ದೇವಸ್ಥಾನದಿಂದ ಪ್ರಾರಂಭಗೊಂಡ ಉತ್ಸವ ಸುಕಂದ ಕಟ್ಟೆ ಪ್ರಾಣದೇವರ ದೇವಸ್ಥಾನದವರಿಗೂ ಜರುಗಿತು.
ಗಂಗಾವತಿ: ನಗರದ ವಿವಿಧ ದೇವಸ್ಥಾನಗಳಲ್ಲಿ ವೈಕುಂಠ ಏಕಾದಶಿ ವೃತಾಚರಣೆ ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿದವು.
ಜಯನಗರದ ಸತ್ಯನಾರಾಯಣ ಪೇಟೆಯಲ್ಲಿರುವ ಸತ್ಯನಾರಾಯಣ ದೇವಸ್ಥಾನದಲ್ಲಿ ಸತ್ಯನಾರಾಯಣಸ್ವಾಮಿಗೆ ವಿಶೇಷ ತುಳಸಿ ಅಲಂಕಾರ ಹಾಗೂ ಶ್ರೀರಾಘವೇಂದ್ರಸ್ವಾಮಿಗಳ ವೃಂದಾವನಕ್ಕೆ ವಿಶೇಷ ಅಲಂಕಾರ ಮಾಡಲಾಗಿತ್ತು. ದೇಗುಲದ ಉತ್ತರ ದ್ವಾರದಲ್ಲಿ ವೈಕುಂಠ ದ್ವಾರ ಬಾಗಿಲನ್ನು ತೆರಯಲಾಗಿತ್ತು,ಅದೇ ಸ್ಥಳದಲ್ಲಿ ವೆಂಕಟೇಶ್ವರ ಸ್ವಾಮಿಯ ಕಾಣಿಕೆ ಹುಂಡಿ ನಿರ್ಮಿಸಲಾಗಿತ್ತು. ಭಕ್ತರು ಆಗಮಿಸಿ ದರ್ಶನ ಪಡೆದರು. ಬೆಳಗ್ಗೆ ಮಹಿಳಾ ಭಜನಾ ಮಂಡಳಿ ಸದಸ್ಯರಿಂದ ಗ್ರಾಮ ಪ್ರದಕ್ಷಣೆ ಹಾಗೂ ಲಕ್ಷ್ಮೀ ಶೋಭಾನ ಪಾರಾಯಣ ನಡೆಯಿತು.
ಈ ವೇಳೆ ಪಂ.ವಾದಿರಾಜಚಾರ ಕಲ್ಮಂಗಿ, ಶ್ರೀಧರ ಆಚಾರ ರಾಜಪುರೋಹಿತ, ವಿಜೇಂದ್ರಚಾರ, ರಾಘವೇಂದ್ರ ಮೇಗೂರು, ಬಿಂದು ಸೇರಿದಂತೆ ವಿವಿಧ ಭಕ್ತರು ಭಾಗವಹಿಸಿದ್ದರು.ಉತ್ಸವ: ನಗರದ ವೆಂಕಟೇಶ್ವರ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ನಿಮಿತ್ತ ವೆಂಕಟೇಶ್ವರ ಸ್ವಾಮಿಯ ಉತ್ಸವ ಸಂಭ್ರಮದಿಂದ ಜರುಗಿತು.
ದೇವಸ್ಥಾನದಿಂದ ಪ್ರಾರಂಭಗೊಂಡ ಉತ್ಸವ ಸುಕಂದ ಕಟ್ಟೆ ಪ್ರಾಣದೇವರ ದೇವಸ್ಥಾನದವರಿಗೂ ಜರುಗಿತು. ವೆಂಕಟೇಶ್ವರ ಸ್ವಾಮಿಗೆ ವಿಶೇಷ ಅಲಂಕಾರ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.ಪಂಪಾನಗರದ ಪಾಂಡುರಂಗ ದೇವಸ್ಥಾನದಲ್ಲಿ ಪಾಂಡುರಂಗ ರುಕ್ಮೀಣಿ ದೇವಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು, ಭಜನೆ, ಸಂಕೀರ್ತನೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.