ಸರ್ವರಿಗೂ ಸಲ್ಲುವ ವಚನ ಸಾಹಿತ್ಯ ಅಗಮ್ಯವಾದದ್ದು: ಹೆಬ್ಬಾಳು ಹಾಲಪ್ಪ

| Published : Oct 01 2024, 01:17 AM IST

ಸಾರಾಂಶ

ಸ್ವಾರ್ಥದಿಂದ ನಾವೆಲ್ಲರೂ ಒಂದೇ ಎಂಬ ಪರಿಸರ ಹುಟ್ಟು ಹಾಕಿದರೆ ಮಾತ್ರ ವ್ಯಕ್ತಿಗಳ ಕಲ್ಯಾಣ ಸಾಧ್ಯ. ಎಲ್ಲರೂ ಈ ದಿಶೆಯಲ್ಲಿ ಸ್ವಪ್ರೇರಣೆಯಿಂದ ಕ್ರಿಯಾಶೀಲರಾಗಿ ಪಾಲ್ಗೊಳ್ಳಬೇಕು.

ಕನ್ನಡಪ್ರಭ ವಾರ್ತೆ ಬೇಲೂರು

ಅಂಧಕಾರ, ಮೌಢ್ಯ, ಅಜ್ಞಾನ, ಅಸಮಾನತೆಯನ್ನು ಖಂಡಿಸಿ ಸಮ ಸಮಾಜಕ್ಕೆ ಸಾಮರಸ್ಯದ ಮುನ್ನುಡಿ ಬರೆದ ೧೨ನೇ ಶತಮಾನದ ಬಸವಾದಿ ಶರಣರು ನೀಡಿದ. ವಚನ ಸಾಹಿತ್ಯವು ವೈಚಾರಿಕತೆ ಮತ್ತು ವೈಜ್ಞಾನಿಕತೆ ನೆಲಗಟ್ಟಿನಲ್ಲಿ ಅಡಕವಾಗಿದೆ ಎಂದು ಬೇಲೂರು ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಹೆಬ್ಬಾಳು ಹಾಲಪ್ಪ ಹೇಳಿದರು.

ಪಟ್ಟಣದ ಹೊರವಲಯದಲ್ಲಿನ ಆದಿಚುಂಚನಗಿರಿ ಮಠದ ಬಿಜಿಎಸ್ ಕಾಲೇಜು ಸಭಾಂಗಣದಲ್ಲಿ ಹಾಸನ ಜಿಲ್ಲಾ ಯುವ ಘಟಕ, ಜಿಲ್ಲಾ ಕದಳಿ ಮಹಿಳೆ ವೇದಿಕೆ ಹಾಗೂ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಸಂಯುಕ್ತಾಶ್ರಯದಲ್ಲಿ ನಡೆದ ಶರಣೆ ನಂಜಮ್ಮ ಲಿಂ, ತಮ್ಮಣ್ಣಗೌಡ ಹಾಗೂ ಸಾಹಿತಿ ಸುಶೀಲಾ ಸೋಮಶೇಖರ ಇವರ ನೇತೃತ್ವದಲ್ಲಿ ನಡೆದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 1986ರಲ್ಲಿ ಸುತ್ತೂರಿನ ಮಠದ ಡಾ.ಶಿವರಾತ್ರಿ ರಾಜೇಂದ್ರ ಸ್ವಾಮೀಜಿಯವರು ಅಖಿಲ‌ ಭಾರತ ಶರಣ ಸಾಹಿತ್ಯ ಪರಿಷತ್ತು ಸಂಸ್ಥಾಪನೆ ಮಾಡಿದ್ದಾರೆ. ೧೨ನೇ ಶತಮಾನದಲ್ಲಿನ ವಚನ ಕ್ರಾಂತಿ. ಸಾಮಾಜಿಕ ‌ಕ್ರಾಂತಿ ವಿಶ್ವದ ಚರಿತ್ರೆಯಲ್ಲಿ ಅಗಮ್ಯವಾಗಿದೆ. ಶರಣ ಸಾಹಿತ್ಯ ಒಂದು ಜಾತಿ, ಧರ್ಮಕ್ಕೆ ಸೀಮಿತವಾಗಿಲ್ಲ, ಸರ್ವರಿಗೂ ಕೂಡ‌ ಅನುಸರಿಸಬೇಕಾದ ಸಾಹಿತ್ಯವಾಗಿದೆ. ಈ ನಿಟ್ಟಿನಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ತು ಸಕ್ರಿಯವಾಗಿ ವಿವಿಧ ಕೆಲಸ ಮಾಡುತ್ತಿದೆ. ವಿಶೇಷವಾಗಿ ಇಂದು ನಡೆದ ದತ್ತಿ ಉಪನ್ಯಾಸ ಉತ್ತಮವಾಗಿ ಮೂಡಿ ಬಂದಿದ್ದು, ಆದಿಚುಂಚನಗಿರಿ ಮಠದ ಈ ಹಿಂದಿನ ಪೂಜ್ಯರಾದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರು ಗ್ರಾಮೀಣ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಬೇಲೂರಿನಲ್ಲಿ ಕೂಡ ಬಿಜಿಎಸ್ ಕಾಲೇಜು ಸ್ಥಾಪಿಸಿದ್ದಾರೆ ಎಂದರು.

