ಸಾರಾಂಶ
ಕನ್ನಡಪ್ರಭ ವಾರ್ತೆ ಲಿಂಗಸುಗೂರು
ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಮತ್ತು ರಾಜ್ಯ ಸರ್ಕಾರದ ಸಹೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿರುವ ರಾಜ್ಯಮಟ್ಟದ 3ನೇ ವೈಜ್ಞಾನಿಕ ಸಮ್ಮೇಳನದತ್ತ ಜಿಲ್ಲೆಯ ಜನರ ಚಿತ್ತ ನೆಟ್ಟಿದ್ದು, ಸಮ್ಮೇಳನದ ಯಶಸ್ವಿಗೆ ಆಯೋಜಕರು ಸತತವಾಗಿ ದುಡಿಯುತ್ತಿದ್ದಾರೆ.ಲಿಂಗಸುಗೂರು ಪಟ್ಟಣದ ಪದವಿಪೂರ್ವ ಕಾಲೇಜು ಮೈದಾನದಲ್ಲಿ 120*300 ಅಡಿಯ ಬೃಹತ್ ವೇದಿಕೆ ಹಾಕಲಾಗಿದೆ. ಇದರಲ್ಲಿ 80 ಅಡಿ ವೇದಿಕೆ ನಿರ್ಮಿಸಲಾಗಿದೆ. 8000 ಆಸನಗಳನ್ನು ಹಾಕಲಾಗಿದೆ. ಸಮ್ಮೇಳನದ ವೇದಿಕೆ ಬಲಭಾಗದಲ್ಲಿ ಉಪಾಹಾರ, ಊಟಕ್ಕಾಗಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ವೇದಿಕೆಯ ಮುಂಭಾಗ ಅಂಗಡಿಗಳು ಹಾಗೂ ಎಡಭಾಗದಲ್ಲಿ ವಸ್ತು ಪ್ರದರ್ಶನಗಳನ್ನು ಹಾಕಲಾಗಿದೆ. ಸಮ್ಮೇಳನದ ಕುರಿತು ಪಟ್ಟಣದ ಪ್ರಮುಖ ರಸ್ತೆಯಲ್ಲಿ ಸಮ್ಮೇಳನ ಬ್ಯಾನರ್ ಬಂಟಿಂಗ್ಸ್‌ನ್ನು ಹಾಕಿ, ಸಮ್ಮೇಳನದ ಕುರಿತು ವ್ಯಾಪಕ ಪ್ರಚಾರ ನಡೆದಿದೆ.
ಸಮಾಜದಲ್ಲಿ ಅನೇಕ ಅಂದಾಚರಣೆಗಳು ಇದ್ದು, ಕೆಲವು ವಿಜ್ಞಾನಕ್ಕೂ ಸವಾಲಾಗಿವೆ. ಮೂಢನಂಭಿಕೆಗಳಂತೂ ಸಮಾಜದಲ್ಲಿ ಹಾಸು ಹೊಕ್ಕಾಗಿವೆ. ಇಂತಹ ಸಂದರ್ಭದಲ್ಲಿ ನಡೆಯುತ್ತಿರುವ ವೈಜ್ಞಾನಿಕ ಸಮ್ಮೇಳನ ತೀವ್ರ ಕುತೂಹಲ ಮೂಡಿಸಿದ್ದು, ವೈಜ್ಞಾನಿಕ ಪರಿಷತ್ತು ಕಾರ್ಯಕ್ರಮಗಳ ಯಶಸ್ವಿಗೆ ಹಲವು ರೀತಿಯ ಏರ್ಪಾಡುಗಳನ್ನು ಮಾಡಿಕೊಂಡಿದೆ.ಸಮ್ಮೇಳನ ಉದ್ಘಾಟಿಸಲಿರುವ ಸಿಎಂ: ಶುಕ್ರವಾರ ಬೆಳಗ್ಗೆ ಧ್ವಜಾರೋಹಣವನ್ನು ಸಹಾಯಕ ಆಯುಕ್ತ ಅವಿನಾಶ ಶಿಂಧೆ ಸಂಜೀವನ ನೇರವೇರಿಸಲಿದ್ದಾರೆ. ಪರಿಷತ್ತಿನ ಧ್ವಜಾರೋಹಣವನ್ನು ಕರ್ನಾಟಕ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷ ಹುಲಿಕಲ್ ನಟರಾಜ ಮಾಡಲಿದ್ದಾರೆ.
