ವಾಲ್ಮೀಕಿ ನಮ್ಮೆಲ್ಲರಿಗೂ ಆದರ್ಶಪ್ರಾಯ: ಜಗದೀಶ್

| Published : Oct 09 2025, 02:00 AM IST

ವಾಲ್ಮೀಕಿ ನಮ್ಮೆಲ್ಲರಿಗೂ ಆದರ್ಶಪ್ರಾಯ: ಜಗದೀಶ್
Share this Article
  • FB
  • TW
  • Linkdin
  • Email

ಸಾರಾಂಶ

ಜಗತ್ತಿನ ಮೊದಲ ಶ್ರೇಷ್ಠ ಕವಿ ಮಹರ್ಷಿ ವಾಲ್ಮೀಕಿ ನಮ್ಮೆಲ್ಲರಿಗೂ ಆದರ್ಶ ಎಂದು ಮುಖಂಡರಾದ ಕರೆ ಮಾದೇನಹಳ್ಳಿ ಜಗದೀಶ್ ರವರು ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಶಿರಾ

ಜಗತ್ತಿನ ಮೊದಲ ಶ್ರೇಷ್ಠ ಕವಿ ಮಹರ್ಷಿ ವಾಲ್ಮೀಕಿ ನಮ್ಮೆಲ್ಲರಿಗೂ ಆದರ್ಶ ಎಂದು ಮುಖಂಡರಾದ ಕರೆ ಮಾದೇನಹಳ್ಳಿ ಜಗದೀಶ್ ರವರು ಅಭಿಪ್ರಾಯಪಟ್ಟರು.

ಅವರು ತಾಲೂಕು ಬುಕ್ಕಾಪಟ್ಟಣ ಹೋಬಳಿಯ ಕರೆ ಮಾದೇನಹಳ್ಳಿ ಗ್ರಾಮದಲ್ಲಿ ಆಯೋಜಿಸಲಾಗಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಕುರಿತು ಅವರು ಮಾತನಾಡಿದರು. ಕರೆ ಮಾದೇನಹಳ್ಳಿ ಗ್ರಾಮದಲ್ಲಿ ಎಲ್ಲಾ ಪುಣ್ಯ ಪುರುಷರ ಜನ್ಮ ದಿನಾಚರಣೆಯನ್ನು ಎಲ್ಲಾ ಜಾತಿ ಜನಾಂಗದವರು ಒಟ್ಟಿಗೆ ಸೇರಿ ಆಚರಿಸುತ್ತಿದ್ದೇವೆ, ಜಾತಿಭೇದ ನಮ್ಮಲ್ಲಿ ಇಲ್ಲವಾಗಿದೆ. ಮಡಿವಾಳ ಮಾಚಿದೇವ ಜಯಂತಿ, ಬಸವೇಶ್ವರ ಜಯಂತಿ, ಅಂಬೇಡ್ಕರ್ ಜಯಂತಿ, ಸೇರಿದಂತೆ ಮುಸ್ಲಿಮರೆ ಇಲ್ಲದಿದ್ದರೂ ಬಾಬಯ್ಯನ ಮೊಹರಂ ಉತ್ಸವ ನಮ್ಮ ಊರಿನಲ್ಲಿ ಆಚರಿಸುತ್ತಿದ್ದು ಸರ್ವ ಜನಾಂಗದ ಶಾಂತಿಯ ತೋಟ ನಮ್ಮ ಊರಾಗಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ರಾಮಲಿಂಗಪುರ ಗ್ರಾಮ ಪಂಚಾಯತಿ ಅಧ್ಯಕ್ಷರು ಉಪಾಧ್ಯಕ್ಷರು ಎಲ್ಲಾ ಸದಸ್ಯರು ಪಿಡಿಒ ವಿ ಎಸ್ ಎಸ್ ಎನ್ ಅಧ್ಯಕ್ಷರು ಉಪಾಧ್ಯಕ್ಷರು ನಿರ್ದೇಶಕರು ಕಾರ್ಯದರ್ಶಿಗಳು ಕರೆ ಮಾದೇನಹಳ್ಳಿ ಶಾಲೆಯ ಮುಖ್ಯೋಪಾಧ್ಯಾಯರು ಶಿಕ್ಷಕರುಗಳು ಸೇರಿದಂತೆ ಗ್ರಾಮಸ್ಥರು ಸಾರ್ವಜನಿಕರು ಅಕ್ಕಪಕ್ಕ ಗ್ರಾಮಗಳ ಗ್ರಾಮಸ್ಥರು ಎಲ್ಲ ಪಕ್ಷಗಳ ಮುಖಂಡರು ಕಾರ್ಯಕ್ರಮದಲ್ಲಿ ಹಾಜರಿದ್ದರು.