ವಚನ ಸಾಹಿತ್ಯ ನಮಗೆ ಸಿಕ್ಕ ಬಹುದೊಡ್ಡ ಕಾಣಿಕೆ: ರೇವಣಸಿದ್ದಪ್ಪ ಜಲಾದೆ

| Published : Dec 06 2024, 08:57 AM IST

ವಚನ ಸಾಹಿತ್ಯ ನಮಗೆ ಸಿಕ್ಕ ಬಹುದೊಡ್ಡ ಕಾಣಿಕೆ: ರೇವಣಸಿದ್ದಪ್ಪ ಜಲಾದೆ
Share this Article
  • FB
  • TW
  • Linkdin
  • Email

ಸಾರಾಂಶ

ಬೀದರ್‌ನಲ್ಲಿ ವಚನಾಮೃತ ಕನ್ನಡ ಸಂಘದಿಂದ ಆಯೋಜಿಸಲಾದ ಹತ್ತು ಜನ ವಚನಕಾರ್ತಿಯರ ಕುರಿತಾದ ಕವಿಗೋಷ್ಠಿಯಲ್ಲಿ ಪ್ರಮುಖರನ್ನು ಸನ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ಬೀದರ್‌

ವಚನ ಸಾಹಿತ್ಯ ಹಾಗೂ ವಚನಕಾರರು ನಮಗಾಗಿ ನೀಡಿರುವ ಬಹುದೊಡ್ಡ ಕಾಣಿಕೆಯಾಗಿದ್ದು ಇಂತಹ ಅಮುಲ್ಯವಾದ ಸಾಹಿತ್ಯದ ಸಾರವನ್ನು ಹೀರಿಕೊಂಡು ನಾವು ನಮ್ಮ ಜೀವನವನ್ನು ರೂಪಿಸಿಕೊಳ್ಳಬೇಕೆಂದು ವಿಕಾಸ ಅಕಾಡೆಮಿಯ ರೇವಣಸಿದ್ದಪ್ಪ ಜಲಾದೆ ತಿಳಿಸಿದರು. ವಚನಾಮೃತ ಕನ್ನಡ ಸಂಘದಿಂದ ಆಯೋಜಿಸಲಾದ ಹತ್ತು ಜನ ವಚನಕಾರ್ತಿಯರ ಕುರಿತಾದ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿ, ಸಂಘ, ಸಂಸ್ಥೆಗಳು ಬೆಳೆಯಬೇಕು ಅದರಿಂದ ನಮಗೆ ಬಹು ದೊಡ್ಡ ಪ್ರಯೋಜನ ಆಗುತ್ತದೆ ಎಂದು ಹೇಳಿದರು.ರಾಣಿ ಸತ್ಯಮೂರ್ತಿ ಅವರು ವಚನಾಮೃತ ಕನ್ನಡ ಸಂಘದ ಕಾರ್ಯಕ್ರಮಗಳ ಕುರಿತು ಪ್ರಶಂಸೆಯ ಮಾತಗಳನ್ನಾಡಿದರು. ಖ್ಯಾತ ಗಾಯಕಿ ರೇಖಾ ಅಪ್ಪಾರಾವ ಸೌದಿ ಅವರು ತಮ್ಮ ಸುಶ್ರಾವ್ಯವಾದ ಕಂಠದಿಂದ ವಚನಗಾಯನ ಹಾಡಿ ನೆರೆದ ಜನರಿಗೆ ರಸದೌತಣ ಬಡಿಸಿದರು.

ಸಂಗಮೇಶ ನಾಶಿಗಾರ, ವೇದವತಿ ಮಠಪತಿ, ವಿಜಯಲಕ್ಷ್ಮಿ ಕೌಟಗೆ, ಸುನೀತಾ ದಾಡಗೆ, ಮತ್ತುಂಬಿ, ಮಹೇಶ್ವರಿ ಹೇಡೆ, ರೂಪಾ ಪಾಟೀಲ, ಕೀರ್ತಿಲತಾ ಹೊಸಳ್ಳೆ, ಕನ್ಯಾಕುಮಾರಿ ಮೂಲಗೆ, ರಾಜಮ್ಮ ಚಿಕ್ಕಪೇಟೆ, ಜಗದೇವಿ ಮೈನಾಳೆ ಅವರು ಕವಿತೆಗಳ ವಾಚನ ಮಾಡಿದರು.ಸಂಘದ ಅಧ್ಯಕ್ಷ ಪ್ರೊ.ಸಿದ್ರಾಮಪ್ಪಾ ಮಾಸಿಮಾಡೆ ಅಧ್ಯಕ್ಷತೆ ವಹಿಸಿ ಮಾತನಾಡಿ, ವಚನಾಮೃತ ಪರಿಶುದ್ಧ ಕಾಯಕ ಜೀವಿಗಳಾದ ಈ ಹತ್ತು ಜನ ವಚನಕಾರ್ತಿಯರು ಅಸಾಮಾನ್ಯ ಮಹಿಳೆಯರು, ಪೂಜ್ಯರು. ಬೆಳಿಗ್ಗೆ ಎದ್ದು ಇವರನ್ನು ನೆನೆಯಬೇಕು, ಇಂತಹವನ್ನು ಕುರಿತು ಗೋಷ್ಠಿ ಏರ್ಪಡಿಸಲು ತುಂಬಾ ಸಂತೋಷವಾಯಿತು ಎಂದರು. ರೇಣುಕಾ ಎನ್.ಬಿ. ಅವರು ವಚನಗಾಯನ ಮಾಡಿದರು. ಪ್ರವೀಣ, ಶ್ರೀದೇವಿ ಸೋಮಶೆಟ್ಟಿ, ಬಸವರಾಜ ಬಿರಾದಾರ, ಶ್ರೇಯಾ ಮಹೀಂದ್ರಕರ್, ನಾಗರಾಜ ಕರ್ಪೂರ್, ಶಿವಕುಮಾರ ಕಟ್ಟೆ, ಅಪ್ಪಾರಾವ ಸೌದಿ, ಪರಮೇಶ್ವರ ಬಿರಾದಾರ, ಸಂತೋಷ ಮಂಗಳೂರೆ, ಬಸವರಾಜ ರುದನೂರ, ಗಂಗಶೆಟ್ಟಿ ಖಾನಾಪೂರ, ಭಾರತಿ ವಸ್ತ್ರದ, ಜಯದೇವಿ ಯದಲಾಪೂರೆ ಹಾಗೂ ಅನೇಕರು ಉಪಸ್ಥಿತರಿದ್ದರು.