ಸಾರಾಂಶ
ಮಕ್ಕಳಲ್ಲಿ ಅನೇಕ ಪ್ರತಿಭೆಗಳಿವೆ. ಪ್ರೋತ್ಸಾಹಗಳಿರದ ಕಾರಣ ಮಕ್ಕಳು ಬೆಳೆಯಲು ಅನಾನೂಲ. ಇಂದಿನ ವ್ಯವಸ್ಥೆಯಲ್ಲಿ ಮಕ್ಕಳು ಎಲ್ಲ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರಲು ಇಂಥ ವೈವಿಧ್ಯಮಯ ಸಾಂಸ್ಕೃತಿಕ ಸ್ಪರ್ಧೆಗಳು ಅನಿವಾರ್ಯ ಎಂದು ತೋಟಗಾರಿಕೆ ಕಾಲೇಜ್‌ನ ಡೀನ್ ಡಾ.ಎಸ್.ವಿ.ಪಾಟೀಲ್ ಅಭಿಪ್ರಾಯ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ, ಬೀದರ್
ಮಕ್ಕಳಲ್ಲಿ ಅನೇಕ ಪ್ರತಿಭೆಗಳಿವೆ. ಪ್ರೋತ್ಸಾಹಗಳಿರದ ಕಾರಣ ಮಕ್ಕಳು ಬೆಳೆಯಲು ಅನಾನೂಲ. ಇಂದಿನ ವ್ಯವಸ್ಥೆಯಲ್ಲಿ ಮಕ್ಕಳು ಎಲ್ಲ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರಲು ಇಂಥ ವೈವಿಧ್ಯಮಯ ಸಾಂಸ್ಕೃತಿಕ ಸ್ಪರ್ಧೆಗಳು ಅನಿವಾರ್ಯ ಎಂದು ತೋಟಗಾರಿಕೆ ಕಾಲೇಜ್‌ನ ಡೀನ್ ಡಾ.ಎಸ್.ವಿ.ಪಾಟೀಲ್ ಅಭಿಪ್ರಾಯ ವ್ಯಕ್ತಪಡಿಸಿದರು.ಅವರು ಶ್ರಾವಣ ಮಾಸ ನಿಮಿತ್ತ ಹಮ್ಮಿಕೊಂಡ ಕಂಠ ಪಾಠ, ನಿಬಂಧ, ಭಾಷಣ ಹಾಗೂ ತಪ್ಪುರಹಿತ ಕನ್ನಡ ಶುದ್ಧ ಬರಹ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ವಚನಗಳು ಬದುಕಿನ ದಾರಿ ದೀಪ. 12ನೇ ಶತಮಾನದ ಬಸವಾದಿ ಶರಣರ ಕಾಯಕ ಇಡೀ ಜಗತ್ತಿಗೆ ಮಾದರಿಯಾಗಿದೆ. ಕಾಯಕವೇ ಕೈಲಾಸವಾದರೆ ಇಂದಿನ ಅನೇಕ ಸಮಸ್ಯೆಗಳು ಹೇಳ ಹೆಸರಿಲ್ಲದೆ ಮಾಯವಾಗುತ್ತವೆ ಎಂದರು.
ಮಕ್ಕಳಿಗೆ ಕನಿಷ್ಠ ಐದಾದರೂ ವಚನ ಬರಲೇ ಬೇಕು. ಮಗು ದೊಡ್ಡವರಾದ ಮೇಲೆ ಅದನ್ನು ಅರಿತುಕೊಳ್ಳುತ್ತಾರೆ. ಪ್ರಾಥಮಿಕ, ಪ್ರೌಢ, ಪಿಯುಸಿ, ಪದವಿ ಮಕ್ಕಳಿಗೆ ಅನುಗುಣವಾಗಿ ಸ್ಪರ್ಧೆ ಏರ್ಪಡಿಸಿ ಅವರಿಗೆಲ್ಲರಿಗೆ ಬಹುಮಾನ ಕೊಡುತ್ತಿರುವುದು ನಿಜವಾಗಲೂ ಶ್ಲಾಘನೀಯ ವಿಷಯ. ಮುಖ್ಯ ಅತಿಥಿಗಳಾಗಿದ್ದ ಹಲಬರ್ಗಾ ಕೆಪಿಎಸ್ ಶಾಲೆಯ ಶಿಕ್ಷಕಿಯರು ಹಾಗೂ ಕವಿಗಳಾದ ಧನಲಕ್ಷ್ಮಿ ಪಾಟೀಲ್ ಮಾತನಾಡಿ, ಮಕ್ಕಳಿಗೆ ಇಂಥ ಸ್ಪರ್ಧೆಗಳಿಂದ ಅವರಲ್ಲಿರುವ ಪ್ರತಿಭೆ ಹೊರ ಹೊಮ್ಮಲು ಪ್ರೇರಣೆ ನೀಡಬಲ್ಲದು ಎಂದರು.ಟ್ರಸ್ಟ್ ಅಧ್ಯಕ್ಷರಾದ ಲಿಂಗಾರತಿ ನಾವದಗೇರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಸುರೇಶ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಬಗ್ಗೆ ಸೃಷ್ಟಿ ಸೋಮನಾಥ ಜೊನ್ನಿಕೇರಿ ಮಾತನಾಡಿ ಎಲ್ಲರನ್ನು ಅಚ್ಚರಿಗೊಳಿಸಿದರು. ವೈಜಿನಾಥ ಸಜ್ಜನಶೆಟ್ಟಿ ವಚನಗಳನ್ನು ಹಾಡಿದರು. ನಿರ್ದೇಶಕರಾದ ಡಾ. ಸಿ.ಆರ್.ಕೊಂಡಾ ಸ್ವಾಗತಿಸಿದರೆ, ಸಂಗಾರೆಡ್ಡಿ ಕೊತ್ತ ನಿರೂಪಿಸಿ ದಾನಾ ಸಂತೋಷ ವಂದಿಸಿದರು.