ರಾಸುಗಳಿಗೆ ಕಾಯಿಬಾಯಿ ಜ್ವರದ ಲಸಿಕೆ ಹಾಕಿಸಿ

| Published : Oct 23 2024, 12:45 AM IST

ಸಾರಾಂಶ

ಪ್ರತಿ ರೈತರ ಕುಟುಂಬದಲ್ಲಿ ಹೆಣ್ಣು ಕರು ಇರಬೇಕು ಪ್ರತಿಯೊಬ್ಬರು ಹೈನುಗಾರಿಕೆ ಮೇಲೆ ಕುಟುಂಬ ಪೋಷಣೆ, ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುತ್ತದೆ. ಕಾಲುಬಾಯಿ ಜ್ವರದ ಲಸಿಕೆಯನ್ನು ಹಾಕಿಸಿ ರಾಸುಗಳ ಆರೋಗ್ಯ ಕಾಪಾಡಬೇಕು.

ಕನ್ನಡಪ್ರಭ ವಾರ್ತೆ ಚಿಂತಾಮಣಿ

ಸೀಮೆಹಸುಗೆ ಹೆಣ್ಣು ಕರು ಜನಿಸಿದರೆ ಮನೆಗೆ ಮಹಾಲಕ್ಷ್ಮಿ ಬಂದಂತಾಗುತ್ತದೆ ಹಾಗೂ ಮನೆ ಆರ್ಥಿಕವಾಗಿ ಮುನ್ನಡೆಯುತ್ತಾರದ್ದರಿಂದ ರಾಸುಗಳಿಗೆ ತಪ್ಪದೇ ಕಾಲುಬಾಯಿ ಜ್ವರದ ಲಸಿಕೆಯನ್ನು ಹಾಕಿಸಿ ರಾಸುಗಳನ್ನು ಕಾಪಾಡಿಕೊಳ್ಳಬೇಕೆಂದು ಕೋಚಿಮೂಲ್ ನಿರ್ದೇಶಕ ವೈ.ಬಿ.ಅಶ್ವತ್ ನಾರಾಯಣಬಾಬು ನುಡಿದರು.

ತಾಲ್ಲೂಕಿನ ಗುಡರ‍್ಲಹಳ್ಳಿಯಲ್ಲಿ ಪಶುಪಾಲನಾ ಇಲಾಖೆ, ಪಶು ವೈದ್ಯಕೀಯ ಸೇವಾ ಇಲಾಖೆ ಮತ್ತು ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಸಹಾಯೋಗದೊಂದಿಗೆ ನಡೆದ ಕಾಲು ಬಾಯಿ ರೋಗ ಲಸಿಕೆ ಅಭಿಯಾನ ಮತ್ತು ಕರುಗಳ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿ ಪ್ರತಿ ರೈತರ ಕುಟುಂಬದಲ್ಲಿ ಹೆಣ್ಣು ಕರು ಇರಬೇಕು ಪ್ರತಿಯೊಬ್ಬರು ಹೈನುಗಾರಿಕೆ ಮೇಲೆ ಕುಟುಂಬ ಪೋಷಣೆ, ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುತ್ತದೆಯೆಂದರು.

ಲಸಿಕೆ ಕಾರ್ಯಕ್ರಮ ಚುರುಕು

ಪಶುಪಾಲನಾ ಇಲಾಖೆಯ ನಿರ್ದೆಶಕ ಡಾ.ಚನ್ನಕೇಶವರೆಡ್ಡಿ ಮಾತನಾಡಿ ತಾಲ್ಲೂಕಿನಲ್ಲಿ ೪೩ ಸಾವಿರ ಹಸುಗಳು, ೨ ಲಕ್ಷ ೬ ಸಾವಿರ ಕುರಿ-ಮೇಕೆಗಳಿದ್ದಾವೆ. ಹಂದಿ ಸಾಕಾಣಿಕೆ ಮಾಡುವವರಿಗೂ ಬೇಡಿಕೆಯಿದ್ದು, ಈಗಾಗಲೇ ಜಾನುವಾರಗಳಿಗೆ ಲಸಿಕೆಗಳನ್ನು ನೀಡಿದ್ದೇವೆ. ವರ್ಷಕ್ಕೆ ೨ ಬಾರಿ ಸರ್ಕಾರದ ವತಿಯಿಂದ ಕಾಲು ಬಾಯಿ ಲಸಿಕೆ ನೀಡುವ ಕಾರ್ಯಕ್ರಮ ಅನುಷ್ಠಾನಗೊಂಡಿದ್ದು, ರೈತರು ನಮಗೆ ಸಹಕಾರ ನೀಡಿ ಜಾನುವಾರು ರಕ್ಷಣೆಗೆ ಮುಂದಾಗಬೇಕು ಎಂದರು.

ಈ ಕಾರ್ಯಕ್ರಮದಲ್ಲಿ ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಚೆನ್ನಕೇಶವ ರೆಡ್ಡಿ,ಮಾಜಿ ತಾ.ಪಂ. ಅಧ್ಯಕ್ಷ ಲಕ್ಷ್ಮೀನಾರಾಯಣರೆಡ್ಡಿ ಶಿಬಿರ ಕಚೇರಿಯ ಉಪವ್ಯವಸ್ಥಾಪಕ ಡಾ.ಮಹೇಶ್ ಮಾಜಿ ಜಿ.ಪಂ. ಸದಸ್ಯ ಶ್ರೀರಾಮರೆಡ್ಡಿ, ಹಾಲು ಉತ್ಪಾದಕರ ಸಹಾಕಾರ ಸಂಘದ ಅಧ್ಯಕ್ಷ ಮಂಜುನಾಥರೆಡ್ಡಿ, ಅನ್ಸರ್‌ಖಾನ್, ವೆಂಕಟರವಣಪ್ಪ, ಮಿಲ್ಟ್ರಿ ಶ್ರೀನಿವಾಸ್, ರಮೇಶ್ ಮತ್ತಿತರರು ಇದ್ದರು.