ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ತಾಲೂಕಿನ ಟಿ.ಮಲ್ಲಿಗೆರೆ ಗ್ರಾಮದಲ್ಲಿ ಏ.22 ಮತ್ತು 23ರಂದು ಎರಡು ದಿನಗಳ ಕಾಲ ಶ್ರೀಉರುಮಾರಮ್ಮ ಮತ್ತು ಶ್ರೀಮಹಾದೇವಮ್ಮ ಜೋಡಿ ಹಬ್ಬದ ಜಾತ್ರಾ ಮಹೋತ್ಸವ ನಡೆಯಲಿದೆ.ಜಾತ್ರಾ ಮಹೋತ್ಸವಕ್ಕಾಗಿ ಶ್ರೀ ಉರುಮಾರಮ್ಮ ಮತ್ತು ಶ್ರೀಮಹಾದೇವಮ್ಮ ದೇವಸ್ಥಾನ ಸೇವಾ ಸಮಿತಿ ಮತ್ತು ಯಜಮಾನರು, ಮುಖಂಡರು, ಗ್ರಾಮಸ್ಥರು ಒಕ್ಕಲು ತನಕ್ಕೆ ಸೇರಿದ ಗ್ರಾಮಸ್ಥರು, ಆರ್ಥಿಕ ಸಹಾಯ ಮಾಡಿದ ಗ್ರಾಮಗಳ ಜನರ ಸಹಕಾರದಲ್ಲಿ ಸಕಲ ಸಿದ್ಧತೆ ಕೈಗೊಂಡಿದ್ದಾರೆ.
ಎರಡು ದಿನಗಳ ಜಾತ್ರೆಗೆ ಸಹಸ್ರಾರು ಭಕ್ತರು ಭಾಗವಹಿಸುವ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ದೇಗುಲ ಮತ್ತು ಗ್ರಾಮದ ಸುತ್ತಾಮುತ್ತ ವಿಶೇಷ ವಿದ್ಯುತ್ ದೀಪಾಲಂಕಾರವನ್ನು ಮಾಡಲಾಗಿದೆ.ಏ.22 ರಂದು ಸಂಜೆ 4.30ಕ್ಕೆ ಜೋಡಿ ಎತ್ತುಗಳ ಬಂಡಿ ಉತ್ಸವ ಉದ್ಘಾಟನೆ, 5.30ಕ್ಕೆ ಪುರ ಗ್ರಾಮದ ಜೋಡಿ ಬಸವೇಶ್ವರ ಪೂಜಾ ಕುಣಿತ ಸಮೇತ ಬಸಪ್ಪ ಹಾಗೂ ಸೂಗನಹಳ್ಳಿ ಬಸಪ್ಪ ಆಗಮನ, ನಂತರ 6.30ಕ್ಕೆ ಶ್ರೀ ಉರಮಾರಮ್ಮ ಪೂಜೆ, ಶ್ರೀ ಮಹಾದೇವಮ್ಮನ ಕರಗ ಹಾಗೂ ಶ್ರೀ ಬಸವೇಶ್ವರ ಪೂಜೆ, ಶ್ರೀ ಹಂಚಿದೇಮ್ಮನ ಹೆಬ್ಬಾರೆ, ವೆಂಕಟೇಶ್ವರನ ಖಣಜ ಮೆರವಣಿಗೆ ನಡೆಯಲಿದೆ.
ಏ.23 ರಂದು ಬೆಳಗ್ಗೆ 7 ಗಂಟೆಗೆ ಹೂ ಹೊಂಬಾಳೆ ಮತ್ತು ಬಾಯಿಬೀಗ, 9 ಗಂಟೆಗೆ ಕೊಂಡೋತ್ಸವ, ಬೆಳಗ್ಗೆ 10.30ಕ್ಕೆ ಅನ್ನಸಂತರ್ಪಣೆ, 11 ಗಂಟೆಗೆ ಮಡೆ ಮತ್ತು ತಂಬಿಟ್ಟಿನ ಆರತಿ, ಸಂಜೆ 4.30ರಿಂದ ಸ್ಥಂಭದ್ವಜಾ ವಿಸರ್ಜನೆ ಜರುಗಲಿದೆ ಎಂದು ಮೈಷುಗರ್ ಮಾಜಿ ಅಧ್ಯಕ್ಷ ಸಿದ್ದರಾಮೇಗೌಡ ತಿಳಿಸಿದ್ದಾರೆ.ಮೇ 6 ಮತ್ತು 7 ರಂದು 39 ನೇ ವರ್ಷದ ದಿಂಡಿ ಮಹೋತ್ಸವ
ಕನ್ನಡಪ್ರಭ ವಾರ್ತೆ ಮಂಡ್ಯನಗರದ ಶ್ರೀಪಾಂಡುರಂಗ ಸ್ವಾಮಿ ದೇವಸ್ಥಾನದ 39ನೇ ವರ್ಷದ ದಿಂಡಿ ಮಹೋತ್ಸವ ಮೇ 6 ಮತ್ತು 7 ರಂದು ನಡೆಯಲಿದೆ.
