ಆರೋಗ್ಯದ ದೃಷ್ಟಿಯಿಂದ ಸಾವಯವ ಬೆಲ್ಲ ಬಳಸಿ
KannadaprabhaNewsNetwork | Published : Oct 19 2023, 12:45 AM IST
ಆರೋಗ್ಯದ ದೃಷ್ಟಿಯಿಂದ ಸಾವಯವ ಬೆಲ್ಲ ಬಳಸಿ
ಸಾರಾಂಶ
ಆರೋಗ್ಯದ ದೃಷ್ಟಿಯಿಂದ ಸಾವಯವ ಬೆಲ್ಲ ಬಳಸಿ
ವಿ.ಸಿ.ಫಾರಂ ಬೆಲ್ಲದ ಪಾರ್ಕ್‌ನ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥ ಡಾ.ಕೇಶವಯ್ಯ ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ ಪ್ರತಿಯೊಬ್ಬರೂ ಆರೋಗ್ಯದ ದೃಷ್ಟಿಯಿಂದ ಸಾವಯವ ಬೆಲ್ಲವನ್ನು ಬಳಸಬೇಕು ಎಂದು ವಿ.ಸಿ.ಫಾರಂ ಬೆಲ್ಲದ ಪಾರ್ಕ್‌ನ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥರಾದ ಡಾ.ಕೇಶವಯ್ಯ ತಿಳಿಸಿದರು. ಪಟ್ಟಣದ ಶ್ರೀರಂಗನಾಥಸ್ವಾಮಿ ದೇವಸ್ಥಾನದ ಆವರಣದ ಶ್ರೀರಂಗ ವೇದಿಕೆಯಲ್ಲಿ ದಸರಾ ಅಂಗವಾಗಿ ಜಿಲ್ಲಾಡಳಿತ ಮತ್ತು ಜಿಪಂ ಸಹಯೋಗದೊಂದಿಗೆ ನಡೆದ ರೈತ ದಸರಾದಲ್ಲಿ ಕಿಸಾನ್ ಗೋಷ್ಠಿಯಲ್ಲಿ ಮಾತನಾಡಿದರು. ಬೆಲ್ಲವನ್ನು ಔಷಧಿಯಾಗಿ, ಆಹಾರಕ್ಕಾಗಿ ಶತಮಾನಗಳಿಂದಲೂ ಬಳಸಲಾಗುತ್ತಿದೆ. ಖಾದ್ಯವನ್ನು ಸಿಹಿಯಾಗಿಸುವ ಬೆಲ್ಲ ಆರೋಗ್ಯವನ್ನು ವೃದ್ಧಿಸುತ್ತದೆ. ಬೆಲ್ಲವು ತೂಕವನ್ನು ಇಳಿಸಿ ಹೊಟ್ಟೆ ಸಮಸ್ಯೆ ಶಮನಕ್ಕೆ ಬಳಸಲಾಗುತ್ತದೆ. ಇದರಲ್ಲಿರುವ ಪೌಷ್ಟಿಕ ಸತ್ವಗಳು ರೋಗ ನಿರೋಧಕ ಶಕ್ತಿ ಹೊಂದಿದೆ ಎಂದರು. ರಕ್ತ ಮತ್ತು ಶ್ವಾಸಕೋಶವನ್ನು ನಿರ್ವಿಷಗೊಳಿಸಿ ಶ್ವಾಸಕೋಶದ ದಕ್ಷತೆ ಹೆಚ್ಚಿಸುತ್ತದೆ. ಬೆಲ್ಲ ವಿಶೇಷವಾಗಿ ಉಸಿರಾಟದ ಸಮಸ್ಯೆಗಳ ತಡೆಗಟ್ಟಲು ಸಾಕಷ್ಟು ಪ್ರಯೋಜನಕಾರಿಯಾಗಿದೆ. ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆ ಮಾಡಲು ಮಧುಮೇಹ ಹೊಂದಿರುವವರು ಸಕ್ಕರೆ ಬದಲಾಗಿ ಬೆಲ್ಲವನ್ನು ಸೇವನೆ ಮಾಡಿದರೆ ಆರೋಗ್ಯ ಉತ್ತಮವಾಗಿರುತ್ತದೆ ಎಂದರು. ತೋಟಗಾರಿಕೆ ಮಹಾ ವಿದ್ಯಾಲಯದ ಸಹಾಯಕ ಪ್ರಧ್ಯಾಪಕ ಡಾ.