ಲಸಿಕೆ ಹಾಕಿಸಿ ಜಾನುವಾರು ಆರೋಗ್ಯ ಕಾಪಾಡಿ

| Published : Jun 28 2024, 12:48 AM IST

ಸಾರಾಂಶ

ಸರ್ಕಾರ ಪೂರೈಸುವ ಲಸಿಕೆಯನ್ನು ಸಕಾಲಕ್ಕೆ ನೀಡುವ ಮೂಲಕ ಜಾನುವಾರುಗಳ ಆರೋಗ್ಯ ಸಂರಕ್ಷಣೆಗೆ ಪಶು ವೈದ್ಯರ ತಂಡ ಮತ್ತು ಪಶು ಪಾಲಕರು ಮುಂಜಾಗ್ರತೆ ವಹಿಸಬೇಕು.

ಕನ್ನಡಪ್ರಭ ವಾರ್ತೆ ಆಳಂದ

ಸರ್ಕಾರ ಪೂರೈಸುವ ಲಸಿಕೆಯನ್ನು ಸಕಾಲಕ್ಕೆ ನೀಡುವ ಮೂಲಕ ಜಾನುವಾರುಗಳ ಆರೋಗ್ಯ ಸಂರಕ್ಷಣೆಗೆ ಪಶು ವೈದ್ಯರ ತಂಡ ಮತ್ತು ಪಶು ಪಾಲಕರು ಮುಂಜಾಗ್ರತೆ ವಹಿಸಬೇಕು ಎಂದು ಸಿಎಂ ಸಲಹೆಗಾರ, ಶಾಸಕ ಬಿ.ಆರ್. ಪಾಟೀಲ ಅವರು ಹೇಳಿದರು.

ಪಟ್ಟಣದ ಪಶು ಸಂಗೋಪನಾ ಇಲಾಖೆಯ ಆಸ್ಪತ್ರೆಯಲ್ಲಿ ಚರ್ಮ, ಗಂಟು ರೋಗ ಲಸಿಕೆ ಹಾಗೂ ಕರಳು ಬೇನೆ ರೋಗದ ವಿರುದ್ಧ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

ಜಾನುವಾರುಗಳ ಆರೋಗ್ಯದಲ್ಲಿ ತೊಂದರೆಯಾದರೆ ರೈತರ ಕರೆ ಮಾಡಿದರೆ ಸಕಾಲಕ್ಕೆ ವೈದ್ಯರು ಭೇಟಿ ನೀಡಿ ಚಿಕಿತ್ಸೆ ನೀಡಿ ಆರೈಕೆಯ ಕುರಿತು ರೈತರಿಗೆ ಸಲಹೆ ಸೂಚನೆಗಳನ್ನು ನೀಡಬೇಕು ಎಂದು ಕಿವಿಮಾತು ಹೇಳಿದರು.

ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕ ಡಾ. ಯಲ್ಲಪ್ಪ ಇಂಗಳೆ ಅವರು ಲಸಿಕಾ ಅಭಿಯಾನದ ಮಾಹಿತಿ ಒದಗಿಸಿ , ಜೂ. 20ರಿಂದ ಜುಲೈ 20ವರೆಗೆ ಜಾನುವಾರುಗಳಿಗೆ ಚರ್ಮಗಂಟು ರೋಗ ಲಸಿಕೆ ಮತ್ತು ಕುರಿ, ಮೇಕೆ ಗಳಿಗೆ ಕರುಳು ಬೇನೆ ಲಸಿಕೆ ಹಾಕುವ ಅಭಿಯಾನವನ್ನು ಏರ್ಪಡಿಸಲಾಗಿದೆ. ಪಶುಪಾಲನಾ ಇಲಾಖೆಯ ಅಧಿಕಾರಿಗಳು,ಲಸಿಕೆ ದಾರರು ತಮ್ಮ ಮನೆ ಬಾಗಿಲಿಗೇ ಬಂದಾಗ ತಪ್ಪದೆ ತಮ್ಮ ಜಾನುವಾರುಗಳಿಗೆ ಲಸಿಕೆ ಹಾಕಿಸಿ, ಒಟ್ಟು 52000 ದನಗಳಿಗೆ ಚರ್ಮ ಗಂಟು ರೋಗ ಲಸಿಕೆ ಹಾಗೂ 60000 ಕುರಿ, ಮೇಕೆ, ಆಡುಗಳಿಗೆ ಗುರಿ ಹೊಂದಲಾಗಿದೆ ಎಂದರು.

ಮುಂಜಾಗ್ರತೆಗಾಗಿ ಲಸಿಕೆ ನೀಡುವುದು, ಸೋಂಕಿತ ಪ್ರಾಣಿಗಳನ್ನು ಪ್ರತ್ಯೇಕಿಸುವುದು, ಸಾಗಾಣಿಕೆ ಮೇಲೆ ನಿಬರ್ಂಧ ಹೆರುವುದು, ಜಾನುವಾರು ಮಾರುಕಟ್ಟೆ, ಜಾನುವಾರು ಜಾತ್ರೆಗಳನ್ನು ನಿಷೇಧಿಸುವುದು ಹಿಂಡು ಹಿಂಡಾಗಿ ಜಾನುವಾರುಗಳು ಮೇಯುವುದನ್ನು ತಪ್ಪಿಸಬೇಕು. ನೊಣ, ಸೊಳ್ಳೆ, ಉಣ್ಣೆ ಮತ್ತು ಕೀಟಗಳನ್ನು ನಿಯಂತ್ರಿಸಬೇಕು. ಕಚ್ಚದಂತೆ ಮುಂಜಾಗ್ರತೆ ವಹಿಸಬೇಕು ಸೊಳ್ಳೆ ಪರದೆ ಇಲ್ಲವೇ ಕೀಟ ಬಲೆಗಳನ್ನು ಬಳಕೆ ಮಾಡಬೇಕು, ಕೊಟ್ಟಿಗೆಗಳು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸೋಂಕು ನಿವಾರಣ ಔಷಧಿಗಳನ್ನು ಸಿಂಪಡಿಸಬೇಕು ಎಂದು ಸಲಹೆ ನೀಡಿದರು.

ಸಂಚಾರಿ ಹಾಗೂ ವಿಸ್ತರಣಾ ಅಧಿಕಾರಿ ಶ್ರೀಕಾಂತ್ ತಟ್ಟಿ, ಗುರುಮತಾ, ಜಗನಾಥ ಕುಂಬಾರ ಹಾಗೂ ಇತರೆ ಸಿಬ್ಬಂದಿ ಇದ್ದರು.