ಸಾರಾಂಶ
ಉಡುಪಿ ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯದಲ್ಲಿ ಎನ್ನೆಸೆಸ್ ಘಟಕ ಆಯೋಜಿಸಿದ್ದ ಭಯೋತ್ಪಾದನ ವಿರೋಧಿ ದಿನದ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಕಾರ್ಯದರ್ಶಿ ಅಶೋಕ ಆರ್. ಭಯೋತ್ಪಾದನಾ ವಿರೋಧಿ ದಿನದ ಪ್ರತಿಜ್ಞಾ ವಿದಿ ಬೋಧಿಸಿದರು.
ಕನ್ನಡಪ್ರಭ ವಾರ್ತೆ ಉಡುಪಿ
ಮಾಜಿ ಪ್ರಧಾನಿ ರಾಜೀವ್ ಗಾಂಧಿ ಪುಣ್ಯತಿಥಿಯಾದ ಮೇ ೨೧ ರಂದು ರಾಷ್ಟ್ರೀಯ ಭಯೋತ್ಪಾದನಾ ವಿರೋಧಿ ದಿನ ಆಚರಿಸಲಾಗುತ್ತದೆ. ಈ ದಿನವು ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡುವ ಮತ್ತು ಶಾಂತಿ ಮತ್ತು ಸಾಮರಸ್ಯ ಉತ್ತೇಜಿಸುವ ಮಹತ್ವವನ್ನು ಎತ್ತಿ ತೋರಿಸುತ್ತದೆ ಎಂದು ನಗರದ ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲ ಪ್ರೊ. ಡಾ. ರಘುನಾಥ್ ಕೆ. ಎಸ್. ಹೇಳಿದ್ದಾರೆ.ಕಾಲೇಜಿನಲ್ಲಿ ಎನ್ನೆಸೆಸ್ ಘಟಕ ಆಯೋಜಿಸಿದ್ದ ಭಯೋತ್ಪಾದನ ವಿರೋಧಿ ದಿನದ ಕಾರ್ಯಕ್ರಮದಲ್ಲಿ ಅದರ ಮಹತ್ವ ತಿಳಿಸಿದರು. ರಾಷ್ಟ್ರೀಯ ಸೇವಾ ಯೋಜನಾ ಘಟಕದ ಕಾರ್ಯದರ್ಶಿ ಅಶೋಕ ಆರ್. ’ಭಯೋತ್ಪಾದನಾ ವಿರೋಧಿ ದಿನದ ಪ್ರತಿಜ್ಞಾ ವಿದಿ ಬೋಧಿಸಿದರು.‘ಅಹಿಂಸೆ ಹಾಗೂ ಸಹನೆಗೆ ಹೆಸರಾದ ನಮ್ಮ ರಾಷ್ಟ್ರದ ಭವ್ಯ ಪರಂಪರೆಯಲ್ಲಿ ದೃಢ ವಿಶ್ವಾಸವುಳ್ಳ ಭಾರತದ ಪ್ರಜೆಗಳಾದ ನಾವು ಎಲ್ಲಾ ಬಗೆಯ ಭಯೋತ್ಪಾದನೆ ಮತ್ತು ಹಿಂಸೆಯನ್ನು ನಮ್ಮೆಲ್ಲ ಶಕ್ತಿ ಸಾಮರ್ಥ್ಯದಿಂದ ಎದುರಿಸುತ್ತೇವೆ ಎಂದು ಪ್ರತಿಜ್ಞೆ ಮಾಡುತ್ತೇವೆ ’ ಎಂದರು.ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಪ್ರೊ. ಸುರೇಖಾ ಕೆ, ಐಕ್ಯೂಎಸಿಯ ಸಂಚಾಲಕಿ, ಡಾ. ಜಯಮೋಲ್ ಪಿ.ಎಸ್., ಪ್ರಾದ್ಯಾಪಕ ಡಾ. ಪ್ರೀತಿ ಹರೀಶ್ ರಾಜ್, ಪ್ರೊ. ಈರಪ್ಪ ಎಸ್. ಮೇದಾರ್, ಪ್ರೊ. ಚೈತ್ರಾ ಕುಮಾರಿ ಎ, ರೆಯಾನ್ ಫರ್ನಾಂಡಿಸ್ ಹಾಗೂ ಗ್ರಂಥಪಾಲಕ ಸದಾಶಿವ ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ಎನ್ನೆಸೆಸ್ ಕಾರ್ಯಕ್ರಮಾಧಿಕಾರಿಗಳಾದ ಡಾ. ಸಿ. ಬಿ. ನವೀನ್ ಚಂದ್ರ ಹಾಗೂ ಅಮೋಘ ಗಾಡ್ಕರ್ ಸಂಯೋಜಿಸಿದರು. ರೆಡ್ ಕ್ರಾಸ್ ಕಾರ್ಯದಶಿ ಬಸವರಾಜ್ ತೆಗ್ಗಿನಮನೆ ಉಪಸ್ಥಿತರಿದ್ದರು.