ಸಾರಾಂಶ
ಕನ್ನಡಪ್ರಭ ವಾರ್ತೆ ಸಿಂದಗಿ ಬದಲಾವಣೆ ಜಗದ ನಿಯಮ ಅನ್ನುವಂತೆ ಒಬ್ಬ ಬೇಡ ಕುಲದಲ್ಲಿ ಜನಿಸಿದ ರತ್ನಾಕರ ಬೇಟೆಗಾರರಾಗಿ, ದರೋಡೆಕೊರರಾಗಿದ್ದ ವಾಲ್ಮೀಕಿ ನಾರದ ಮುನಿಗಳ ಮಾತಿಗೆ ಕಟ್ಟುಬಿದ್ದು ೧೨ ವರ್ಷ ರಾಮ ನಾಮ ಜಪಿಸಿ ರಾಮಾಯಣ ಕೃತಿಗೆ ಕಾರಣಿಕರ್ತರಾಗಿ ಇಡೀ ಜಗತ್ತಿಗೆ ರಾಮ, ಸೀತೆಯರನ್ನು ಪರಿಚಯಿಸಿದ ಮಹಾನ್ ವ್ಯಕ್ತಿ ಎಂದು ಸರ್ಕಾರಿ ಪ.ಪೂ ಕಾಲೇಜಿನ ಉಪನ್ಯಾಸಕ ಶಶಿಧರ ಅವಟಿ ಹೇಳಿದರು.
ಕನ್ನಡಪ್ರಭ ವಾರ್ತೆ ಸಿಂದಗಿ
ಬದಲಾವಣೆ ಜಗದ ನಿಯಮ ಅನ್ನುವಂತೆ ಒಬ್ಬ ಬೇಡ ಕುಲದಲ್ಲಿ ಜನಿಸಿದ ರತ್ನಾಕರ ಬೇಟೆಗಾರರಾಗಿ, ದರೋಡೆಕೊರರಾಗಿದ್ದ ವಾಲ್ಮೀಕಿ ನಾರದ ಮುನಿಗಳ ಮಾತಿಗೆ ಕಟ್ಟುಬಿದ್ದು ೧೨ ವರ್ಷ ರಾಮ ನಾಮ ಜಪಿಸಿ ರಾಮಾಯಣ ಕೃತಿಗೆ ಕಾರಣಿಕರ್ತರಾಗಿ ಇಡೀ ಜಗತ್ತಿಗೆ ರಾಮ, ಸೀತೆಯರನ್ನು ಪರಿಚಯಿಸಿದ ಮಹಾನ್ ವ್ಯಕ್ತಿ ಎಂದು ಸರ್ಕಾರಿ ಪ.ಪೂ ಕಾಲೇಜಿನ ಉಪನ್ಯಾಸಕ ಶಶಿಧರ ಅವಟಿ ಹೇಳಿದರು. ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದಲ್ಲಿ ತಾಲೂಕು ಆಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವವದಲ್ಲಿ ಉಪನ್ಯಾಸ ನೀಡಿದರು. ವಾಲ್ಮಿಕಿ ಅನ್ನುವದು ಒಂದು ಹೆಸರಾಗದೇ ಒಂದು ಶಕ್ತಿಯಾಗಿದೆ. ವಾಲ್ಮಿಕಿ, ವ್ಯಾಸ, ಡಾ.ಅಂಬೇಡ್ಕರ ಅವರು ದಲಿತ ಕುಟುಂಬದಲ್ಲಿ ಹುಟ್ಟಿದರು ಕೂಡ ದೇಶಕ್ಕೆ ಗ್ರಂಥ ಬರೆದು ದೇಶದ ಚರಿತ್ರೆಯನ್ನೇ ಬದಲಾವಣೆ ಮಾಡಿದ್ದಾರೆ. ರಾಮಾಯಣ ಗ್ರಂಥವನ್ನು ಇಡೀ ಜಗತ್ತಿಗೆ ಪರಿಚಯಿಸಿದವರು ಮಹರ್ಷಿ ವಾಲ್ಮೀಕಿ ಎಂದರು.ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ, ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ ಪ್ರದೀಪಕುಮಾರ ಹಿರೇಮಠ, ತಾಪಂ ಅಧಿಕಾರಿ ರಾಮು ಅಗ್ನಿ, ವಾಲ್ಮೀಕಿ ಸಮಾಜದ ತಾಲೂಕು ಅಧ್ಯಕ್ಷ ಸಿದ್ದಲಿಂಗ ನಾಯ್ಕೋಡಿ ಮಾತನಾಡಿದರು. ಲಿಂಬೆ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಅಶೋಕ ಅಲ್ಲಾಪುರ, ಪುರಸಭೆ ಉಪಾಧ್ಯಕ್ಷ ರಾಜಣ್ಣಿ ನಾರಾಯಣಕರ, ಬಿಇಒ ಮಹಾಂತೇಶ ಯಡ್ರಾಮಿ, ಸಮಾಜ ಕಲ್ಯಾಣಾಧಿಕಾರಿ ಭವಾನಿ ಪಾಟೀಲ ವೇದಿಕೆ ಮೇಲಿದ್ದರು. ದಸಂಸ ಜಿಲ್ಲಾ ಸಂಚಾಲಕ ವೈ.ಸಿ.ಮಯೂರ, ವಾಲ್ಮೀಕಿ ಸಮಾಜದ ಜಿಲ್ಲಾಧ್ಯಕ್ಷ ಶರಣಗೌಡ ಪಾಟೀಲ, ರೈತ ಸಂಘದ ಉತ್ತರ ವಲಯ ಅಧ್ಯಕ್ಷ ಪೀರು ಕೆರೂರ, ಈರಣ್ಣ ಕುರಿ, ಪುರಸಭೆ ಸದಸ್ಯ ಸಂದೀಪ ಚೌರ, ಪ್ರತಿನಿಧಿ ಶರಣಪ್ಪ ಸುಲ್ಪಿ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಶಿಕ್ಷಕ ಸಾಹೇಬಗೌಡ ಬಿರಾದಾರ ನಿರೂಪಿಸಿದರು. ಆರ್.ಎಸ್.ಬನ್ನೇಟ್ಟಿ ವಂದಿಸಿದರು.