ತರೀಕೆರೆಯಲ್ಲಿ ಉತ್ತರಪ್ರದೇಶ ಮೂಲದ ವ್ಯಕ್ತಿ ಹತ್ಯೆ: ಆರೋಪಿ ಪರಾರಿ

| Published : Nov 06 2025, 01:15 AM IST

ತರೀಕೆರೆಯಲ್ಲಿ ಉತ್ತರಪ್ರದೇಶ ಮೂಲದ ವ್ಯಕ್ತಿ ಹತ್ಯೆ: ಆರೋಪಿ ಪರಾರಿ
Share this Article
  • FB
  • TW
  • Linkdin
  • Email

ಸಾರಾಂಶ

ತರೀಕೆರೆ: ಪಟ್ಟಣದ ಮನೆಯೊಂದರಲ್ಲಿ ಉತ್ತರಪ್ರದೇಶ ಮೂಲದ ಕಾರ್ಮಿಕನನ್ನು ಆತನ ಜತೆಯಲ್ಲಿದ್ದವರ ಕೊಲೆ ಮಾಡಿ ಪರಾರಿಯಾಗಿರುವ ಘಟನೆ ನಡೆದಿದೆ. ಉತ್ತರಪ್ರದೇಶ ಮೂಲದ ಸರ್ಪರಾಜ್ ಅನ್ಸಾರಿ (37) ಹತ್ಯೆಯಾದ ವ್ಯಕ್ತಿ. ಈತನ ಜತೆಯಲ್ಲಿ ವಾಸವಿದ್ದ ರಿಯಾಜ್ ಯಾನೆ ಬೋಲಾ ಕೊಲೆ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.

ತರೀಕೆರೆ: ಪಟ್ಟಣದ ಮನೆಯೊಂದರಲ್ಲಿ ಉತ್ತರಪ್ರದೇಶ ಮೂಲದ ಕಾರ್ಮಿಕನನ್ನು ಆತನ ಜತೆಯಲ್ಲಿದ್ದವರ ಕೊಲೆ ಮಾಡಿ ಪರಾರಿಯಾಗಿರುವ ಘಟನೆ ನಡೆದಿದೆ.

ಉತ್ತರಪ್ರದೇಶ ಮೂಲದ ಸರ್ಪರಾಜ್ ಅನ್ಸಾರಿ (37) ಹತ್ಯೆಯಾದ ವ್ಯಕ್ತಿ. ಈತನ ಜತೆಯಲ್ಲಿ ವಾಸವಿದ್ದ ರಿಯಾಜ್ ಯಾನೆ ಬೋಲಾ ಕೊಲೆ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.

ಉತ್ತರಪ್ರದೇಶದ ಘೋರಕ್‌ಪುರ ಮೂಲದ ಅಜೀಜ್‌ ಮೇಸ್ತ್ರಿ ಎಂಬಾತ ಕಳೆದ ಒಂದು ವರ್ಷದ ಹಿಂದೆ ನಗರದ ಡಿವಿಜಿ ರಸ್ತೆಯಲ್ಲಿ ಮನೆಯನ್ನು ಬಾಡಿಗೆಗೆ ಪಡೆದು ಘೋರಕ್‌ ಪುರ ವಾಸಿಗಳಾದ ರಿಯಾಜ್ ಯಾನೆ ಬೋಲಾ, ಚೋಟು, ಶಾಂತರಾಮ್, ಸರ್ಪರಾಜ್‌ ಅನ್ಸಾರಿ ಅವರನ್ನು ಜೊತೆಯಲ್ಲಿ ಇರಿಸಿಕೊಂಡು ಕೆಲಸ ಮಾಡುತ್ತಿದ್ದರು.

ಬುಧವಾರ ಬೆಳಿಗ್ಗೆ ತರೀಕೆರೆ ಮನೆ ಮಾಲೀಕರಿಗೆ ಫೋನ್ ಮಾಡಿದ್ದ ಅಜೀಜ್‌ ಮೇಸ್ತ್ರಿ, ನಾನು ಅಕ್ಟೋಬರ್ 31 ರಂದೇ ಉತ್ತರ ಪ್ರದೇಶದ ಘೋರಕ್‌ ಪುರದಲ್ಲಿರುವ ತಮ್ಮ ಮನೆಗೆ ಹೋಗಿದ್ದೇನೆ. ತರೀಕೆರೆಯ ಬಾಡಿಗೆ ಮನೆಯಲ್ಲಿದ್ದ ಕೆಲಸ ಗಾರರಾದ ರಿಯಾಜ್ ಮತ್ತು ಸರ್ಪರಾಜ್‌ ಅನ್ಸಾರಿ ಮದ್ಯೆ ನವೆಂಬರ್ 3ರಂದು ರಾತ್ರಿ ಯಾವುದೋ ವಿಚಾರದಲ್ಲಿ ಗಲಾಟೆ ನಡೆದಿದ್ದು ಆ ಸಂದರ್ಭದಲ್ಲಿ ರಿಯಾಜ್ , ಸರ್ಪರಾಜ್‌ ಅನ್ಸಾರಿ ತಲೆಗೆ ಹೊಡೆದು ಹತ್ಯೆ ಮಾಡಿದ್ದಾಗಿ ತನಗೆ ತಿಳಿಸಿರುವ ವಿಷಯ ಹೇಳಿದ್ದಾನೆ.

ಈ ಬಗ್ಗೆ ಮನೆ ಮಾಲೀಕರು ಪೋಲಿಸರಿಗೆ ಮಾಹಿತಿ ನೀಡಿದ್ದು ಘಟನೆ ನಡೆದ ಸ್ಥಳಕ್ಕೆ ಡಿವೈಎಸ್‌ಪಿ ಪರಶುರಾಮಪ್ಪ, ಪೊಲೀಸ್ ಇನ್ಸ್‌ಪೆಕ್ಟರ್ ರಾಮಚಂದ್ರ ನಾಯಕ್ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.

ಘಟನೆ ನಡೆದ ನಂತರ ಮನೆಯಲ್ಲಿದ್ದ ರಿಯಾಜ್ ಯಾನೆ ಬೋಲಾ, ಚೋಟು, ಶಾಂತರಾಮ್ ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ.-

5ಕೆಟಿಆರ್.ಕೆ.8ಃ ಸರ್ಪರಾಜ್ ಅನ್ಸಾರಿ