ಸಿದ್ದಪ್ಪ ಮಾತನಾಡಿ, ಉತ್ತಮ ಗುಣಮಟ್ಟದ ರೇಷ್ಮೆ ಬೆಳೆ ಬೆಳೆಯಬೇಕಾದರೆ ರೈತರ ಕೃಷಿ ಜಮೀನು ಹೇಗೆ ಅಚ್ಚುಕಟ್ಟಾಗಿ ಇಟ್ಟುಕೊಳ್ಳುವುದು. ಜೊತೆಗೆ ಗೊಬ್ಬರ ಬಳಸುವ ವಿಧಾನ ಸಾವಯವ ಗೊಬ್ಬರವನ್ನು ರೈತರೆ ಉತ್ಪಾದನೆ ಮಾಡುವುದರಿಂದ ಇಳುವರಿ ಪಡೆಯಬಹುದು. ಚಂದ್ರಿಕೆಗಳ ಆಧುನೀಕರಣ ಮತ್ತು ರೇಷ್ಮೆಯ ಹಿಪ್ಪುನೇರಳೆ ಬೆಳೆಯುವುದು, ಕೀಟನಾಶಕಗಳ ಸಿಂಪಡಿಕೆ ಎಚ್ಚರಿಕೆಯಿಂದ ಬಳಸುವ ಬಗ್ಗೆ ತಿಳಿಸಿದರು. ಪಶು ಆಹಾರ ತಜ್ಞ ಹಾಗೂ ಸಲಹೆಗಾರದ ಡಾ.ಚನ್ನೇಗೌಡ ಎಚ್.ಕೆ.ಮಾತನಾಡಿ, ವಿದೇಶಗಳಿಗೆ ಹೋಲಿಸಿದರೆ ನಮ್ಮ ದೇಶದಲ್ಲಿ ಜಾನುವಾರುಗಳ ಸಂಖ್ಯೆ ಹೆಚ್ಚು. ಆದರೆ, ಒಂದು ಹಸು ನೀಡುವ ಹಾಲಿನ ಪ್ರಮಾಣ ಬೇರೆ ದೇಶದ ಹಸುಗಳಿಗೆ ಹೋಲಿಸಿದರೆ ಕಡಿಮೆ. ಆದ್ದರಿಂದ ಜಾನುವಾರುಗಳಿಗೆ ದೈನಂದಿನ ನೀಡುವ ಆಹಾರ ಪದ್ಧತಿ ಬದಲಾವಣೆ ಮಾಡಿ ಗುಣಮಟ್ಟದ ಮೇವನ್ನು ನೀಡಿದರೆ ಹಾಲಿನ ಪ್ರಮಾಣ ಹೆಚ್ಚುತ್ತದೆ ಆದ್ದರಿಂದ ಹಸುಗಳ ಪಾಲನೆ- ಪೋಷಣೆ ಬಹು ಮುಖ್ಯ ಎಂದರು. ಈ ವೇಳೆ ಕೃಷಿ ಇಲಾಖೆ ಜಂಟಿ ನಿರ್ದೇಶಕ ವಿ.ಎಸ್.ಅಶೋಕ, ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ರೂಪಶ್ರೀ, ಪಶುಸಂಗೋಪನೆ ಇಲಾಖೆ ಉಪನಿರ್ದೇಶಕ ಸುರೇಶ್, ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ಬಿ.ಎಚ್.ಬಾಬ ಸಾಬ್, ರೇಷ್ಮೆ ಇಲಾಖೆ ಉಪನಿರ್ದೇಶಕ ಪುಟ್ಟಸ್ವಾಮಿ, ಪಾಂಡವಪುರ ಎಸಿ ನಂದೀಶ್ ಹಾಗೂ ಸಮಾಜ ಕಲ್ಯಾಣಾಧಿಕಾರಿ ಸಿದ್ದಲಿಂಗೇಶ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಹಾಜರಿದ್ದರು. 18ಕೆಎಂಎನ್ ಡಿ20 ಶ್ರೀರಂಗಪಟ್ಟಣ ದಸರಾ ಅಂಗವಾಗಿ ರೈತ ದಸರಾ ಕಾರ್ಯಕ್ರಮದಲ್ಲಿ ಕಿಸಾನ್ ಗೋಷ್ಠಿಯಲ್ಲಿ ಭಾಗವಹಿಸಿದ್ದ ಗಣ್ಯರು.