ಸಾರಾಂಶ
ನರೇಗಾ ಯೋಜನೆ ಗ್ರಾಮೀಣ ಭಾಗದ ಜನರಿಗೆ ವರದಾನವಾಗಿದ್ದು ರೈತರು ಜಮೀನುಗಳಲ್ಲಿ ನರೇಗಾ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಪಿಡಿಒ ರಂಗರಾಜು ರೈತರಿಗೆ ತಿಳಿಸಿದರು.
ಕನ್ನಡಪ್ರಭ ವಾರ್ತೆ ಗುಬ್ಬಿ
ನರೇಗಾ ಯೋಜನೆ ಗ್ರಾಮೀಣ ಭಾಗದ ಜನರಿಗೆ ವರದಾನವಾಗಿದ್ದು ರೈತರು ಜಮೀನುಗಳಲ್ಲಿ ನರೇಗಾ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಪಿಡಿಒ ರಂಗರಾಜು ರೈತರಿಗೆ ತಿಳಿಸಿದರು.ಗುಬ್ಬಿ ತಾಲೂಕಿನ ದೊಡ್ಡಗುಣಿ ಗ್ರಾಮ ಪಂಚಾಯಿತಿಯಲ್ಲಿ ಹಮ್ಮಿಕೊಂಡಿದ್ದ ಗ್ರಾಮ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ನರೇಗಾ ಯೋಜನೆಯಲ್ಲಿ ರೈತರು ತಮ್ಮ ಜಮೀನಿನುಗಳಲ್ಲಿ ಉದಿಬದು, ತೆಂಗು , ಸಪೋಟ, ನುಗ್ಗೇ, ಮಾವು ಹಾಗೂ ಬಾಳೆಗಳನ್ನು ಇಡಲು ಗ್ರಾಮ ಪಂಚಾಯಿತಿ ವತಿಯಿಂದ ಸಹಾಯ ಧನವನ್ನು ವಿತರಿಸಲಾಗುತ್ತಿತ್ತು. ಜತೆಗೆ ಕೋಳಿ ಶೆಡ್ ,ಮೇಕೆ ಶೆಡ್ ನಿರ್ಮಿಸಲು ರೈತರಿಗೆ ಸಹಾಯ ಧನವನ್ನು ನೀಡುತ್ತೇವೆ ಎಂದರು.ನರೇಗಾ ಯೋಜನೆಯಲ್ಲಿ ದೊಡ್ಡಗುಣಿ, ಹಂಡನಹಳ್ಳಿ, ನೇರಳೆಕೆರೆ ಶಾಲೆಗಳಿಗೆ ಕಾಪೌಂಡ್ ಹಾಗೂ ಹಳ್ಳಿಗಳಲ್ಲಿ ಸಿಸಿರಸ್ತೆ ಯೋಜನೆಗಳನ್ನು ಮಾಡಲಾಗುತ್ತಿದೆ ಎಂದು ತಿಳಿಸಿದರು. ರೈತರು ನರೇಗಾ ಯೋಜನೆಗೆ ಹೆಚ್ಚು ಹೊತ್ತು ನೀಡಿದರೆ ನಿಮ್ಮ ತೋಟಗಳನ್ನು ಅಭಿವೃದ್ಧಿಪಡಿಸಲು ಅನುಕೂಲವಾಗುತ್ತದೆ ಎಂದರು. ರೈತರು ಗ್ರಾಮ ಸಭೆಗಳಲ್ಲಿ ಭಾಗವಹಿಸಿದರೆ ಎಲ್ಲ ಕಾಮಾಗಾರಿಗಳ ಬಗ್ಗೆ ತಿಳಿದುಕೊಳಲು ಅನುಕೂಲವಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ರೈತರು ಭಾಗವಹಿಸುತ್ತಿಲ್ಲ ಗ್ರಾಮ ಪಂಚಾಯಿತಿಯಲ್ಲಿ ಸಿಗುವ ಸೌಲಭ್ಯಗಳ ಬಗ್ಗೆ ರೈತರು ಭೇಟಿ ನೀಡಿ ಅರ್ಜಿಕೊಟ್ಟು ಕೆಲಸಗಳನ್ನ ಮಾಡಿಸಿಕೊಳಬೇಕು ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಧಾ ಸಿ.ಎಸ್. ತಾಲೂಕು ಸಂಯೋಜಕ ಹೊನ್ನಪ್ಪ, ಗ್ರಾಮ ಪಂಚಾಯಿತಿ ಸದಸ್ಯರಾದ ರಾಜಶೇಖರ್, ದಾಸೇಗೌಡ ರೈತರು ಭಾಗವಹಿಸಿದ್ದರು.