ಸಾರಾಂಶ
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ ಬುಡಕಟ್ಟು ಸಮುದಾಯದಲ್ಲಿ ಜನಿಸಿದ ಮಹರ್ಷಿ ವಾಲ್ಮೀಕಿ ರಾಮಾಯಣ ಮಹಾಕಾವ್ಯ ರಚಿಸುವ ಮೂಲಕ ಜಗತ್ತಿಗೆ ವಿಶಿಷ್ಟ ಕೊಡುಗೆ ನೀಡಿದರು. ಇಂತಹ ಮಹನೀಯರನ್ನು ಒಂದು ಸಮುದಾಯಕ್ಕೆ ಸೀಮಿತಗೊಳಿದೇ ರಾಷ್ಟ್ರೀಯ ಧಾರ್ಮಿಕ, ಭಾವೈಕತ್ಯೆಯ ನಾಯಕರನ್ನಾಗಿ ಕಾಣುವ ಮೂಲಕ ಅವರ ತತ್ಪಾದರ್ಶ ಅಳವಡಿಸಿಕೊಂಡು ಗೌರವಿಸುವಂತಾಗಬೇಕು ಎಂದು ಶಾಸಕ ಹಾಗೂ ಕೆಎಸ್‌ಡಿಎಲ್ ಅಧ್ಯಕ್ಷ ಸಿ.ಎಸ್.ನಾಡಗೌಡ(ಅಪ್ಪಾಜಿ) ಹೇಳಿದರು.
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಬುಡಕಟ್ಟು ಸಮುದಾಯದಲ್ಲಿ ಜನಿಸಿದ ಮಹರ್ಷಿ ವಾಲ್ಮೀಕಿ ರಾಮಾಯಣ ಮಹಾಕಾವ್ಯ ರಚಿಸುವ ಮೂಲಕ ಜಗತ್ತಿಗೆ ವಿಶಿಷ್ಟ ಕೊಡುಗೆ ನೀಡಿದರು. ಇಂತಹ ಮಹನೀಯರನ್ನು ಒಂದು ಸಮುದಾಯಕ್ಕೆ ಸೀಮಿತಗೊಳಿದೇ ರಾಷ್ಟ್ರೀಯ ಧಾರ್ಮಿಕ, ಭಾವೈಕತ್ಯೆಯ ನಾಯಕರನ್ನಾಗಿ ಕಾಣುವ ಮೂಲಕ ಅವರ ತತ್ಪಾದರ್ಶ ಅಳವಡಿಸಿಕೊಂಡು ಗೌರವಿಸುವಂತಾಗಬೇಕು ಎಂದು ಶಾಸಕ ಹಾಗೂ ಕೆಎಸ್‌ಡಿಎಲ್ ಅಧ್ಯಕ್ಷ ಸಿ.ಎಸ್.ನಾಡಗೌಡ(ಅಪ್ಪಾಜಿ) ಹೇಳಿದರು.ಪಟ್ಟಣದ ತಹಸೀಲ್ದಾರ್ ಕಚೇರಿಯ ಮೈದಾನದಲ್ಲಿ ತಾಲೂಕು ಆಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು. ಇಂದು ನಾವು ಹಿಂದೂ ಎಂದು ಹೇಳಿಕೊಳ್ಳುವವರು ಮಹರ್ಷಿ ವಾಲ್ಮೀಕಿ ಇಲ್ಲದೇ ಇದ್ದಿದ್ದರೇ ನಾವೇಲ್ಲ ಹಿಂದೂಗಳು ಎಲ್ಲಿರುತ್ತಿದ್ದೇವು ಎಂಬುದನ್ನು ಅರ್ಥೈಸಿಕೊಳ್ಳಬೇಕು. ಅಂದಿನ ಕಾಲದಲ್ಲಿ ರಾಜಭಾರ ಮಾಡುವವರಿಗೆ ಪುರೋಹಿತರು ಮಾತ್ರ ಸಂಸ್ಕೃತಾಭ್ಯಾಸ ಮಾಡುವ ಕಾಲಘಟದಲ್ಲಿ ವಾಲ್ಮೀಕಿ ಸಂಸ್ಕೃತಾಭ್ಯಾಸ ಮಾಡಿ ಹಿಂದೂ ಧರ್ಮದ ಪ್ರಮುಖ ಗ್ರಂಥಗಳಲ್ಲಿ ಒಂದಾದ ರಾಮಾಯಣದ ಹಿಂದೂ ಮಹಾಕಾವ್ಯವನ್ನು ಬರೆದು ಪ್ರಸಿದ್ಧರಾಗಿದ್ದಾರೆ. ಇದು ಭಗವಾನ್ ವಿಷ್ಣುವಿನ ಎಂಟು ಅವತಾರಗಳ ಕಥೆ ಹೇಳುತ್ತದೆ ಎಂದರು.