ಸಾರಾಂಶ
ಕನಕಪುರ: ಶಾಲಾ ಮಕ್ಕಳನ್ನು ಯಾವುದೇ ಕೆಲಸ ಕಾರ್ಯಗಳಿಗೆ ಬಳಸಿಕೊಳ್ಳಬಾರದು ಎಂಬ ಸರ್ಕಾರಿ ಆದೇಶವಿದ್ದರೂ ತಾಲೂಕಿನ ಹುಲಿಬೆಲೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳನ್ನು ನೀರಿನ ತೊಂಬೆಗೆ ಇಳಿಸಿ ಸ್ವಚ್ಛ ಮಾಡಿಸಿಕೊಂಡಿರುವ ಮುಖ್ಯಶಿಕ್ಷಕಿ ರಾಜಲಕ್ಷ್ಮೀ ಮೇಲೆ ಶಿಕ್ಷಣ ಇಲಾಖೆ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಪೋಷಕರು ಆಗ್ರಹಿಸಿದ್ದಾರೆ.
ಶಾಲೆಯ೬ನೇ ತರಗತಿ ವಿನಯ್ ಗೌಡ, ಮಿಥುನ್‌ಗೌಡ ಮತ್ತು ಎಂಟನೇ ತರಗತಿ ಪ್ರಶಾಂತ್ ಸೇರಿ ಐವರು ವಿದ್ಯಾರ್ಥಿಗಳ ಕೈಯಲ್ಲಿ ನೀರಿನ ತೊಂಬೆ ಸ್ವಚ್ಛಗೊಳಿಸಿದ್ದಾರೆ. ಶಾಲೆಯಯಲ್ಲಿ ೮೦ಕ್ಕೂ ಹೆಚ್ಚು ಮಕ್ಕಳಿದ್ದು, ಮಕ್ಕಳಿಗಾಗಿ ಶಾಲಾ ಆವರಣದಲ್ಲಿ ನೀರಿನ ತೊಂಬೆ ಅಳವಡಿಸಲಾಗಿದೆ. ನೀರಿನ ತೊಂಬೆಯಲ್ಲಿ ಪಾಚಿ ಕಟ್ಟಿಕೊಂಡಿರುವುದನ್ನು ಮಕ್ಕಳು ಮುಖ್ಯ ಶಿಕ್ಷಕಿ ರಾಜಲಕ್ಷ್ಮೀ ಅವರ ಗಮನಕ್ಕೆ ತಂದಿದ್ದರು. ನೀವೇ ಏಣಿ ತಂದು ನೀರಿನ ತೊಂಬೆ ಸ್ವಚ್ಛಗೊಳಿಸುವಂತೆ ವಿದ್ಯಾರ್ಥಿಗಳಿಗೆ ಸೂಚಿಸಿದ್ದ ಐವರು ವಿದ್ಯಾರ್ಥಿಗಳು ತೊಂಬೆಗಿಳಿದು ಸ್ವಚ್ಛಗೊಳಿಸಿದ್ದಾರೆ.ವಿಷಯ ತಿಳಿಯುತ್ತಿದಂತೆ ಪೋಷಕರು ಹಾಗೂ ಕರ್ನಾಟಕ ಸ್ವಾಭಿಮಾನಿ ಸಮ ಸಮಾಜದ ಸಂಘಟನೆ ಜಿಲ್ಲಾ ಸಂಯೋಜಕ ಜೀವನಮೂರ್ತಿ ಶಾಲೆ ಬಳಿ ಜಮಾಯಿಸಿ ಮುಖ್ಯ ಶಿಕ್ಷಕಿ ರಾಜಲಕ್ಷ್ಮೀಯನ್ನು ತರಾಟೆಗೆ ತೆಗೆದುಕೊಂಡು, ಮುಖ್ಯ ಶಿಕ್ಷಕಿ ರಾಜಲಕ್ಷ್ಮೀ ಅವರಿಗೆ ಮೊದಲಿಂದಲೂ ಮಕ್ಕಳ ಮೇಲೆ ಕಾಳಜಿ ಇಲ್ಲ. ಮಕ್ಕಳನ್ನು ಯಾವುದೇ ಕೆಲಸ ಕಾರ್ಯಗಳಿಗೆ ಬಳಸಿಕೊಳ್ಳಬಾರದು ಎಂದು ಗೊತ್ತಿದ್ದರೂ ಮಕ್ಕಳ ಕೈಯಲ್ಲೇ ನೀರಿನ ತೊಂಬೆ ಸ್ವಚ್ಛತೆ ಮಾಡಿಸಿರುವುದು ಸರಿಯಲ್ಲ. ಮಕ್ಕಳಿಗೆ ಏನಾದರೂ ತೊಂದರೆ ಆದರೆ ಯಾರು ಹೊಣೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದರು.
ಶಾಲೆಯಲ್ಲಿ ಮಕ್ಕಳಿಗೆ ಕೊಡುವ ಬಿಸಿಯೂಟದಲ್ಲಿ ಹುಳು ಸಿಕ್ಕಿದ್ದು, ಈ ಬಗ್ಗೆಯೂ ಸಾಕಷ್ಟು ಬಾರಿ ಗಮನಕ್ಕೆ ತಂದಿದ್ದರೂ ಪ್ರಯೋಜನವಾಗಿಲ್ಲ. ಕೂಡಲೇ ಇವರ ಮೇಲೆ ಶಿಸ್ತು ಕ್ರಮ ಕೈಗೊಂಡು ಇಲ್ಲಿಂದ ವರ್ಗಾವಣೆ ಮಾಡಬೇಕು. ಇಲ್ಲದಿದ್ದರೆ ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಪೋಷಕರು ಎಚ್ಚರಿಕೆ ಕೊಟ್ಟಿದ್ದಾರೆ.ಕೋಟ್............
ಶಾಲೆಗಳಲ್ಲಿ ಮಕ್ಕಳನ್ನು ಯಾವುದೇ ಕೆಲಸಗಳಿಗೆ ಬಳಸಿಕೊಳ್ಳಬಾರದು ಎಂದು ಶಿಕ್ಷಕರಿಗೆ ತಿಳುವಳಿಕೆ ನೀಡಿದ್ದೇವೆ. ಆದರೂ ಹುಲಿಬೆಲೆ ಶಾಲೆಯಲ್ಲಿ ನೀರಿನ ತೊಂಬೆ ಸ್ವಚ್ಛತೆಗೆ ಮಕ್ಕಳನ್ನು ಬಳಸಿಕೊಂಡಿರುವ ಬಗ್ಗೆ ಪೋಷಕರು ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ. ಸಿಆರ್‌ಪಿ ಮತ್ತು ಇಸಿಒ ಸ್ಥಳ ಪರಿಶೀಲನೆಗೆ ಸೂಚಿಸಿ, ವರದಿ ಪಡೆದು ಪೋಷಕರ ಬಳಿ ಮಾತನಾಡಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುತ್ತೇವೆ.-ಬಿ.ಜಿ.ರಾಮಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ, ಕನಕಪುರ
ಕೆ ಕೆ ಪಿ ಸುದ್ದಿ 3(1):ಹುಲಿಬೆಲೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ.ಕೆ ಕೆ ಪಿ ಸುದ್ದಿ3(2):ಹುಲಿಬೆಲೆ ಸರ್ಕಾರಿ ಶಾಲೆ ಆವರಣದಲ್ಲಿ ನಿರ್ಮಾಣ ಮಾಡಿರುವ ನೀರಿನ ತೊಂಬೆ