ಕಾರ್ಯಕ್ರಮದಲ್ಲಿ ಭಾವಸಾರ ಕ್ಷತ್ರಿಅಯ ಸಮಾಜದ ಅಧ್ಯಕ್ಷ ಎನ್. ಶಿವರಾವ್ ಮಿರಸ್ಕರ್ ಅಧ್ಯಕ್ಷತೆ ವಹಿಸುವರು. ಮೇ 6 ರಂದು ಮಧ್ಯಾಹ್ನ 3:30ಕ್ಕೆ ವಿವೇಕ ಜಾಗೃತ ಬಳಗ ಇವರಿಂದ ಭಜನೆ ಹಾಗೂ ಸತ್ಸಂಗ ಕಾರ್ಯಕ್ರಮ, ಸಂಜೆ 4.30 ರ ನಂತರ ಪೋತಿ (ಗ್ರಂಥ) ಸ್ಥಾಪನೆ ಹಾಗೂ ಜ್ಞಾನೇಶ್ವರಿ ಗ್ರಂಥ ಪಾರಾಯಣ, ಸಂಜೆ 7 ಗಂಟೆಗೆ ಸಾಗರದ ಶ್ರೀಶಿವಶಂಕರ್ ಡೋಯೋಜೋಡೆರವರಿಂದ ವಿಶೇಷ ಕೀರ್ತನೆ ಕಾರ್ಯಕ್ರಮ ನಡೆಯಲಿದೆ.ಮೇ 7 ರಂದು ಮುಂಜಾನೆ 5.30 ಗಂಟೆಗೆ ಕಾಕಡಾರತಿ, ಬೆಳಗ್ಗೆ 9 ರಿಂದ ರುಕ್ಮಿಣಿ ಸತ್ಯಭಾಮ ಸಮೇತ ಶ್ರೀಪಾಂಡುರಂಗ ಸ್ವಾಮಿ ದೇವತಾ ಮೂರ್ತಿಗಳ ದಿಂಡಿ ಉತ್ಸವದ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ, ಮಧ್ಯಾಹ್ನ 12 ಗಂಟೆಗೆ ದೇವಸ್ಥಾನದಲ್ಲಿ ಪಂಡರಿ ಭಜನೆ, ಮಧ್ಯಾಹ್ನ 1 ಗಂಟೆಗೆ ಪುಷ್ಪವೃಷ್ಟಿ ಮಹಾಮಂಗಳಾರತಿ ಜರುಗಲಿದೆ.
ಎರಡು ದಿವಸಗಳ ಕಾರ್ಯಕ್ರಮಕ್ಕೆ ಅತಿಥಿಗಳಾದ ಶಾಸಕ ಪಿ.ರವಿಕುಮಾರ್, ಭಾವಸಾರ ಕ್ಷತ್ರಿಯ ಸಮಾಜದ ಕಾರ್ಯದರ್ಶಿ ಕಸ್ತೂರಿಬಾಯಿ ಸುತ್ರಾವೆ, ಉಪಾಧ್ಯಕ್ಷರಾದ ಕೆ. ಪದ್ಮಾವತಿ ಕ್ಷೀರಸಾಗರ್, ಜಂಟಿ ಕಾರ್ಯದರ್ಶಿ ಟಿ.ಎನ್. ಹರ್ಷ ಪೇಟ್ಕರ್ ಭಾಗವಹಿಸುವರು.ಈ ವೇಳೆ ನಾಗವೇಣಿ ಕಾಕಡೆ, ಎಂ.ಆರ್. ತೇಜಸ್ ಕಾಕಡೆ (ಸುನಿಲ್), ರೂಪ ಪರಶುರಾಮ್ ಮಹೇಂದ್ರಕರ್, ಕೆ.ಎಸ್. ರಜನಿಕಾಂತ್ ಖಾಟೋಕರ್, ನಾಗೇಶ್ ನಾಝರೆ, ನಾಗರಾಜ್ ಬಾಸುತ್ಕರ್ ಹಾಜರಿದ್ದು, ಸಮಾಜದ ನಿರ್ದೇಶಕರಾದ ಎನ್. ನಾಮದೇವ ರಾವ್ ರೇಳೆಕರ್, ಬಿ.ಎಸ್. ನಾಗರಾಜ ಬಗರೆ, ಬಿ.ಡಿ. ರವಿ, ಶಶಿಕುಮಾರ್ ಖಾಟೋಕರ್, ನಾಗೇಂದ್ರ ಕುಮಾರ್ ರೇಳೆಕರ್, ಎಸ್. ವಿನಯ್ ಘನಾತೆ, ಕೆ.ಕೆ. ಲಕ್ಷಣ್ ರಾವ್ ಕಲೋಸೆ, ಕೆ. ಪ್ರಕಾಶ್ ಬಗರೆ, ಆರ್. ಉಮೇಶ್ ರಾವ್ ರೇಳೆಕರ್ ಪಾಲ್ಗೊಳ್ಳಲಿದ್ದಾರೆ.