ಸಾರಾಂಶ
ಅಡಕೆ ಆರೋಗ್ಯಕ್ಕೆ ಹಾನಿಕಾರಕವಲ್ಲ. ಅಡಕೆ ಕುರಿತು ಸಂಶೋಧನೆ ಮಾಡಲು ನುರಿತ ತಂಡವನ್ನು ರಚಿಸಿ, ವೈಜ್ಞಾನಿಕ ವರದಿ ತಯಾರಿಸಿ ಸುಪ್ರೀಂಕೋರ್ಟ್ಗೆ ಸಲ್ಲಿಸುವ ಮೂಲಕ ಅಡಕೆಗೆ ಬಂದಿರುವ ಕೆಟ್ಟಹೆಸರು ತೆಗೆದುಹಾಕಬೇಕು ಎಂದು ರೈತ ಸಂಘ ಸಾಮೂಹಿಕ ನಾಯಕತ್ವ ಶಾಖೆ ವತಿಯಿಂದ ಉಪವಿಭಾಗಾಧಿಕಾರಿಗಳ ಕಚೇರಿ ಮೂಲಕ ಪ್ರಧಾನ ಮಂತ್ರಿಗಳಿಗೆ ಶುಕ್ರವಾರ ಮನವಿ ಸಲ್ಲಿಸಿದೆ.
ಕನ್ನಡಪ್ರಭ ವಾರ್ತೆ ಸಾಗರ
ಅಡಕೆ ಆರೋಗ್ಯಕ್ಕೆ ಹಾನಿಕಾರಕವಲ್ಲ. ಅಡಕೆ ಕುರಿತು ಸಂಶೋಧನೆ ಮಾಡಲು ನುರಿತ ತಂಡವನ್ನು ರಚಿಸಿ, ವೈಜ್ಞಾನಿಕ ವರದಿ ತಯಾರಿಸಿ ಸುಪ್ರೀಂಕೋರ್ಟ್ಗೆ ಸಲ್ಲಿಸುವ ಮೂಲಕ ಅಡಕೆಗೆ ಬಂದಿರುವ ಕೆಟ್ಟಹೆಸರು ತೆಗೆದುಹಾಕಬೇಕು ಎಂದು ರೈತ ಸಂಘ ಸಾಮೂಹಿಕ ನಾಯಕತ್ವ ಶಾಖೆ ವತಿಯಿಂದ ಉಪವಿಭಾಗಾಧಿಕಾರಿಗಳ ಕಚೇರಿ ಮೂಲಕ ಪ್ರಧಾನ ಮಂತ್ರಿಗಳಿಗೆ ಶುಕ್ರವಾರ ಮನವಿ ಸಲ್ಲಿಸಿದೆ.ತಲತಲಾಂತರದಿಂದ ರೈತರು ಅಡಕೆ ಬೆಳೆಯುತ್ತಿದ್ದು, ಎಲೆ, ಅಡಕೆ ಸುಣ್ಣ ಸೇವನೆ ಆರೋಗ್ಯ ವೃದ್ಧಿಸುತ್ತದೆ ಎಂಬುದು ಸಾಬೀತಾಗಿದೆ. ಎಲೆ ಅಡಕೆ ಸೇವಿಸಿ ಬಾಯಿ ಕ್ಯಾನ್ಸರ್ ಕಾಯಿಲೆ ಬಂದು ಸಾವಿಗೀಡಾದ ಉದಾಹರಣೆ ಇಲ್ಲ. ಇದೀಗ ವಿಶ್ವ ಆರೋಗ್ಯ ಸಂಸ್ಥೆ ಅಡಕೆ ಸೇವಿಸುವುದರಿಂದ ಬಾಯಿ ಕ್ಯಾನ್ಸರ್ ಬರುತ್ತದೆ ಎಂದು ವರದಿ ನೀಡಿದೆ. ಗುಟ್ಕಾ ಕಂಪನಿಗಳು ಹಣ ಮಾಡುವ ಉದ್ದೇಶದಿಂದ ಅಡಕೆ ಜೊತೆ ಹಾನಿಕಾರಕ ರಾಸಾಯನಿಕ ಬಳಕೆ ಮಾಡುತ್ತಿರುವುದರಿಂದ ಅಡಕೆ ಗುಣಮಟ್ಟ ಕೆಡುತ್ತಿದೆಯೆ ವಿನಃ ಅಡಕೆ ಸೇವನೆ ಹಾನಿಕಾರಕವಲ್ಲ ಎಂದು ಮನವಿಯಲ್ಲಿ ತಿಳಿಸಲಾಗಿದೆ.ಸುಪ್ರೀಂ ಕೋರ್ಟ್ನಲ್ಲಿ ಅಡಕೆ ಹಾನಿಕಾರಕ ಎಂಬ ವಿಷಯ ಕುರಿತು ವಾದ ಪ್ರತಿವಾದ ನಡೆಯುತ್ತಿದೆ. ಇಂತಹ ಹೊತ್ತಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆ ವರದಿ ರೈತರಿಗೆ ಮರಣ ಶಾಸನವಾಗಿ ಮಾರ್ಪಟ್ಟಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಅಡಕೆ ಬೆಳೆಗಾರರ ಹಿತರಕ್ಷಣೆ ಮಾಡಲು ಕೇಂದ್ರ ಸರ್ಕಾರ ಮುಂದೆ ಬರಬೇಕು. ಅಡಕೆ ಕುರಿತು ವೈಜ್ಞಾನಿಕ ಸಂಶೋಧನೆ ನಡೆಸಲು ತಂಡವನ್ನು ರಚಿಸಿ ಸುಪ್ರೀಂ ಕೋರ್ಟ್ಗೆ ಅಫಿಡವೀಟ್ ಸಲ್ಲಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.ಮಲೆನಾಡು ಭೂರಹಿತ ಹೋರಾಟ ವೇದಿಕೆ ಅಧ್ಯಕ್ಷ ತೀ.ನ. ಶ್ರೀನಿವಾಸ್ ಮಾತನಾಡಿದರು. ರೈತ ಸಂಘದ ಎಂ.ಬಿ. ಮಂಜಪ್ಪ ಹಿರೇನೆಲ್ಲೂರು, ಗೂರಲಕೆರೆ ಚಂದ್ರಶೇಖರ್, ಕನ್ನಪ್ಪ ಹೊಸಕೊಪ್ಪ, ಜಯಲಕ್ಷ್ಮೀ ನೇದರವಳ್ಳಿ, ದೇವು, ರಮೇಶ್ ಐಗಿನಬೈಲು, ಬಂಗಾರಪ್ಪ, ಡಾ. ರಾಜು ಇನ್ನಿತರರು ಹಾಜರಿದ್ದರು.