ಸಾರಾಂಶ
ನಿಡಗುಂದಿ: ನಾಯಿಗಳಿಗೆ ಹರಡುವ ರೇಬಿಸ್ ರೋಗ ಮಾರಣಾಂತಿಕ ಖಾಯಿಲೆಯಾಗಿದ್ದು, ವ್ಯವಸ್ಥಿತ ಹಾಗೂ ಸಂಘಟಿತ ಕಾರ್ಯಕ್ರಮದ ಮೂಲಕ ಅದರ ನಿರ್ಮೂಲನೆ ಸಾಧ್ಯ ಎಂದು ಪಶು ವೈದ್ಯಾಧಿಕಾರಿ ಎಸ್.ವಿ.ಇನಾಮದಾರ್ ಹೇಳಿದರು.
ನಿಡಗುಂದಿ: ನಾಯಿಗಳಿಗೆ ಹರಡುವ ರೇಬಿಸ್ ರೋಗ ಮಾರಣಾಂತಿಕ ಖಾಯಿಲೆಯಾಗಿದ್ದು, ವ್ಯವಸ್ಥಿತ ಹಾಗೂ ಸಂಘಟಿತ ಕಾರ್ಯಕ್ರಮದ ಮೂಲಕ ಅದರ ನಿರ್ಮೂಲನೆ ಸಾಧ್ಯ ಎಂದು ಪಶು ವೈದ್ಯಾಧಿಕಾರಿ ಎಸ್.ವಿ.ಇನಾಮದಾರ್ ಹೇಳಿದರು.
ತಾಲೂಕಿನ ಬೇನಾಳ ಎನ್.ಎಚ್ ಹಾಗೂ ಆರ್.ಎಸ್ ಗ್ರಾಮದಲ್ಲಿ ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ನಿಡಗುಂದಿ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಆಶ್ರಯದಲ್ಲಿ ನಡೆದ ಜಾನುವಾರಗಳ ಚಿಕಿತ್ಸೆ ಹಾಗೂ ನಾಯಿಗಳಿಗೆ ಉಚಿತ ರೇಬಿಸ್ ಲಸಿಕಾ ಶಿಬಿರದಲ್ಲಿ ಮಾತನಾಡಿದರು. ಶ್ವಾನಗಳ ವಾರಸುದಾರರು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ನಾಯಿಗಳಿಗೆ ಲಸಿಕೆ ಹಾಕಿಸಬೇಕು. ರೇಬಿಸ್ ರೋಗದ ಬಗ್ಗೆ ಎಚ್ಚರ ವಹಿಸಬೇಕು. ರೇಬಿಸ್ ಪೀಡಿತ ನಾಯಿ ಕಚ್ಚಿ ದೇಶದಲ್ಲಿ ಸಾಕಷ್ಟು ಜನರು ಸಾವನಪ್ಪುತ್ತಿದ್ದಾರೆ. ನಿರ್ಲಕ್ಷ ವಹಿಸದೆ ತಮ್ಮ ಸಾಕು ನಾಯಿಗಳಿಗೆ ಲಸಿಕೆ ಹಾಕಿಸಿ ಜಾನುವಾರಗಳಿಗೆ ಹರಡುವ ಬಂಜೆ ರೋಗದ ಬಗ್ಗೆ ತಿಳಿಸಿದರು. ಜಾನುವಾರಗಳ ರೋಗ ಪತ್ತೆ ಮತ್ತು ನಿಯಂತ್ರಣಕ್ಕೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ನಿರಂತರ ನಡೆಸಲಾಗುತ್ತಿದೆ ಎಂದರು.ಡಾ.ಅಶೋಕ ವಾಲಿಕಾರ ಸೇರಿ ಇತರರು ಮಾತನಾಡಿದರು. ಗ್ರಾಪಂ ಅಧ್ಯಕ್ಷ ರಮೇಶ ವಂದಾಲ, ಡಾ.ಮಹೇಶ ಹೂಗಾರ, ನಾರಾಯಣ ಇಜೇರಿ, ಮಹೇಶ ಇಂಗಳೇಶ್ವರ, ಗ್ಯಾನಪ್ಪ ಬೇನಾಳ, ಬಿ.ಎಚ್ ಗಣಿ, ಜಿ.ಸಿ ಮುತ್ತಲದಿನ್ನಿ, ಲಕ್ಷ್ಮಣ ಮನಗೂಳಿ, ಎಂ.ಡಿ.ಪತ್ತೇಪೂರ, ರಮೇಶ ಐಹೊಳೆ ಹಾಗೂ ಪಶು ಇಲಾಖೆ ಸಿಬ್ಬಂದಿ ಇದ್ದರು.