ಬೆಳಗ್ಗೆ 9 ಗಂಟೆಗೆ ನಾನಾ ಕಲಾತಂಡಗಳೊಂದಿಗೆ ಸಮ್ಮೇಳನಾಧ್ಯಕ್ಷ ಲೊಕೋಪಯೊಗಿ ಸಚಿವ ಸತೀಶ ಜಾರಕಿಹೊಳಿಯವರ ಮೆರವಣಿಗೆ ನಡೆಯಲಿದೆ. ಬೆಳಗ್ಗೆ 10 ಗಂಟೆಗೆ ಸಮ್ಮೇಳನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ.ನ್ಯಾಯಮೂರ್ತಿ ನಾಗ ಮೋಹನ್‌ದಾಸ್ ಸಮ್ಮೇಳನಾದ್ಯಕ್ಷರಿಗೆ ಅಧಿಕಾರ ಹಸ್ತಾಂತರ ಮಾಡಲಿದ್ದಾರೆ. ಇದೇ ವೇಳೆ ಪ್ರತಿಜ್ಞಾವಿಧಿ ಬೋಧನೆ ಮಾಡಲಾಗುತ್ತದೆ. ಸಮ್ಮೇಳನದಲ್ಲಿ ವಿಜ್ಞಾನ ಸಿರಿ ಮಾಸ ಪತ್ರಿಕೆಯನ್ನು ಸಚಿವ ಎನ್.ಎಸ್ ಬೋಸರಾಜು ಬಿಡುಗಡೆ ಮಾಡಲಿದ್ದಾರೆ. ಕಲ್ಯಾಣ ಸಿರಿ ಸ್ಮರಣ ಸಂಚಿಕೆಯನ್ನು ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಬಿಡುಗಡೆ ಮಾಡಲಿದ್ದಾರೆ. 00000ವಿಜ್ಞಾನ ಗ್ರಾಮಕ್ಕೆ ಸಚಿವ ಪ್ರಿಯಾಂಕ ಖರ್ಗೆ ಚಾಲನೆ ನೀಡಲಿದ್ದಾರೆ. ನೂತನ ಕ್ಯಾಲೆಂಡರ್‌ನ್ನು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಬಿಡುಗಡೆಗೊಳಿಸಲಿದ್ದಾರೆ. 2024ರ ದಿನಚರಿ ಪುಸ್ತಕವನ್ನು ಸಂಸದ ರಾಜಾ ಅಮರೇಶ್ವರ ನಾಯಕ ಬಿಡುಗಡೆ ಮಾಡಲಿದ್ದಾರೆ. ಕೃಷಿಸುದ್ದಿ ಮಾಸ ಪತ್ರಿಕೆಯನ್ನು ಶಾಸಕ ಮಾನಪ್ಪ ವಜ್ಜಲ್ ಬಿಡುಗಡೆ ಮಾಡಲಿದ್ದಾರೆ. ವಿಜ್ಞಾನ ವಸ್ತು ಪ್ರದರ್ಶನ ವಿಧಾನ ಪರಿಷತ್ತಿನ ಸದಸ್ಯ ಶರಣಗೌಡ ಬಯ್ಯಾಪುರ ಉದ್ಘಾಟಿಸಲಿದ್ದಾರೆ. ಎಚ್ಎನ್ ಟಿವಿ ಚಾನೆಲ್ ಮಾಜಿ ಶಾಸಕ ಡಿ.ಎಸ್ ಹೂಲಗೇರಿ, ಮಳಿಗೆಗಳನ್ನು ಮಾಜಿ ಸಚಿವ ಅಮರೇಗೌಡ ಬಯ್ಯಾಪುರ ಉದ್ಘಾಟಿಸಲಿದ್ದಾರೆ.
ಜೀವಮಾನ ಸಾಧನೆ ಪ್ರಶಸ್ತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸುಪ್ರೀಂಕೋರ್ಟನ ನಿವೃತ್ತ ನ್ಯಾಯಮೂರ್ತಿ ಶಿವರಾಜ ಪಾಟೀಲ್, ಕ್ರಾಂತಿಕಾರಿ ಹೋರಾಟಗಾರ ಆರ್.ಮಾನಸಯ್ಯ, ಕವಯಿತ್ರಿ ಬಿ.ಟಿ ಲಲಿತಾ ನಾಯ್ಕ, ಕೌಶಲ್ಯ ತರಬೇತುದಾರ ಚೇತನ್ ರಾಮ, ರಾಷ್ಟçಪತಿ ಪ್ರಶಸ್ತಿ ಪುರಸ್ಕೃತ ಹೋರಾಟಗಾರ್ತಿ ಅಕಾಯಿ ಪದ್ಮಶಾಲಿಗೆ ನೀಡಲಿದ್ದಾರೆ.ಮಧ್ಯಾಹ್ನ 2.30ಕ್ಕೆ ನಮ್ಮ ಸಂವಿಧಾನ ನಮ್ಮ ಹಕ್ಕು ವಿಷಯದ ಕುರಿತು ಜಸ್ಟಿಸ್ ನಾಗಮೋಹನ ದಾಸ್, ಡಾ.ಸಿ.ಸೋಮಶೇಖರ, ಎಸ್.ಕೆ ಉಮೇಶ ನಡೆಸಲಿದ್ದಾರೆ. ಸಂಜೆ 4.30 ಸಮ್ಮೇಳನಾಧ್ಯಕ್ಷರ ಸಾಧನೆ ಸಂವೇಧನಾ ಸಂವಾದ ನಡೆಯಲಿದೆ. ರಾತ್ರಿ 8.00 ಗಂಟೆಗೆ ಸಾಂಸ್ಕೃತಿಕ ಸೌರಭ ನಡೆಯಲಿದೆ.