ವಿದ್ಯುತ್ ಮಿತವಾಗಿ ಬಳಸಿ: ಜೆ.ಟಿ.ಪಾಟೀಲ

| Published : Feb 13 2024, 12:47 AM IST

ಸಾರಾಂಶ

ಬಾಗಲಕೋಟೆ; ನಿತ್ಯ ಜೀವನಕ್ಕೆ ಬಹು ಉಪಯುಕ್ತವಾದ ವಿದ್ಯುತ್ ನ್ನು ಸಾರ್ವಜನಿಕರು ಮಿತವಾಗಿ ಬಳಸಿಕೊಳ್ಳಬೇಕೆಂದು ಹಟ್ಟಿ ಚಿನ್ನದ ಗಣಿ ನಿಗಮದ ಅಧ್ಯಕ್ಷ, ಶಾಸಕ ಜೆ.ಟಿ. ಪಾಟೀಲ ಸಲಹೆ ನೀಡಿದರು. ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ಅಧೀನದ ಬಾಗಲಕೋಟೆ ಕಾರ್ಯ ಮತ್ತು ಪಾಲನೆ ಗ್ರಾಮೀಣ ಉಪ ವಿಭಾಗದ ವತಿಯಿಂದ ಬೀಳಗಿ ಮತಕ್ಷೇತ್ರ ವ್ಯಾಪ್ತಿಯ ಯಡಹಳ್ಳಿ ಸಾಳಗುಂದಿ, ಆನದಿನ್ನಿ ಕ್ರಾಸ್, ಛಬ್ಬಿ ಗ್ರಾಮಗಳ ಮನೆಗಳಿಗೆ ನಿರಂತರ ವಿದ್ಯುತ್ ಪೂರೈಸುವ ಪೂರ್ಣಗೊಂಡ ಕಾಮಗಾರಿ ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ನಿತ್ಯ ಜೀವನಕ್ಕೆ ಬಹು ಉಪಯುಕ್ತವಾದ ವಿದ್ಯುತ್ ನ್ನು ಸಾರ್ವಜನಿಕರು ಮಿತವಾಗಿ ಬಳಸಿಕೊಳ್ಳಬೇಕೆಂದು ಹಟ್ಟಿ ಚಿನ್ನದ ಗಣಿ ನಿಗಮದ ಅಧ್ಯಕ್ಷ, ಶಾಸಕ ಜೆ.ಟಿ. ಪಾಟೀಲ ಸಲಹೆ ನೀಡಿದರು.

ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ಅಧೀನದ ಬಾಗಲಕೋಟೆ ಕಾರ್ಯ ಮತ್ತು ಪಾಲನೆ ಗ್ರಾಮೀಣ ಉಪ ವಿಭಾಗದ ವತಿಯಿಂದ ಬೀಳಗಿ ಮತಕ್ಷೇತ್ರ ವ್ಯಾಪ್ತಿಯ ಯಡಹಳ್ಳಿ ಸಾಳಗುಂದಿ, ಆನದಿನ್ನಿ ಕ್ರಾಸ್, ಛಬ್ಬಿ ಗ್ರಾಮಗಳ ಮನೆಗಳಿಗೆ ನಿರಂತರ ವಿದ್ಯುತ್ ಪೂರೈಸುವ ಪೂರ್ಣಗೊಂಡ ಕಾಮಗಾರಿ ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಗಾಳಿ, ನೀರು, ಬೆಳಕು ನಮಗೆ ಪ್ರಕೃತಿಯಿಂದ ದೊರೆತರೆ, ಮನುಷ್ಯನಿಂದ ನಿರ್ಮಿತಗೊಂಡ ವಿದ್ಯುತ್ ಕೂಡ ಇಂದು ಮೂಲ ಸೌಲಭ್ಯಗಳಲ್ಲಿ ಒಂದಾಗಿದೆ. ಇಂದು ಪ್ರತಿಯೊಂದು ಕಾರ್ಯಕ್ಕೆ ವಿದ್ಯುತ್ ಅವಶ್ಯವಾಗಿದೆ ಎಂದರು.

ವಿದ್ಯುತ್ ಹಣ ನೀಡಿ ಕೊಂಡುಕೊಳ್ಳುವ ವಸ್ತುವಲ್ಲ. ನಮ್ಮ ಸಂಪನ್ಮೂಲ ಬಳಸಿಕೊಂಡು ತಯಾರಿಸಿಕೊಳ್ಳುವ ಸಾಧನವಾಗಿದ್ದು, ಇಂದು ಉತ್ಪಾದನೆ ಕಡಿಮೆಯಾಗಿದೆ. ಬಳಕೆ ಹೆಚ್ಚಾಗಿದೆ. ಅದರಲ್ಲೂ ಬೇಸಿಗೆ ಸಮೀಪಿಸುತ್ತಿರುವುದರಿಂದ ಕುಡಿಯುವ ನೀರಿನ ಸಮಸ್ಯೆ ಸಹ ಬರಬಹುದು. ಆ ನಿಟ್ಟಿನಲ್ಲಿ ನಮಗೆ ಬೇಕಾದಷ್ಟು ಮಾತ್ರ ವಿದ್ಯುತ್ ಬಳಸಿಕೊಳ್ಳಬೇಕು ಎಂದ ಅವರು, ಕೃಷಿಗಾಗಿ, ಆಹಾರಕ್ಕಾಗಿ ಕೈಗಾರಿಕೆ, ಬೀದಿ ದೀಪಗಳಿಗಾಗಿ ವಿದ್ಯುತ್ ಬಳಸಿಕೊಳ್ಳುವುದು ಸಾಮಾನ್ಯ. ಆದರೆ ಇಂದು ವೈಭೋಗದ ಜೀವನಕ್ಕೆ ಮಾರು ಹೋಗಿ ಮೋಜು ಮಸ್ತಿಗಾಗಿ ಉತ್ಸವ, ಮದುವೆಗಳು ಸಿಕ್ಕ ಸಿಕ್ಕಂತೆ ಬಳಕೆಯಾಗುತ್ತಿರುವುದು ವಿಪರ್ಯಾಸ. ಇದು ಮುಂದೊಂದು ದಿನ ಮಾರಕವಾಗಲಿದೆ ಎಂದು ಎಚ್ಚರಿಸಿದರು.

ಗ್ರಾಪಂ ಅಧ್ಯಕ್ಷೆ ಮಾಲಾ ನಾಲತ್ವಾಡ, ಉಪಾಧ್ಯಕ್ಷ ಚಂದ್ರಶೇಖರ ಸಾಳಗುಂದಿ, ಎಇಇ ಬಾಲಚಂದ್ರ ಹಲಗತ್ತಿ, ಶಾಖಾಧಿಕಾರಿಗಳಾದ ಚಂದ್ರು ಲಮಾಣಿ, ಗದಿಗೆಪ್ಪ ಛಬ್ಬಿ, ಗುತ್ತಿಗೆದಾರ ಅರುಣ ನಾವಿ, ಹುಚ್ಚಪ್ಪ ನೀಲಣ್ಣವರ, ಮಹಾದೇವಪ್ಪ ನೀಲಣ್ಣವರ, ಮುತ್ತಪ್ಪ ಮಾದರ, ಮಲ್ಲಿಕಾರ್ಜುನ ಮಠ, ಮಂಜುನಾಥ ಮಾದರ, ಶರಣಪ್ಪ ನೀಲಣ್ಣವರ ಸೇರಿದಂತೆ ಇತರರು ಉಪಸ್ಥಿತರಿದ್ದರು.