ಕನ್ನಡಪ್ರಭ ವಾರ್ತೆ ಪಾಂಡವಪುರ

ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಮಕ್ಕಳಿಗೆ ಲಸಿಕೆ ಹಾಕುವ ಮೂಲಕ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಭಾನುವಾರ ಅವರು, ಸೋಂಕು ಮಕ್ಕಳಿಗೆ ಬಾರದಂತೆ ತಡೆಗಟ್ಟುವ ಉದ್ದೇಶದಿಂದ ಸರ್ಕಾರವು 5 ವರ್ಷ ಒಳಪಟ್ಟ ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ಹಾಕುತ್ತಿದೆ. ಪೋಲಿಯೋ ಸೋಂಕು ಒಮ್ಮೆ ಮಕ್ಕಳಿಗೆ ಬಂದರೆ ಹೋಗುವುದಿಲ್ಲ. ಅದಕ್ಕಾಗಿ ಎಲ್ಲರೂ ಕಡ್ಡಾಯವಾಗಿ ಮಕ್ಕಳಿಗೆ ಲಸಿಕೆ ಹಾಕಿಸಬೇಕು ಎಂದರು.

ತಾಲೂಕಿನಲ್ಲಿ 9731 5 ವರ್ಷದೊಳಗಿನ ಮಕ್ಕಳಿದ್ದು, ಆರೋಗ್ಯ ಇಲಾಖೆಯಿಂದ 57 ಬೂತ್ ನಿರ್ಮಿಸಿ ಇದಕ್ಕಾಗಿ 117 ಮಂದಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಆಸ್ಪತ್ರೆ, ಶಾಲೆ, ಅಂಗನವಾಡಿ ಕೇಂದ್ರಗಳಲ್ಲಿ ಕಡ್ಡಾಯವಾಗಿ ಲಸಿಕೆ ಹಾಕಲಾಗುವುದು, ತಾಲೂಕಿನಲ್ಲಿ ವಿಶೇಷವಾಗಿ ಸಾರಿಗೆ ಬಸ್ ನಿಲ್ದಾಣ, ಹೊಸಕನ್ನಂಬಾಡಿಯ ವೇಣುಗೋಪಾಲಸ್ವಾಮಿ ದೇವಸ್ಥಾನ ಹಾಗೂ ಮೇಲುಕೋಟೆ ಶ್ರೀಚಲುವನಾರಾಯಣಸ್ವಾಮಿ ದೇವಸ್ಥಾನದಲ್ಲಿ ಬಳಿ ಬೂತ್ ನಿರ್ಮಿಸಲಾಗಿದೆ. ಎಲ್ಲರೂ ಕಡ್ಡಾಯವಾಗಿ ಲಸಿಕೆ ಹಾಕಿಸಿ ಶೇ.100ರಷ್ಟು ಗುರಿಸಾಧನೆ ಮಾಡಬೇಕು ಎಂದರು.

ಟಿಎಚ್‌ಒ ಡಾ.ಸಿ.ಎ.ಅರವಿಂದ್ ಮಾತನಾಡಿ, ಪಲ್ಸ್ ಪೋಲಿಯೋ ಲಸಿಕೆಯನ್ನು ಪೋಷಕರು ಕಡ್ಡಾಯವಾಗಿ ಮಕ್ಕಳಿಗೆ ಹಾಕಿಸಬೇಕು ಎಂದು ಮನವಿ ಮಾಡಿದರು.


ಈ ವೇಳೆ ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಮಂಜುನಾಥ್, ಎಲೆಕೆರೆ ಚಂದ್ರಣ್ಣ, ಆರೋಗ್ಯ ಇಲಾಖೆ ಶಿವಮ್ಮ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ಜಾಕೀಯಬಾನು ಸೇರಿದಂತೆ ಹಲವರು ಇದ್ದರು.ಕೆಂಪೇಗೌಡರ ಜಯಂತಿ ವಿಜೃಂಭಣೆಯ ಆಚರಣೆ

ಪಾಂಡವಪುರ: ತಾಲೂಕಿನ ಚಿಕ್ಕಮರಳಿ ಗ್ರಾಮದಲ್ಲಿ ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ವಿಜೃಂಭಣೆಯಿಂದ ಆಚರಣೆ ಮಾಡಲಾಯಿತು.ಗ್ರಾಮದ ಶ್ರೀಬೋರೇದೇವರು ದೇವಸ್ಥಾನದ ಆವರಣದಲ್ಲಿ ನಾಡಪ್ರಭು ಕೆಂಪೇಗೌಡರ ರ ಭಾವಚಿತ್ರಕ್ಕೆ ಪೂಜೆಮಾಡಿ ಬಳಿಕ ಪುಷ್ಪಾರ್ಚನೆ ಸಲ್ಲಿಸಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ನಂತರ ಗ್ರಾಮದ ಸಾರ್ವಜನಿಕರಿಗೆ ಅನ್ನಸಂತರ್ಪಣೆ ಮೂಲಕ ನಾಡಪ್ರಭು ಅರ್ಥಪೂರ್ಣವಾಗಿ ಆಚರಿಸಿದರು.

ಈ ವೇಳೆ ಗ್ರಾಪಂ ಮಾಜಿ ಅಧ್ಯಕ್ಷ ಸಿ.ಬಿ.ತಮ್ಮಣ್ಣ, ಮಾಜಿ ಸದಸ್ಯೆ ನೀಲಮ್ಮ, ಮುಖಂಡರಾದ ಪ್ರಕಾಶ್, ಅವಿನಾಶ್, ಮಧುಸೂದನ್, ಉಮೇಶ್, ಸುರೇಶ್, ಸಿ.ಬಿ.ಶಂಕರ್, ಚೇತನ್, ಲೋಕೇಶ್, ದೊಡ್ಡಬೋರೇಗೌಡ, ಅಂಗಡಿಶಂಕರ, ವರುಣ್, ಅರುಣ್, ಸುದೀಪ್, ಮಂಜು ಸೇರಿದಂತೆ ಹಲವರು ಇದ್ದರು.