ರಾಮಾಯಣ ಮಹಾಕಾವ್ಯದಲ್ಲಿ ಮಾತೃದೇವೋಭವ, ಪಿತೃದೇವೋಭವ, ಆಚಾರ್ಯದೇವೋಭವ, ಅತಿಥಿದೇವೋಭವದಂತಹ ಮೌಲ್ಯಗಳನ್ನು ಎತ್ತಿ ಹಿಡಿಯಲಾಗಿದೆ. ಮಮತೆ, ಸಮತೆ, ಭ್ರಾತೃತ್ವ, ತ್ಯಾಗ, ದೇಶಪ್ರೇಮ ಅಳಿಲು ಸೇವೆ, ಪಿತೃವಾಕ್ಯ ಪರಿಪಾಲನೆ ಮುಂತಾದ ಸಾಮಾಜಿಕ ಮೌಲ್ಯಗಳನ್ನು ಪ್ರತಿಪಾದಿಸಲಾಗಿದೆ. ಮಹರ್ಷಿ ವಾಲ್ಮೀಕಿ ಸೇರಿದಂತೆ ಇಂದಿನ ಅನೇಕ ರಾಜಕೀಯ ಮುಖಂಡರು, ಸಾಹಿತಿಗಳು, ಚಲನಚಿತ್ರ ನಾಯಕರು, ಅಧಿಕಾರಿಗಳು ವಾಲ್ಮೀಕಿ ಜನಾಂಗದವರಾಗಿ ರಾಜಕೀಯವಾಗಿ ಶೈಕ್ಷಣಿಕವಾಗಿ ಮುಂದುವರೆದು ಬಂದಿದ್ದಾರೆ. ಅಂತಹ ಜನಾಂಗವರು ರಾಜಕೀಯದಲ್ಲಿ ಕಾಲಕಳೆದು ಹೋಗುವ ಬದಲು ರಾಜಕಾರಣ ಬಂದಾಗ ರಾಜಕಾರಣ ಮಾಡಬೇಕು. ಉಳಿದ ದಿನಗಳಲ್ಲಿ ಸಹೋದರತೆಯಿಂದ ಜೀವನ ನಡೆಸುವ ಮೂಲಕ ಉತ್ತಮ ಸಂಸ್ಕಾರ, ಶಿಕ್ಷಣವಂತ ಸಮಾಜ ಕಟ್ಟುವಲ್ಲಿ ಮುಂದಾಗಬೇಕು ಎಂದು ಹೇಳಿದರು.ಪುರಸಭೆ ವ್ಯಾಪ್ತಿಯ ಸರ್ಕಾರಿ ಜಾಗ ಗುರ್ತಿಸಲು ಅಧಿಕಾರಿಗಳಿಗೆ ಸೂಚಿಸಲಾಗುತ್ತದೆ. ಜತೆಗೆ ಪುರಸಭೆ ಸರ್ವ ಸಾಮಾನ್ಯ ಸಭೆಯಲ್ಲಿ ನಾನೇ ಭಾಗವಹಿಸಿ, ನಿವೇಶನಕ್ಕಾಗಿ ಠರಾವಿಗೆ ಮಂಜೂರಾತಿ ನೀಡುವ ಮೂಲಕ ವಿಶೇಷ ಅನುದಾನ ಬಿಡುಗಡೆಗೊಳಿಸಿ, ಒಂದು ವರ್ಷದೊಳಗೆ ಸುಸಜ್ಜಿತ ವಾಲ್ಮೀಕಿ ಭವನ ನಿರ್ಮಿಸಲಾಗುವುದು ಎಂದು ಭರವಸೆ ನೀಡಿದರು. ಈ ವೇಳೆ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಸಾಹಿತಿ ಪ್ರಕಾಶ ನರಗುಂದ ಉಪನ್ಯಾಸ ನೀಡಿದರು.ತಹಸೀಲ್ದಾರ್ ಕೀರ್ತಿ ಚಾಲಕ, ತಾಪಂ ಇಒ ವೆಂಕಟೇಶ ವಂದಾಲ, ಪಿಎಸ್‌ಐ ಸಂಜಯಕುಮಾರ ತಿಪ್ಪಾರೆಡ್ಡಿ, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ವಾಲ್ಮೀಕಿ ಸಮಾಜದ ಅಧ್ಯಕ್ಷ ಬಲ್ಲಪ್ಪ ನಾಯಕಮಕ್ಕಳ, ಬಿಇಒ ಬಿ.ಎಸ್.ಸಾವಳಗಿ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಯಲ್ಲಪ್ಪ ನಾಯಕಮಕ್ಕಳ, ವೈ.ಎಚ್.ವಿಜಯಕರ, ಗೋಪಿ ಮಡಿವಾಳರ, ರಾಜೇಂದ್ರ ರಾಯಗೊಂಡ, ತಿಪ್ಪಣ್ಣ ದೊಡಮನಿ, ಬಾಪೂರಾಯ ದೇಸಾಯಿ ಸೇರಿ ಅನೇಕರು ಇದ್ದರು. ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಬಸಂತಿ ಮಠ ಪ್ರಾಸ್ತಾವಿಕವಾಗಿ ಮಾತನಾಡಿದರು, ಶಿಕ್ಷಕ ಟಿ.ಡಿ.ಲಮಾಣಿ ನಿರೂಪಿಸಿದರು, ಸಂಗಮೇಶ ಶಿವಣಗಿ ಪ್ರಾರ್ಥಿಸಿದರು.