ಸಮಾಜಗಳ ಅಭಿವೃದ್ಧಿಗೆ ನಡೆದ ವಚನ ಚಳವಳಿ: ಕೆ.ನಾಗೇಶಪ್ಪ

| Published : Mar 22 2025, 02:06 AM IST

ಸಾರಾಂಶ

ಶರಣ ಬಸವಣ್ಣನವರ ನೇತೃತ್ವದಲ್ಲಿ ವಚನ ಚಳವಳಿ ಕೇವಲ ವ್ಯಕ್ತಿ ಶ್ರೇಯೋಭಿವೃದ್ಧಿಗಾಗಿ ನಡೆಯದೇ, ಸಮಾಜದ ಅಭಿವೃದ್ಧಿಗಾಗಿ ನಡೆಯಿತು ಎಂದು ಹೊನ್ನಾಳಿ ಎಸ್‌ಎಂಎಸ್‌ಎಫ್‌ಜೆಸಿ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕ ಕೆ.ನಾಗೇಶಪ್ಪ ಹೇಳಿದ್ದಾರೆ.

- ನ್ಯಾಮತಿಯಲ್ಲಿ "ವಚನಗಳ ಸಾಮಾಜಿಕಪ್ರಜ್ಞೆ " ದತ್ತಿ ಉಪನ್ಯಾಸ

- - -

ನ್ಯಾಮತಿ: ಶರಣ ಬಸವಣ್ಣನವರ ನೇತೃತ್ವದಲ್ಲಿ ವಚನ ಚಳವಳಿ ಕೇವಲ ವ್ಯಕ್ತಿ ಶ್ರೇಯೋಭಿವೃದ್ಧಿಗಾಗಿ ನಡೆಯದೇ, ಸಮಾಜದ ಅಭಿವೃದ್ಧಿಗಾಗಿ ನಡೆಯಿತು ಎಂದು ಹೊನ್ನಾಳಿ ಎಸ್‌ಎಂಎಸ್‌ಎಫ್‌ಜೆಸಿ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕ ಕೆ.ನಾಗೇಶಪ್ಪ ಹೇಳಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಹೊನ್ನಾಳಿ ತಾಲೂಕು ಶರಣ ಸಾಹಿತ್ಯ ಪರಿಷತ್ತು ಹಾಗೂ ಕದಳಿ ಮಹಿಳಾ ವೇದಿಕೆ ವತಿಯಿಂದ ವಚನಗಳ ಸಾಮಾಜಿಕಪ್ರಜ್ಞೆ ವಿಷಯ ಕುರಿತು ವಿದ್ಯಾರ್ಥಿಗಳಿಗೆ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಚನ ಚಳವಳಿ ಸಾಮಾಜಿಕ, ರಾಜಕೀಯ, ಧಾರ್ಮಿಕ, ಸಾಂಸ್ಕೃತಿಕವಾಗಿ ಅನೇಕ ಬದಲಾವಣೆಗಳನ್ನು ಹೊಂದಿದ ಕಾಲಘಟ್ಟದಲ್ಲಿ ನಡೆಯಿತು. ಬಸವಣ್ಣನವರ ಮನಸಿನ ತುಡಿತ ಕಟ್ಟಕಡೆಯ ವ್ಯಕ್ತಿ ಉದ್ದಾರವಾಗಿತ್ತು. ಶೋಷಣೆ ಅನುಭವಿಸಿದ ಪ್ರತಿ ವ್ಯಕ್ತಿಗಳ ಏಳ್ಗೆಗೆ ಶ್ರಮಿಸಿದವರು ಶರಣರು ಎಂದರು.

ಹೊನ್ನಾಳಿ ತಾಲೂಕು ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ. ಎಂ.ಆರ್‌. ಲೋಕೇಶ ಮಾತನಾಡಿ, ವಚನಗಳಲ್ಲಿ ಅಡಗಿರುವ ಸಾಮಾಜಿಕ ಮೌಲ್ಯಗಳನ್ನು ಇಂದಿನ ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು. ಅವುಗಳನ್ನು ಓದುವ ಮೂಲಕ ಬದುಕಿನ ತಿರುಳು ಅರಿಯಬೇಕು ಎಂದರು.

ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಡಾ.ಟಿ.ಸಿ.ಭಾರತಿ ವಹಿಸಿದ್ದರು. ಹೊನ್ನಾಳಿ ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಶಾರದ ಕಣಗೊಟಗಿ, ಸಹಾಯಕ ಪ್ರಾಧ್ಯಾಪಕರಾದ ಜಿ.ಪಿ.ರಾಘವೇಂದ್ರ, ಡಾ. ಟಿ.ಆರ್‌. ಕುಬೇರಪ್ಪ, ಎಂ.ಎಸ್‌. ಗಿರೀಶ ಸೇರಿದಂತೆ ಕಾರ್ಯಕಾರಿ ಸಮಿತಿ ಸದಸ್ಯರು, ಶರಣ ಸಾಹಿತ್ಯ ಪರಿಷತ್ತು ಮತ್ತು ಕದಳಿ ಮಹಿಳಾ ವೇದಿಕೆ ಸದಸ್ಯರು ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆಡಳಿತಾತ್ಮಕ ಸಿಬ್ಬಂದಿ ಇದ್ದರು.

- - - (-ಫೋಟೋ):