ಫೆ. 8, 9ರಂದು ವಾಲ್ಮೀಕಿ ಜಾತ್ರೆ

| Published : Dec 29 2024, 01:19 AM IST

ಸಾರಾಂಶ

ಕಲಘಟಗಿ ತಾಲೂಕಿನಲ್ಲಿ ಜಾತ್ರೆ ಕುರಿತು ಜಾಗೃತಿ ಮೂಡಿಸುವ ಮೂಲಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಲಾಗುತ್ತಿದೆ. ಸಮಾಜದ ಸಾಮಾಜಿಕ, ಆರ್ಥಿಕ, ರಾಜಕೀಯ, ಶೈಕ್ಷಣಿಕ ಅಭಿವೃದ್ಧಿಗೆ ಈ ಜಾತ್ರೆಯ ಮೂಲಕ ಸಮಾಜವನ್ನು ಸಂಘಟಿಸಲಾಗುತ್ತಿದೆ.

ಕಲಘಟಗಿ:

ಹರಿಹರ ತಾಲೂಕಿನ ರಾಜನಹಳ್ಳಿಯಲ್ಲಿ ಫೆ. 8, 9ರಂದು ನಡೆಯಲಿರುವ ವಾಲ್ಮೀಕಿ ಜಾತ್ರೆಯಲ್ಲಿ ಸಮಾಜ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳುವ ಮೂಲಕ ಜಾತ್ರೆಯನ್ನು ಯಶಸ್ವಿಗೊಳಿಸಬೇಕು ಎಂದು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸಾನಂದಪುರಿ ಸ್ವಾಮೀಜಿ ಹೇಳಿದರು.

ಪಟ್ಟಣದ ಹನ್ನೆರಡು ಮಠದಲ್ಲಿ ವಾಲ್ಮೀಕಿ ಜಾತ್ರೆ ಹಿನ್ನೆಲೆಯಲ್ಲಿ ವಾಲ್ಮೀಕಿ ಸಮುದಾಯ ಸಂಘಟನೆ ಪೂರ್ವಭಾವಿ ಸಭೆಯಲ್ಲಿ ಜಾತ್ರಾ ಕಾರ್ಯಕ್ರಮದ ಪೋಸ್ಟರ್‌ ಬಿಡುಗಡೆಗೊಳಿಸಿ ಮಾತನಾಡಿದರು.

ತಾಲೂಕಿನಲ್ಲಿ ಜಾತ್ರೆ ಕುರಿತು ಜಾಗೃತಿ ಮೂಡಿಸುವ ಮೂಲಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಲಾಗುತ್ತಿದೆ. ಸಮಾಜದ ಸಾಮಾಜಿಕ, ಆರ್ಥಿಕ, ರಾಜಕೀಯ, ಶೈಕ್ಷಣಿಕ ಅಭಿವೃದ್ಧಿಗೆ ಈ ಜಾತ್ರೆಯ ಮೂಲಕ ಸಮಾಜವನ್ನು ಸಂಘಟಿಸಲಾಗುತ್ತಿದೆ. ಎಂದರು. ಜಾತ್ರೆಯಲ್ಲಿ ಲಿಂ. ಜಗದ್ಗುರು ಪುಣ್ಯಾನಂದಪುರಿ ಶ್ರೀಗಳ ಪುಣ್ಯಾರಾಧನೆ ನಡೆಯಲಿದೆ ಎಂದರು.

ಇದೇ ವೇಳೆ ಸಿದ್ದಪ್ಪ ತಳವಾರ, ಭೀಮಣ್ಣ ಬ್ಯಾಡರಕೊಪ್ಪ, ನಾಗಪ್ಪ ಕನಕಪ್ಪನವರ, ಫಕೀರೇಶ ಅಪ್ಪಣ್ಣವರ, ಸಹದೇವ ಬೆಳಗಾವಿ, ರಾಮಣ್ಣ ವಾಲಿಕಾರ, ಬಸಪ್ಪ ಬಾಲಪ್ಪನವರ, ಬಸವರಾಜ್ ಹೊಂಕಣದವರ, ಯಲ್ಲಪ್ಪ ಮೇಲಿನಮನಿ, ಬಸವರಾಜ ಮಾದರ, ಸಾತಪ್ಪ ಮೈತ್ರಿ, ಹನುಮಂತ ಹರಿಜನ ಉಪಸ್ಥಿತರಿದ್ದರು.