ಕೆ. ಹೊಸಕೋಟೆ ಹೋಬಳಿ ಅಡಿಬೈಲು ಬೆಟ್ಟದ ಮೇಲಿರುವ ಮುಜರಾಯಿ ಇಲಾಖೆಗೆ ಸೇರಿದ ಆಡಿಬೈಲು ಶ್ರೀ ರಂಗನಾಥ ಸ್ವಾಮಿ ದೇವಾಲಯದಲ್ಲಿ ವೈಕುಂಠ ಏಕಾದಶಿ ಅಂಗವಾಗಿ ವಿಶೇಷ ಪೂಜಾ ವಿಧಿವಿಧಾನಗಳು ಜರುಗಿದವು. ಧನುರ್ಮಾಸದಲ್ಲಿ ಭಗವಂತ ನಿದ್ರಾ ಸಮಯದಿಂದ ಎಚ್ಚರಗೊಂಡು ಏಕಾದಶಿ ದಿನ ದಕ್ಷಿಣಾಯಣದಿಂದ ಉತ್ತರಾಯಣ ಪುಣ್ಯಕ್ಷೇತ್ರಕ್ಕೆ ಬರುತ್ತಾನೆ. ಆದ್ದರಿಂದ ಈ ದಿನದಂದು ವೈಕುಂಠ ಏಕಾದಶಿ ಆಚರಣೆ ಮಾಡಲಾಗುತ್ತದೆ. ಧನುರ್ಮಾಸದಲ್ಲಿ ಏಕಾದಶಿ ದಿನ ಭಗವಂತನಿಗೆ ಉಗೇ ನೈವೇದ್ಯ ನೀಡಿ ನಾರಾಯಣ, ಗೋವಿಂದ ಎಂದು ನಾಮಸ್ಮರಣೆ ಮಾಡುವುದರಿಂದ ಪೂರ್ವ ಜನ್ಮದ ಪಾಪ ಪರಿಹಾರವಾಗುತ್ತದೆ ಎಂದು ಋಷಿಮುನಿಗಳು ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಆಲೂರು

ವೈಕುಂಠ ಏಕಾದಶಿಯ ಪ್ರಯುಕ್ತ ತಾಲೂಕಿನ ಅಡಿಬೈಲು ರಂಗನಾಥ ಸ್ವಾಮಿ, ಪಾಳ್ಯದ ಲಕ್ಷ್ಮಿ ಜನಾರ್ದನ ಸ್ವಾಮಿ, ಹಳೆಆಲೂರು ಹಾಗೂ ಮರಸು ಗ್ರಾಮದ ರಂಗನಾಥ ಸ್ವಾಮಿ ದೇವಾಲಯಗಳಲ್ಲಿ ವಿಶೇಷ ಪೂಜೆ ಆಯೋಜಿಸಲಾಗಿತ್ತು.

ಕೆ. ಹೊಸಕೋಟೆ ಹೋಬಳಿ ಅಡಿಬೈಲು ಬೆಟ್ಟದ ಮೇಲಿರುವ ಮುಜರಾಯಿ ಇಲಾಖೆಗೆ ಸೇರಿದ ಆಡಿಬೈಲು ಶ್ರೀ ರಂಗನಾಥ ಸ್ವಾಮಿ ದೇವಾಲಯದಲ್ಲಿ ವೈಕುಂಠ ಏಕಾದಶಿ ಅಂಗವಾಗಿ ವಿಶೇಷ ಪೂಜಾ ವಿಧಿವಿಧಾನಗಳು ಜರುಗಿದವು. ಧನುರ್ಮಾಸದಲ್ಲಿ ಭಗವಂತ ನಿದ್ರಾ ಸಮಯದಿಂದ ಎಚ್ಚರಗೊಂಡು ಏಕಾದಶಿ ದಿನ ದಕ್ಷಿಣಾಯಣದಿಂದ ಉತ್ತರಾಯಣ ಪುಣ್ಯಕ್ಷೇತ್ರಕ್ಕೆ ಬರುತ್ತಾನೆ. ಆದ್ದರಿಂದ ಈ ದಿನದಂದು ವೈಕುಂಠ ಏಕಾದಶಿ ಆಚರಣೆ ಮಾಡಲಾಗುತ್ತದೆ. ಧನುರ್ಮಾಸದಲ್ಲಿ ಏಕಾದಶಿ ದಿನ ಭಗವಂತನಿಗೆ ಉಗೇ ನೈವೇದ್ಯ ನೀಡಿ ನಾರಾಯಣ, ಗೋವಿಂದ ಎಂದು ನಾಮಸ್ಮರಣೆ ಮಾಡುವುದರಿಂದ ಪೂರ್ವ ಜನ್ಮದ ಪಾಪ ಪರಿಹಾರವಾಗುತ್ತದೆ ಎಂದು ಋಷಿಮುನಿಗಳು ಹೇಳಿದ್ದಾರೆ. ಆದ್ದರಿಂದ ದೇವರ ದರ್ಶನ ನಂತರ ವೈಕುಂಠ ದ್ವಾರದ ಮೂಲಕ ಹಾದು ಹೋದರೆ ಪಾಪ ಪರಿಹಾರ ಆಗುತ್ತದೆ ಎಂದು ಅರ್ಚಕ ಲಕ್ಷ್ಮೀನಾರಾಯಣ ತಿಳಿಸಿದರು.

