ವಚನ ಸಾಹಿತ್ಯ ಸಮಾಜ ಪರಿವರ್ತನೆಗೆ ಪೂರಕ

| Published : May 13 2024, 12:04 AM IST

ಸಾರಾಂಶ

ಮಾತುಗಳು ಮನುಷ್ಯನ ವ್ಯಕ್ತಿತ್ವ ಗುರುತಿಸುವುದರಿಂದ ಮಾತುಗಳು ಮತ್ತೋಬ್ಬರ ಮೇಲೆ ಪ್ರಭಾವ ಬೀರುವ ಮಾತುಗಳಿದ್ದರೆ ಆ ವ್ಯಕ್ತಿ ತನ್ನನ್ನು ತಾನು ಸುಧಾರಿಸಿಕೊಳ್ಳಲು ಸಾಧ್ಯ

ಗದಗ: ವಚನ ಸಾಹಿತ್ಯ ಕನ್ನಡ ಸಾಹಿತ್ಯದ ಪ್ರಮುಖ ಘಟ್ಟವಾಗಿದ್ದು, ಅಲ್ಲಿಯ ವಚನಗಳು ಸಂಸ್ಕೃತಿ, ಸಂಸ್ಕಾರ, ಮಾನವೀಯ ಮೌಲ್ಯಗಳ ಸಂಗಮವಾಗಿದೆ ಎಂದು ಮಹೇಶ್ವರ ಸ್ವಾಮಿಗಳು ಹೇಳಿದರು.

ನಗರದ ಅಡವೀಂದ್ರಸ್ವಾಮಿ ಮಠದಲ್ಲಿ ನಡೆದ ಮಾಸಿಕ ಶಿವಾನುಭವ ಗೋಷ್ಠಿಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಇಂದಿನ ಸಮಾಜಕ್ಕೆ ಅವಶ್ಯವಾಗಿರುವುದರಿಂದ ಜನಸಮುದಾಯ ಇವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸುಂದರ ಸಮಾಜ ಕಟ್ಟುವಲ್ಲಿ ಸದಾ ನಿರತರಾಗಬೇಕು ಎಂದರು.

ಶಿರಹಟ್ಟಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎ. ಬಳಿಗೇರ ಮಾತನಾಡಿ, ಮಾತುಗಳು ಮನುಷ್ಯನ ವ್ಯಕ್ತಿತ್ವ ಗುರುತಿಸುವುದರಿಂದ ಮಾತುಗಳು ಮತ್ತೋಬ್ಬರ ಮೇಲೆ ಪ್ರಭಾವ ಬೀರುವ ಮಾತುಗಳಿದ್ದರೆ ಆ ವ್ಯಕ್ತಿ ತನ್ನನ್ನು ತಾನು ಸುಧಾರಿಸಿಕೊಳ್ಳಲು ಸಾಧ್ಯ. ಮಾತುಗಳು ದ್ವೇಷವನ್ನುಂಟು ಮಾಡದೇ ಪ್ರೀತಿಯನ್ನುಂಟು ಮಾಡಬೇಕು.ಇಂತಹ ಮಾತುಗಳು ಇಂದಿನ ಸಮಾಜಕ್ಕೆ ಅವಶ್ಯವಾಗಿವೆ. ಬೆಳಕು ಕತ್ತಲೆ ದೂರ ಮಾಡುವ ಹಾಗೇ ಮನುಷ್ಯರಲ್ಲಿ ಅಜ್ಞಾನ, ಅಂಧಕಾರ, ದುರಂಕಾರ ದೂರ ಮಾಡಿ ಬೆಳಕು ಚೆಲ್ಲುವಂತಹ ಮಾತುಗಳು ಇರಬೇಕು ಎಂದು ಹಲವಾರು ಶಿವಶರಣರ ವಚನಗಳ ಮೂಲಕ ತಿಳಿಸಿದರು.

ವಿ.ಎಂ. ಕುಂದ್ರಾಳಹಿರೇಮಠ ಮಾತನಾಡಿ, ನಾಲಿಗೆ ಒಳ್ಳೆಯದಾದರೆ ನಾಡೆಲ್ಲ ಒಳ್ಳೆಯದು ಎಂಬು ನಾಣ್ಣುಡಿ ಅಳವಡಿಸಿಕೊಂಡು ಹೋಗುವ ಅವಶ್ಯಕತೆ ಇದೆ ಎಂದರು.

ಈ ವೇಳೆ ಪೂರ್ಣಿಮಾ ಸವದತ್ತಿಮಠ ಎಂ.ಎಸ್.ಐ.ಐ.ಟಿ ಜಿಮ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಹಿನ್ನೆಲೆ ಅವರನ್ನು ಸನ್ಮಾನಿಸಲಾಯಿತು. ಅಕ್ಷತಾ ಹಿರೇಮಠ ಇವರಿಂದ ಸಂಗೀತ ಜರುಗಿತು. ವಿ.ಜಿ. ಬಾರಕೇರ ಹಾಗೂ ನೇಹಾ ಹಿರೇಮಠ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಆನಂದ ಹಿರೇಮಠ, ಚಿನ್ಮಯ ಕುಂದಗೋಳ, ಸೋಮಶೇಖರ ಅಣ್ಣಿಗೇರಿ ಪ್ರಸಾದ ಸೇವೆ ವಹಿಸಿಕೊಂಡಿದ್ದರು. ವಿನಾಯಕ ಸಜ್ಜನ ಸ್ವಾಗತಿಸಿದರು, ಯು.ಆರ್. ಭೂಸನೂರಮಠ ನಿರೂಪಿಸಿದರು. ಸಿದ್ಧಣ್ಣ ಜವಳಿ ವಂದಿಸಿದರು.