ಅವಕಾಶ ಬಳಸಿಕೊಂಡು ಜೀವನದಲ್ಲಿ ಯಶಸ್ಸು ಗಳಿಸಿ

| Published : Sep 07 2025, 01:00 AM IST

ಸಾರಾಂಶ

ಪದವಿ ಹಂತ ಅತ್ಯಂತ ಮಹತ್ವದ್ದಾಗಿದೆ, ಈ ಹಂತದಲ್ಲಿ ಹೆಚ್ಚಿನ ಜ್ಞಾನ ಹೊಂದುವುದು ಅವಶ್ಯಕ

ಸವಣೂರು: ಸ್ಪರ್ಧಾತ್ಮಕ ಯುಗಕ್ಕೆ ಹೊಂದುವಂತಹ ಜ್ಞಾನ ಪಡೆದು ಇರುವ ಅವಕಾಶಗಳನ್ನು ಸರಿಯಾಗಿ ಸದ್ಬಳಕೆ ಮಾಡಿಕೊಂಡು ಜೀವನದಲ್ಲಿ ಯಶಸ್ಸು ಕಾಣಬೇಕೆಂದು ಜಾನಪದ ವಿಶ್ವವಿದ್ಯಾಲಯದ ಕುಲಸಚಿವ ಶಿವಶಂಕರ್ ಕೆ.ಹೇಳಿದರು.

ತಾಲೂಕಿನ ಗುಂಡೂರು ಗ್ರಾಮದ ಶ್ರೀವೀರಭದ್ರೇಶ್ವರ ವಿದ್ಯಾಸಂಸ್ಥೆಯ ಕೀರ್ತಿ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ 2025 26 ನೇ ಸಾಲಿನ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳ ಹಾಗೂ ಕಾಲೇಜು ಒಕ್ಕೂಟದ ವಿವಿಧ ಸಂಘಗಳ ಉದ್ಘಾಟನೆ ಹಾಗೂ ನೂತನ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಉದ್ಘಾಟಿಸಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಪದವಿ ಹಂತ ಅತ್ಯಂತ ಮಹತ್ವದ್ದಾಗಿದೆ, ಈ ಹಂತದಲ್ಲಿ ಹೆಚ್ಚಿನ ಜ್ಞಾನ ಹೊಂದುವುದು ಅವಶ್ಯಕ. ಇದಕ್ಕಾಗಿ ವಿದ್ಯಾ ಕಾಶಿಯ ಕರಿಯ ಅಕಾಡೆಮಿಯ ಸಹಭಾಗಿತ್ವದಲ್ಲಿ ಕೀರ್ತಿ ಪದವಿ ಮಹಾ ವಿದ್ಯಾಲಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಪ್ಲಾನ್‌ಗಳ ಉಪಯೋಗ ಪಡೆದುಕೊಳ್ಳಬೇಕು ಎಂದರು.

ವಿದ್ಯಾಕಾಶಿ ಕರಿಯರ್ ಅಕಾಡೆಮಿಯ ಉಪನ್ಯಾಸಕ ದೊರೆಪ್ಪ ಭಾಗಣ್ಣವರ್ ಸ್ಪರ್ಧಾತ್ಮಕ ಯುಗದ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಬಾಗಲಕೋಟೆಯ ಪದವಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ.ಸಬಿಹಾಬಾನು ಮಾತನಾಡಿದರು.

ಸಂಸ್ಥೆಯ ಅಧ್ಯಕ್ಷೆ ಶಶಿಕಲಾ ಪೊಲೀಸಗೌಡ್ರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸ್ಪರ್ಧಾತ್ಮಕ ಜಗತ್ತಿಗೆ ವಿದ್ಯಾರ್ಥಿಗಳನ್ನು ತಯಾರು ಮಾಡಲು ಬೇಕಾದ ಎಲ್ಲ ರೀತಿಯ ಸೌಲಭ್ಯದ ಜತೆಗೆ ಸಂಪನ್ಮೂಲ ಪೂರೈಸುವ ಮತ್ತು ಪ್ರತಿಷ್ಠಿತ ಸಂಸ್ಥೆಗಳು ಸಹಭಾಗಿತ್ವದಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ಕ್ಲಾಸ್‌ ಆಯೋಜಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಶಂಕರಗೌಡ ಪೊಲೀಸಗೌಡ್ರ, ಶಿವಾನಂದ ಮ್ಯಾಗೇರಿ, ಡಾ. ರಾಣಿ ತುರ್ಲಾಪುರ, ಫಕ್ಕಿರಗೌಡ ಪೊಲೀಸಗೌಡ್ರ, ಚೈತ್ರಾ ಪೊಲೀಸಗೌಡ್ರ, ಗಂಗಣ್ಣ ಸಾತಣ್ಣವರ, ನೇತ್ರಾ ಪೊಲೀಸಗೌಡ್ರು ಪಾಲ್ಗೊಂಡಿದ್ದರು.

ಉಪನ್ಯಾಸಕ ಐ.ಕೆ.ಕಲ್ಮನಿ, ಎ.ಎಚ್.ಬರಡಿ, ಆರ್.ವಿ. ದ್ಯಾಮನಗೌಡ್ರ, ಶಿಲ್ಪಾ ಕೂಡಲ, ಗೀತಾ ಕೂಡಲ, ಸುನೀತಾ ಹರಿಜನ, ಸರಸ್ವತಿ ಮುಗಳಿ, ನಿರ್ಮಲಾ ಲಮಾಣಿ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಪ್ರಾಚಾರ್ಯ ಮಾಲತೇಶ ದಾನಪ್ಪನವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಭಾಗ್ಯ ಹಣಗಿ ನಿರೂಪಿಸಿ ಮಾಲತೇಶ ಬರಡಿ ವಂದಿಸಿದರು.