ಸಾರಾಂಶ
ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿಪಟ್ಟಣದ ಬಿಎಲ್‌ಡಿಇ ಸಂಸ್ಥೆಯ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಿಸಲಾಯಿತು. ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎ.ವ್ಹಿ.ಸೂರ್ಯವಂಶಿ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗೌರವ ಅರ್ಪಿಸಿದರು. ಈ ವೇಳೆ ಮಾತನಾಡಿದ ಅವರು, ಮಹರ್ಷಿ ವಾಲ್ಮೀಕಿಯು ಸಾಮಾನ್ಯ ಸ್ಥಿತಿಯಿಂದ ಬೆಳೆದು ಮಹಾನ್ ಕವಿಯಾಗಿ ಜಗತ್ತಿಗೆ ಸರ್ವಶ್ರೇಷ್ಠ ಮಹಾಕಾವ್ಯ ರಾಮಾಯಣವನ್ನು ನೀಡುವ ಮೂಲಕ ದಾರ್ಶನಿಕರಾಗಿದ್ದಾರೆ.
ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ಪಟ್ಟಣದ ಬಿಎಲ್‌ಡಿಇ ಸಂಸ್ಥೆಯ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಿಸಲಾಯಿತು. ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎ.ವ್ಹಿ.ಸೂರ್ಯವಂಶಿ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗೌರವ ಅರ್ಪಿಸಿದರು. ಈ ವೇಳೆ ಮಾತನಾಡಿದ ಅವರು, ಮಹರ್ಷಿ ವಾಲ್ಮೀಕಿಯು ಸಾಮಾನ್ಯ ಸ್ಥಿತಿಯಿಂದ ಬೆಳೆದು ಮಹಾನ್ ಕವಿಯಾಗಿ ಜಗತ್ತಿಗೆ ಸರ್ವಶ್ರೇಷ್ಠ ಮಹಾಕಾವ್ಯ ರಾಮಾಯಣವನ್ನು ನೀಡುವ ಮೂಲಕ ದಾರ್ಶನಿಕರಾಗಿದ್ದಾರೆ. ಸಮಾಜಕ್ಕೆ ಆದರ್ಶಪ್ರಾಯವಾಗಬೇಕಾದರೆ ಇಂತಹ ಮಹಾನ್ ನಾಯಕರ ಜೀವನ ಸಂದೇಶ ಅರಿತು ನಡೆಯಬೇಕು ಎಂದು ಹೇಳಿದರು.ಈ ಸಂದರ್ಭದಲ್ಲಿ ಡಾ.ವೈ.ಬಿ.ನಾಯಕ, ಡಾ.ಬಿ.ಎನ್.ಸಾಲವಾಡಗಿ, ಪ್ರೊ.ಎಂ.ಕೆ.ಯಾದವ, ಪ್ರೊ.ದಿಲೀಪಕುಮಾರ, ಪ್ರೊ.ಪಿ.ಎಸ್.ನಾಟೀಕಾರ, ಡಾ.ಶ್ರೀನಿವಾಸ ದೊಡಮನಿ, ಪ್ರೊ.ಜಯರಾಂ ರೆಡ್ಡಿ, ಪ್ರೊ.ಎಂ.ಆರ್.ಮಮದಾಪುರ, ಡಾ.ಎಸ್.ಬಿ.ಜನಗೊಂಡ, ಬೋಧಕೇತರ ಸಿಬ್ಬಂದಿ ಇದ್ದರು.