು, ಸಂಸದರು ಸಮುದಾಯದ ಹಿರಿಯ ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.ದ್ವಿತೀಯ ಪೀಠಾರೋಹಣ
ಕಾರ್ಯಕ್ರಮದ ನಡೆಯುವ ದಿನದದಂದು ಗುರುಗಳಿಗೆ ವಂದನೆ ಮತ್ತು ವಿಚಾರ ಸಂಕಿರಣ ಏರ್ಪಡಿಸಲಾಗಿದೆ. ಶ್ರೀ ಕೈಲಾಸ ಆಶ್ರಮ ಮಹಾ ಸಂಸ್ಥಾನದ ಪೀಠಾಧಿಪತಿ ಶ್ರೀ ಜಯೇಂದ್ರ ಪುರಿ ಮಹಾ ಸ್ವಾಮಿ ಮತ್ತು ಇನ್ನಿತರ ಸ್ವಾಮಿಗಳಿಂದ ಮಹಾ ಸ್ವಾಮಿಗಳಿಗೆ ದ್ವಿತೀಯ ಪೀಠಾರೋಹಣ ಸಮಾರಂಭ ನಡೆಯಲಿದೆ. ಇದೇ ದಿವಸ ನೂತನ ಶಾಲಾ ಕಟ್ಟಡ ಹಾಗೂ ಪ್ರಸಾದ ಮನೆಯ ಕಟ್ಟಡಗಳ ಉದ್ಘಾಟನೆ ನಡೆಯಲಿದೆ ಎಂದು ತಿಳಿಸಿದರು. ಮಠದ ಟ್ರಸ್ಟಿ ಪಿ.ಜಿ. ವಿಜಯ್ ಕುಮಾರ್ ಗಾಣಿಗ, ಮಾದವಿ ವಿಜಯ್ ಕುಮಾರ್, ಉಪಾಧ್ಯಕ್ಷ ರಂಗರಾಜನ್, ಮುಖಂಡರಾದ ನರಸಾಪುರ ಅಮರ್‌ನಾಥ್, ಟಿ.ಎಂ. ಅಶೋಕ್, ರಾಜಶೇಖರ್, ಕೆ.ವಿ. ರಮೇಶ್, ವೇಣುಗೋಪಾಲ್, ಜ್ಞಾನಜ್ಯೋತಿ ವಿದ್ಯಾಸಂಸ್ಥೆಯ ಚಂದ್ರಶೇಖರ್, ಮಂಜುಳ, ಎಸ್‌ಡಿಸಿ ಕಾಲೇಜಿನ ಪ್ರಿನ್ಸಿಪಾಲ್ ಮುರಳಿಕೃಷ್ಣ, ಶ್ರೀ ಶಾರದ ವಿದ್ಯಾಸಂಸ್ಥೆಯ ಅಧ್ಯಕ್ಷ ಎಂ.ಸಿ. ದೇವರಾಜ್, ಕಾರ್ಯದರ್ಶಿ ಟಿ.ಎಸ್. ರಮೇಶ್, ನಿರ್ದೇಶಕ ಗೋವಿಂದರಾಮ್, ಹಿರಿಯರಾದ ಎಸ್.ಎನ್. ಲಕ್ಷ್ಮಿಪತಿ, ನಾಗರಾಜ್ ಮತ್ತಿತರರು ಇದ್ದರು.