ರಾಜ್ಯ ಕದಳಿ ಮಹಿಳಾ ವೇದಿಕೆ ರಾಜ್ಯ ಸಂಚಾಲರು ಮತ್ತು ಸಾಹಿತಿ ಸುಶೀಲಾ ಸೋಮಶೇಖರ ಮಾತನಾಡಿ, ಬಸವಾದಿ ಶಿವಶರಣರು ವಿಶ್ವ ಕಲ್ಯಾಣಕ್ಕೆ ಪೂರಕ ವಿಚಾರಧಾರೆಗಳನ್ನು ವಚನ ಸಾಹಿತ್ಯದಲ್ಲಿ ಹುದುಗಿಸಿದ್ದು ಭಾವೈಕ್ಯತೆ, ವಿವಿಧತೆಯಲ್ಲಿ ಏಕತೆಯ ಸಾಮರಸ್ಯ ಭಾವವನ್ನು ಬಿಂಬಿಸುತ್ತಿದೆ. ಶಿವಶರಣರ ತತ್ವಾದರ್ಶಗಳನ್ನು ಸರ್ವರೂ ಬದುಕಿನಲ್ಲಿ ಅಳವಡಿಸಿಕೊಂಡು ಜೀವನವನ್ನು ಪಾವನಗೊಳಿಸಿಕೊಳ್ಳಬೇಕು ಎಂದು ತಿಳಿಸಿದರು.

ಸ್ವಾರ್ಥದಿಂದ ನಾವೆಲ್ಲರೂ ಒಂದೇ ಎಂಬ ಪರಿಸರ ಹುಟ್ಟು ಹಾಕಿದರೆ ಮಾತ್ರ ವ್ಯಕ್ತಿಗಳ ಕಲ್ಯಾಣ ಸಾಧ್ಯ. ಎಲ್ಲರೂ ಈ ದಿಶೆಯಲ್ಲಿ ಸ್ವಪ್ರೇರಣೆಯಿಂದ ಕ್ರಿಯಾಶೀಲರಾಗಿ ಪಾಲ್ಗೊಳ್ಳಬೇಕು, ಇತ್ತೀಚಿನ ‌ದಿನಗಳಲ್ಲಿ ರಾಷ್ಟ್ರಪ್ರೇಮ ಹಾಗೂ ರಾಷ್ಟ್ರದ ಬಗ್ಗೆ ಅಭಿಮಾನ ಇಳಿಮುಖವಾಗುತ್ತಿದೆ, ವಚನ ಸಾಹಿತ್ಯವನ್ನು ವಿದ್ಯಾರ್ಥಿಗಳಿಗೆ ನೀಡುವ ಮೂಲಕ ಸರ್ವರಿಗೂ ಸಾಮರಸ್ಯದ ಜೊತೆಗೆ ಭಾವೈಕ್ಯತೆ ಮೂಡಿಸಲು ಸಾದ್ಯ, ಬಸವಣ್ಣನವರ ವಚನ ಸಾಹಿತ್ಯ ಸಂವಿಧಾನದಲ್ಲಿ ಅಶಯಗಳಿಗೆ ಪೂರಕವಾಗಿದೆ ಎಂದರು.ಹಾಸನ ಜಿಲ್ಲಾ ಕದಳಿ ಮಹಿಳಾ ವೇದಿಕೆ ಉಪಾಧ್ಯಕ್ಷೆ ಸುನಂದಾ ಮಾತನಾಡಿ, ವಿದ್ಯಾರ್ಥಿಗಳು ಪ್ರಶ್ನಿಸುವ ಗುಣಧರ್ಮವನ್ನು ಬೆಳೆಸಲು ವಚನ ಸಾಹಿತ್ಯ ಅತ್ಯಂತ ಪೂರಕವಾಗಿದೆ. ಅದ್ದರಿಂದ ಪಠ್ಯದಲ್ಲಿ ಹೆಚ್ಚು ಹೆಚ್ಚು ವಚನಗಳು ಮೂಡಿಬರಲಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ‌ಬೇಲೂರು‌ ಬಿಜಿಎಸ್ ಕಾಲೇಜಿನ ‌ಪ್ರಾಂಶುಪಾಲರಾದ ದಿವಿ ಕುಮಾರ್, ಜಿಲ್ಲಾ ಯುವ ಘಟಕದ ಅಧ್ಯಕ್ಷ ಚಂದನಕುಮಾರ್, ತಾಲೂಕು ಕದಳಿ‌ ಮಹಿಳಾ ವೇದಿಕೆ ಅಧ್ಯಕ್ಷೆ ರೇಖಾ ಮೋಹನ್, ಜಿಲ್ಲಾ ಕಾರ್ಯದರ್ಶಿ ಸೌಭಾಗ್ಯ, ಸಂಚಾಲಕ ಮಲ್ಲಿಕಾರ್ಜುನ, ಕಾಲೇಜು ಉಪನ್ಯಾಸಕರಾದ ಸೀಮಾ, ಕೀರ್ತಿ, ಭವ್ಯ, ರವಿಕುಮಾರ್, ಸವಿತಾ, ಹರ್ಷಿತಾ, ಮಂಜುನಾಥ, ಮೇಘಾ, ಸವಿತಾ ಪಿ, ದೇವರಾಜ್ ಮತ್ತು ಮಹೇಶ್ ಹಾಜರಿದ್ದರು. ಗಾಯಕ ಚಂದನ ಕುಮಾರ್ ವಚನ ಗೀತೆ ನಡೆಸಿಕೊಟ್ಟರು.