ಕಾಡಾನೆ ಹಾವಳಿ ಪ್ರದೇಶವಾದರೂ ಬೆಟ್ಟದ ಮೇಲಿರುವ ದೇವಾಲಯದಲ್ಲಿ ಸೋಮವಾರ ರಾತ್ರಿಯಿಂದಲೇ ಅರ್ಚಕರು ಪೂಜಾ ಕೈಂಕರ್ಯ ತಯಾರಿ ನಡೆಸಿದರು.

ಮಂಗಳವಾರ ಬೆಳಗ್ಗೆ ಶ್ರೀ ರಂಗನಾಥ ಸ್ವಾಮಿ ಅಡ್ಡೆ ದೇವರ ಉತ್ಸವದ ನಂತರ ಕಳಸ ಪೂಜಿಸಿ ಅರ್ಚಕರು ತಲೆ ಮೇಲೆ ಹೊತ್ತು ಮೂಲ ದೇವಸ್ಥಾನಕ್ಕೆ ಪ್ರದಕ್ಷಣೆ ಸಲ್ಲಿಸಿ ವೈಕುಂಠ ದ್ವಾರದ ಮೂಲಕ ಪ್ರವೇಶ ಮಾಡಿದರು. ನಂತರ ನೆರೆದಿದ್ದ ಭಕ್ತರು ಪ್ರವೇಶ ಮಾಡಿದರು.

ತಹಸೀಲ್ದಾರ್‌ ಎಚ್. ಮಲ್ಲಿಕಾರ್ಜುನ್ ಅವರು ಬೆಳಗ್ಗೆಯೇ ದೇವಸ್ಥಾನಕ್ಕೆ ಬಂದು ವಿಶೇಷ ಪೂಜೆ ಸಲ್ಲಿಸಿ ವೈಕುಂಠ ದ್ವಾರದ ಮೂಲಕ ಪ್ರವೇಶ ಮಾಡಿ ದೇವರ ಆಶೀರ್ವಾದ ಪಡೆದು ಪ್ರಸಾದ ಸ್ವೀಕರಿಸಿದರು.

ದೇವಸ್ಥಾನದ ಉಸ್ತುವಾರಿ ಸಮಿತಿ ಸದಸ್ಯರಾದ ಕೆ.ವಿ.ಉಮೇಶ್, ವೆಂಕಟೇಶ್, ತಿಮ್ಮೇಗೌಡ ,ದೇವರಾಜು, ಚಂದ್ರಶೆಟ್ಟಿ, ಧರ್ಮರಾಜು, ಕೆ.ಎನ್. ಧರ್ಮಪ್ಪ, ಜಯಪ್ಪ, ರಂಗೇಗೌಡ, ವಿಶ್ವಾಸ್, ವೆಂಕಟೇಶ್, ಅಜ್ಜೇಗೌಡ,ತನುಗೌಡ, ಶಿವರಾಮು, ಮಲ್ಲಿಕಾರ್ಜುನ್, ಪುಟ್ಟರಾಜೇಗೌಡ ನೇತೃತ್ವ ವಹಿಸಿದ್ದರು. ಅರ್ಚಕರಾದ ನಾರಾಯಣಯ್ಯ, ಲಕ್ಷ್ಮೀನಾರಾಯಣ, ಕೃಷ್ಣಮೂರ್ತಿ, ಸುಬ್ಬಯ್ಯ, ಪದ್ಮರಾಜು, ಪುರುಷೋತ್ತಮ, ಪ್ರಕಾಶ, ರಾಜು, ಮೂರ್ತಿ, ಶಾಂತರಾಜು, ಲೋಕೇಶ್, ಮನೋಜ್ ದೇವರ ಅಲಂಕಾರ ಮತ್ತು ವೈಕುಂಠ ದ್ವಾರ ನಿರ್ಮಾಣ ಮಾಡಿದರು. ನೆರೆದಿದ್ದ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಯಿತು.