ಸಾರಾಂಶ
ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ಅವರಿಗೆ ಮನವಿ ಸಲ್ಲಿಸಿದ ಗ್ರಾಮಸ್ಥರು,
ಕನ್ನಡ ಪ್ರಭ ವಾರ್ತೆ, ಚಿಕ್ಕಮಗಳೂರುಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಸಮುದಾಯಕ್ಕೆ ಸ್ಮಶಾನ ಜಾಗ ಮೀಸಲಿರಿಸಬೇಕು ಎಂದು ಆಲ್ದೂರಿನ ಗ್ರಾಮಸ್ಥರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ. ಈ ಸಂಬಂಧ ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ಅವರಿಗೆ ಮನವಿ ಸಲ್ಲಿಸಿದ ಗ್ರಾಮಸ್ಥರು, ಶವಸಂಸ್ಕಾರಕ್ಕೆ ಜಾಗವಿಲ್ಲದೇ ತೀವ್ರ ತೊಂದರೆಯಾಗಿರುವ ಹಿನ್ನೆಲೆಯಲ್ಲಿ ಜನಾಂಗದ ಸ್ಮಶಾನಕ್ಕೆ ಮಾತ್ರ ಜಾಗ ಮೀಸಲಿಡಬೇಕು ಎಂದು ಆಗ್ರಹಿಸಿದರು. ಬಳಿಕ ಮಾತನಾಡಿದ ಭೀಮ್ ಆರ್ಮಿ ಅಧ್ಯಕ್ಷ ಗಿರೀಶ್, ತಾಲೂಕಿನ ಆಲ್ದೂರು ಹೋಬಳಿ ಚಿಕ್ಕಮಾಗರವಳ್ಳಿ ಗ್ರಾಮದ ಸ.ನಂ.108 ರ ಬೀರಂಜಿ ಹೊಳೆ ಸಮೀಪ 2.32 ಎಕರೆ ಪ.ಜಾತಿ ಮತ್ತು ವರ್ಗದವರ ಸ್ಮಶಾನ ಜಾಗವಿದ್ದು ಈ ಜಾಗವನ್ನು ಆಲ್ದೂರು ಗ್ರಾಪಂ ನವರು ಒಕ್ಕಲಿಗರ ನಿವೇಶನಕ್ಕೆ ಮೀಸಲಿಟ್ಟು, ಕಂದಾಯ ಪಾವತಿಸಲಾಗುತ್ತಿದೆ ಎನ್ನುತ್ತಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ಜನಾಂಗದ ಶವಸಂಸ್ಕಾರ ನಡೆಸಲು ತೀವ್ರ ಸಮಸ್ಯೆಯಾಗಿದೆ. ಬಿರಂಜಿ ಹೊಳೆ ಸಮೀಪದ ಸ್ಮಶಾನದ ಜಾಗದ ವಿಚಾರವಾಗಿ ಸಂಬಂಧಿತ ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ಹೊರಹಾಕಿದರು. ಜಿಲ್ಲಾಡಳಿತ ಪ.ಜಾತಿ ಮತ್ತು ಪ.ಪಂಗಡದವರಿಗೆ ಆಲ್ದೂರು ಗ್ರಾಮದಲ್ಲಿ ಸ್ಮಶಾನ ಜಾಗವನ್ನು ಜನಾಂಗಕ್ಕೆ ಮಿಸಲಿಟ್ಟು ಶವಸಂಸ್ಕಾರಕ್ಕೆ ಅನುವು ಮಾಡಿಕೊಡಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಆಲ್ದೂರು ಗ್ರಾಮಸ್ಥರಾದ ಮನು, ವೆಂಕಟೇಶ್, ಎ.ಎಸ್.ನಿಂಗಪ್ಪ, ಪುನೀತ್, ಚಂದ್ರಶೇಖರ್ ಹಾಜರಿದ್ದರು.
15 ಕೆಸಿಕೆಎಂ 2ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಸಮುದಾಯಕ್ಕೆ ಸ್ಮಶಾನ ಜಾಗವನ್ನು ಮೀಸಲಿರಿಸಬೇಕೆಂದು ಆಗ್ರಹಿಸಿ ಆಲ್ದೂರಿನ ಗ್ರಾಮಸ್ಥರು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರಿಗೆ ಮನವಿ ಸಲ್ಲಿಸಿದರು.