ಜನಾರ್ದನ ರೆಡ್ಡಿ ಕ್ಷಮೆ ಕೇಳುವಂತೆ ವಾಲ್ಮೀಕಿ ಸಮುದಾಯದ ಆಗ್ರಹ

| Published : Jan 26 2025, 01:33 AM IST

ಸಾರಾಂಶ

ನಮ್ಮ ಸಮಾಜದ ನಾಯಕನಿಗೆ ಅನ್ಯಾಯವಾದರೆ ಪಕ್ಷಾತೀತವಾಗಿ ಹೋರಾಟ ಮಾಡಲಾಗುವುದು, ಜನಾರ್ದನ ರೆಡ್ಡಿ ‌ನಾಯಕ ಸಮಾಜದ ಜನರ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಚೇಳೂರು

ಮಾಜಿ ಸಚಿವ ಶ್ರೀರಾಮುಲು ಅವರ ವಿರುದ್ಧ ಮಾತನಾಡುತ್ತಿರುವ ಶಾಸಕ ಜನಾರ್ದನ ರೆಡ್ಡಿ ಸಮುದಾಯದ ಕ್ಷೇಮೆ ಕೇಳಲಿ,ಇಲ್ಲದಿದ್ದರೆ ಅವರ ವಿರುದ್ಧ ರಾಜ್ಯಾದ್ಯಂತ ಚಳವಳಿ ರೂಪಿಸುವುದಾಗಿ ವಾಲ್ಮೀಕಿ ಸಮುದಾಯದ ಚೇಳೂರು ತಾಲೂಕಿನ ಮುಖಂಡರು ಎಚ್ಚರಿಕೆ ನೀಡಿದ್ದಾರೆ. ತಾಲೂಕಿನ ಪ್ರವಾಸಿ ಮಂದಿರದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮುದಾಯದ ಮುಖಂಡರು, ನಮ್ಮ ಸಮಾಜದ ನಾಯಕನಿಗೆ ಅನ್ಯಾಯವಾದರೆ ಪಕ್ಷಾತೀತವಾಗಿ ಹೋರಾಟ ಮಾಡಲಾಗುವುದು, ಜನಾರ್ದನ ರೆಡ್ಡಿ ‌ನಾಯಕ ಸಮಾಜದ ಜನರ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದರು. ಮಿಂಚಿನಹಳ್ಳಿ ನರಸಿಂಹ(ಬಳ್ಳಾರಿ) ಮಾತನಾಡಿ, ಜನಾರ್ದನ ರೆಡ್ಡಿ ಕ್ಷಮೆ ಕೇಳಬೇಕು, ಇಲ್ಲದಿದ್ದರೆ ರಾಜ್ಯಾದ್ಯಂತ ಚಳವಳಿ ರೂಪಿಸುತ್ತೇವೆ. ಶ್ರೀರಾಮುಲು ಅವರಿಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರೇ ಬೆಂಬಲ ಸೂಚಿಸಿದ್ದಾರೆ. ಶ್ರೀರಾಮುಲು ಮನಸ್ಥಿತಿ ಏನು, ರೆಡ್ಡಿ ಮನಸ್ಥಿತಿ ಏನು ಎಂಬುದು ಪಕ್ಷಕ್ಕೂ ಗೊತ್ತಾಗಿದೆ. ನಾವು ರಾಮುಲು ಪರವಾಗಿ ಇರುತ್ತೇವೆ ಎಂದರು. ಶ್ರೀರಾಮುಲು ಸ್ವಾಭಿಮಾನಿ ಬಳಗ ಮುಖಂಡರು ಇದ್ದರು.