ಸಾರಾಂಶ
ಹರಿಹರ ತಾಲೂಕು ಮಲೇಬೆನ್ನೂರು ಪಟ್ಟಣದ ಸೈಯದ್ ಹಬೀಬುಲ್ಲಾ ಷಾ ಖಾದ್ರಿ ಉರುಸ್‌ಗೆ ಬುಧವಾರ ವಿಧ್ಯುಕ್ತ ಚಾಲನೆ ದೊರೆಯಿತು. ಪಟ್ಟಣದಲ್ಲಿ ಪ್ರಥಮ ಬಾರಿಗೆ ಚುನಾಯಿತ ಆಡಳಿತ ಮಂಡಳಿಯ ಯುವ ಸದಸ್ಯರು ಮುಂಚೂಣಿಯಲ್ಲಿದ್ದು, ಉರುಸ್ ಮತ್ತು ಗಂಧ ನಡೆಸಲು ಸಿದ್ಧರಾಗಿದ್ದಾರೆ. ಮೊದಲ ದಿನವೇ ದರ್ಗಾ ಆವರಣದಲ್ಲಿ ಹಿಂದೂ ಬಾಂಧವರು ಸೇರಿ ೨೫,೦೦೦ ಸಾವಿರ ಭಕ್ತರಿಗೆ ಅನ್ನ ಸಂತರ್ಪಣೆ ನೀಡಿ ಕೋಮು ಸಾಮರಸ್ಯ, ಧನ್ಯತೆ ಮೆರೆದರು. ರಾತ್ರಿವರೆಗೂ ಅನ್ನ ಸಂತರ್ಪಣೆ ನಡೆಯಲಿದೆ ಎಂದು ತಿಳಿಸಲಾಗಿದೆ.
- ಸೈಯದ್ ಹಬೀಬುಲ್ಲಾ ಷಾ ಖಾದ್ರಿ ಉರುಸ್ ಸಂಭ್ರಮ - - - ಮಲೇಬೆನ್ನೂರು: ಹರಿಹರ ತಾಲೂಕು ಮಲೇಬೆನ್ನೂರು ಪಟ್ಟಣದ ಸೈಯದ್ ಹಬೀಬುಲ್ಲಾ ಷಾ ಖಾದ್ರಿ ಉರುಸ್‌ಗೆ ಬುಧವಾರ ವಿಧ್ಯುಕ್ತ ಚಾಲನೆ ದೊರೆಯಿತು.
ಪಟ್ಟಣದಲ್ಲಿ ಪ್ರಥಮ ಬಾರಿಗೆ ಚುನಾಯಿತ ಆಡಳಿತ ಮಂಡಳಿಯ ಯುವ ಸದಸ್ಯರು ಮುಂಚೂಣಿಯಲ್ಲಿದ್ದು, ಉರುಸ್ ಮತ್ತು ಗಂಧ ನಡೆಸಲು ಸಿದ್ಧರಾಗಿದ್ದಾರೆ. ಮೊದಲ ದಿನವೇ ದರ್ಗಾ ಆವರಣದಲ್ಲಿ ಹಿಂದೂ ಬಾಂಧವರು ಸೇರಿ ೨೫,೦೦೦ ಸಾವಿರ ಭಕ್ತರಿಗೆ ಅನ್ನ ಸಂತರ್ಪಣೆ ನೀಡಿ ಕೋಮು ಸಾಮರಸ್ಯ, ಧನ್ಯತೆ ಮೆರೆದರು. ರಾತ್ರಿವರೆಗೂ ಅನ್ನ ಸಂತರ್ಪಣೆ ನಡೆಯಲಿದೆ ಎಂದು ತಿಳಿಸಲಾಗಿದೆ.ದರ್ಗಾ ಒಳಗೆ ವಯಸ್ಸಿನ ಮಿತಿಯಿಲ್ಲದೇ ಮುಸಲ್ಮಾನ ಮಹಿಳೆಯರು ಕುರ್‌ಆನ್ ಪಠಣ ಮಾಡಿದರು. ಕೆಲವರು ಭಕ್ತಿಯಿಂದ ಸಿಹಿ ವಿತರಿಸಿ ಭಕ್ತಿ ಸಮರ್ಪಿಸಿದರು. ಸ್ಥಳೀಯ ಮತ್ತು ಅಂತರ ಜಿಲ್ಲಾ ಕಲಾವಿದರು ತಮ್ಮ ಗಾನಸುಧೆ ಹರಿಸಿ ಜಾಮಿಯಾ ನ್ಯಾಷನಲ್ ಶಾಲೆಯಲ್ಲಿ ವಿಶ್ರಾಂತಿ ಪಡೆದರು.
ರಥೋತ್ಸವ, ಜಾತ್ರೆಯಂತೆ ಇಲ್ಲಿಯೂ ಆಟಿಕೆ ಸಾಮಾನು, ತಂಪು ಪಾನೀಯ ಅಂಗಡಿ, ರೆಡಿಮೇಡ್ ಬಟ್ಟೆ ಅಂಗಡಿಗಳನ್ನು ಇಡಲಾಗಿತ್ತು. ಭಕ್ತರಿಗೆ ಕುಡಿಯುವ ನೀರು ಒದಗಿಸಿ, ಧ್ವನಿವರ್ಧಕದ ಮೂಲಕ ಸ್ವಚ್ಛತೆ ಕುರಿತು ಸೂಚನೆ ನೀಡಲಾಗುತ್ತಿತ್ತು. ಜುಮ್ಮಾ ಮಸೀದಿಯ ಅಧ್ಯಕ್ಷ ಮೊಹಮ್ಮದ್ ಹಾಂಶು, ಉಪಾಧ್ಯಕ್ಷ ಸಾಬಿರ್ ಅಲಿ, ಕಾರ್ಯದರ್ಶಿ ದಾದಾವಲಿ. ಖಜಾಂಚಿ ಯೂಸೂಫ್ ಖಾನ್ ಮತ್ತಿತರರು ಸಂಪೂರ್ಣ ಸುವ್ಯವಸ್ಥೆಯ ನೇತೃತ್ವ ವಹಿಸಿದ್ದಾರೆ.ಖವ್ವಾಲಿ ಕಾರ್ಯಕ್ರಮ:
ಉರುಸ್ ಎರಡನೇ ದಿನವಾದ ಗುರುವಾರ ರಾತ್ರಿ ಬಾಂಬೆ ಮತ್ತು ದೆಹಲಿಯ ಪ್ರಖ್ಯಾತಿ ಕಲಾವಿದರಿಂದ ಖವ್ವಾಲಿ ಕಾರ್ಯಕ್ರಮ ಜರುಗಲಿದೆ.- - - -೫ಎಂಬಿಆರ್1, 2:ದರ್ಗಾ ಬಳಿ ಸಹಸ್ರಾರು ಮುಸ್ಲಿಂ ಭಕ್ತರು ಉರುಸ್ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಮಹಿಳೆಯರಿಂದ ಕುರ್‌ಆನ್ ಪಠಣ ಸಹ ನಡೆಯಿತು.