ವಚನಗಳು ಕನ್ನಡದ ಸಾಂಕೃತಿಕ ಬಂಡಾರ

| Published : Jul 21 2025, 01:30 AM IST

ಸಾರಾಂಶ

ವಚನ ಪದವು ಹೇಳಿದ್ದು ಅಥವಾ ನುಡಿದದ್ದು ಎಂಬುದನ್ನು ಸೂಚಿಸುತ್ತದೆ ಇದು ಬಸವಣ್ಣ ಮತ್ತು ಶರಣರು ಹೇಳಿದ ಮಾತುಗಳನ್ನು ಸೂಚಿಸುತ್ತದೆ. ವಚನಗಳು ಸಾಮಾಜಿಕ ಅಸಮಾನತೆಗಳು ಆಚರಣೆಗಳು ಹಾಗೂ ಜಾತಿ ತಾರತಮ್ಯವನ್ನು ಟೀಕಿಸುತ್ತದೆ ಮತ್ತು ಶೀವನ ಮೇಲೆ ಕೇಂದ್ರೀಕೃತವಾದ ಭಕ್ತಿಯನ್ನು ಪ್ರತಿಪಾದಿಸುತ್ತದೆ.

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಸಾಮಾಜಿಕ ಸಮಸ್ಯೆ, ವೈಯಕ್ತಿ ಭಕ್ತಿ ಮತ್ತು ಶಿವನ ಆರಾಧನೆಯ ಬಗ್ಗೆ ವಚನಗಳನ್ನು ಸರಳ ಮತ್ತು ನೇರವಾದ ಭಾಷೆಯಲ್ಲಿ ವಿವರಿಸುತ್ತವೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಆರ್.ಅಶ್ವತ್ಥ್‌ ಹೇಳಿದರು.ಪಟ್ಟಣದ ಅಕ್ಕಚಮ್ಮ ಕಲ್ಯಾಣ ಮಂಟಪದಲ್ಲಿ ಕಸಾಪ, ಅಖಿಲ ಭಾರದ ಶರಣ ಸಾಹಿತ್ಯ ಪರಿಷತ್, ಕದಳಿ ಮಹಿಳಾ ವೇದಿಕೆ ಬಂಗಾರಪೇಟೆ ವತಿಯಿಂದ ಹಮ್ಮಿಕೊಂಡಿದ್ದ ವಚನ ವೈಭವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಚನಗಳು ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯಲ್ಲಿ ಮಹತ್ವದ ಸ್ಥಾನವನ್ನು ಹೊಂದಿವೆ ಎಂದರು.

ತಾರತಮ್ಯಗಳಿಗೆ ವಿರೋಧ

ವಚನ ಪದವು ಹೇಳಿದ್ದು ಅಥವಾ ನುಡಿದದ್ದು ಎಂಬುದನ್ನು ಸೂಚಿಸುತ್ತದೆ ಇದು ಬಸವಣ್ಣ ಮತ್ತು ಶರಣರು ಹೇಳಿದ ಮಾತುಗಳನ್ನು ಸೂಚಿಸುತ್ತದೆ. ವಚನಗಳು ಸಾಮಾಜಿಕ ಅಸಮಾನತೆಗಳು ಆಚರಣೆಗಳು ಹಾಗೂ ಜಾತಿ ತಾರತಮ್ಯವನ್ನು ಟೀಕಿಸುತ್ತದೆ ಮತ್ತು ಶೀವನ ಮೇಲೆ ಕೇಂದ್ರೀಕೃತವಾದ ಭಕ್ತಿಯನ್ನು ಪ್ರತಿಪಾದಿಸುತ್ತದೆ ಎಂದರು.ವಚನಗಳು ಕನ್ನಡ ಸಾಹಿತ್ಯದ ಮೇಲೆ ಮತ್ತು ಸಾಮಾಜಿಕ ಚಿಂತನೆಗಳ ಮೇಲೆ ದೊಡ್ಡ ಪ್ರಭಾವ ಬೀರಿದವು, ವಚನಗಳು ಸರಳ ಮತ್ತು ಅರ್ಥವಾಗುವ ಭಾಷೆತಲ್ಲಿ ಜೀವನದ ಸತ್ಯಗಳನ್ನು ತಿಳಿಸುತ್ತವೆ. ಅವುಗಳನ್ನು ಅನುಸರಿಸುವ ಮೂಲಕ ಉತ್ತಮ ಜೀವನವನ್ನು ನಡೆಸಬಹುದು. ವಚನ ಸಾಹಿತ್ಯವು ಕನ್ನಡ ಸಾಂಸ್ಕೃತಿಕ ಪರಂಪರೆಯ ಒಂದು ಅಮೂಲ್ಯವಾದ ಭಾಗವಾಗಿದೆ ಎಂದರು.ವಚನಗಳಲ್ಲಿ ಎಲ್ಲವೂ ಇದೆ

ರೋಟರಿ ಕ್ಲಬ್‍ನ ಅಧ್ಯಕ್ಷರಾದ ಕೆ.ಸಿ. ಉಮೇಶ್ ಮಾತನಾಡಿ ಕನ್ನಡ ಸಾಹಿತ್ಯ ಪರಂಪರೆಯಲ್ಲಿ ತುಂಬಾ ವಿಶಿಷ್ಟ ಸ್ಥಾನ ವಚನ ಸಾಹಿತ್ಯಕ್ಕಿದೆ. ವಚನ ಗದ್ಯ ಪದ್ಯವನ್ನೊಳಗೊಂಡ ವಿಶೀಷ್ಟ ಸಾಹಿತ್ಯ ವಚನಗಳಲ್ಲಿ ಧರ್ಮ,ನೀತಿ ಜಾತಿ ತತ್ವ ಆಧ್ಯಾತ್ಮ ಸಮಾಜ ವಿಜ್ಞಾನ, ಮನೋವಿಜ್ಞಾನ, ರಾಜಕೀಯ ಹೀಗೆ ಪರಿಶುದ್ದ ಜೀವನಕ್ಕೆ ಬೇಕಾದ ಎಲ್ಲ ಸಂಗತಿಗಳೂ ಅಡಕವಾಗಿದೆ ಎನ್ನಬಹುದು ಎಂದರು.ವೇದಿಕೆಯಲ್ಲಿ ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಗಂಗಾಂಬಿಕೆ ನಂಜುಂಡಪ್ಪ, ಕನ್ನಡ ಪರ ಹೋರಾಟಗಾರ ಅ.ಕೃ.ಸೋಮಶೇಖರ್, ಎನ್.ಶ್ರೀನಿವಾಸ್, ಕೆ.ಬಿ.ಮಂಜುನಾಥ್, ಎನ್.ಶ್ರೀನಾಥ್, ನಾಗರಾಜ್, ಕುಮದಿನಿ ಇತರರು ಇದ್ದರು.